Advertisement

ಹಿಮವಿಲ್ಲದ ಶಿಮ್ಲಾ!

06:00 AM Sep 16, 2018 | |

ಶಿಮ್ಲಾಕ್ಕೆ !  ಈ ಚಳಿಯಲ್ಲಿ ! ‘ ಎಲ್ಲರಿಗೂ ಅಚ್ಚರಿ. ಆದರೆ, ನಾವು ಹೊರಟಿದ್ದೇ ಚಳಿಯನ್ನು ಸವಿಯುವುದಕ್ಕೆ. ಹಿಮದಲ್ಲಿ ಆಡುವುದಕ್ಕೆ. ದೆಹಲಿಯಿಂದ ಶಿಮ್ಲಾಕ್ಕೆ ವಿಮಾನವೇನೋ ಇದೆ.  ಆದರೆ, ಒಂದು ದಿನವೂ ನಿಮಗೆ ವ್ಯರ್ಥವಾಗಬಾರದೆಂದರೆ, ಗಂಟೆಗಟ್ಟಲೆ ಕಾಯುತ್ತ ಕುಳಿತುಕೊಳ್ಳುವ ಬೇಸರ ಬೇಡವೆಂದರೆ ನೀವು ಹೋಗಬೇಕಾದದ್ದು ರೈಲು-ಕಾರುಗಳಲ್ಲೇ. 

Advertisement

ಕಾಲ್ಕಾದಿಂದ ಶಿಮ್ಲಾಕ್ಕೆ ಹೋಗುವ “ಟಾಯ್‌ ಟ್ರೇನ್‌’ ಹಿಡಿಯಬೇಕೆಂದರೆ ನೀವು ಮೊದಲು ದೆಹಲಿಯಿಂದ ಕಾಲ್ಕಾಕ್ಕೆ ಕಾರಿನಲ್ಲೋ ಅಥವಾ ರೈಲಿನಲ್ಲೇ ಹೋಗಿ ತಲುಪಬೇಕು. ತುಂಬ ಸಮಯವಿದ್ದರೆ ಕಾಲ್ಕಾದ ಬಳಿಯ ರಿಸಾರ್ಟ್‌ ಗಳಲ್ಲಿಯೂ ತಂಗಿ ಒಂದು ದಿನ ಸುತ್ತಮುತ್ತ ಓಡಾಡಿಯೇ ನಂತರ ಮುಂದುವರಿಯಬಹುದು.  ಕಾಲ್ಕಾ ಬಳಿಯ “ಟಿಂಬರ್‌ ಟ್ರೇಲ್‌’ ಎಂಬ ರಿಸಾರ್ಟ್‌ನಲ್ಲಿ ಮನಸ್ಸಿಗೆ ಮುದ ನೀಡುವ ಸಾಕಷ್ಟು ಉದ್ದದ “ರೋಪ್‌ವೇ’ ಕೂಡ ಇದೆ. ಕಾಲ್ಕಾಗೆ ದೆಹಲಿಯಿಂದ ಹೋಗುವ ದಾರಿಯಲ್ಲಿಯೂ ಬೇಕಾದಷ್ಟು ಢಾಭಾಗಳು, ಸಾಸಿವೆ ಹೊಲಗಳ ನೋಟಗಳು, ಪ್ರಯಾಣದ ಬೇಸರ ಕಳೆಯುವಂತೆ ಮಾಡುತ್ತವೆ.  

ಕಾಲ್ಕಾದಿಂದ ಶಿಮ್ಲಾಕ್ಕೆ ಹೋಗುವ “ಟಾಯ್‌ ಟ್ರೇನ್‌’ ನಿಜಕ್ಕೂ ಮಕ್ಕಳ ರೈಲೇ. ನಿಧಾನ.  ನಾವೇ ಕೂಗಿಕೊಂಡು ಓಡಿದರೆ ಇದಕ್ಕಿಂತ ಬೇಗ ಶಿಮ್ಲಾ ಮುಟಿ¤àವಿ ಅಂತ ಅನ್ನಿಸುತ್ತೆ.  ಶಿವಾಲಿಕ್‌ ಎಕ್ಸ್‌ಪ್ರೆಸ್‌, ಹಿಮಾಲಯನ್‌ ಕ್ವೀನ್‌ ಎಂದೆಲ್ಲ ಕರೆಸಿಕೊಳ್ಳುವ ಈ “ಟಾಯ್‌ ಟ್ರೇನ್‌’ ಯುನೆಸ್ಕೋ ಹೆರಿಟೇಜ್‌ಗೆ ಸೇರಿದ್ದು. ಹಾಗಾಗಿ, ಎಷ್ಟೇ “ನಿಧಾನ’ ಎಂದರೂ ನೋಡಲೇಬೇಕಾದ್ದು.  ಶಿಮ್ಲಾ ತಲುಪಲು ಈ ರೈಲಿನಲ್ಲಿ 5-6 ಗಂಟೆಗಳು ಬೇಕು.  ಮಧ್ಯೆ ಮಧ್ಯೆ ಸುರಂಗಗಳು, ಒಟ್ಟು 103 ಸುರಂಗಗಳು. ಸುತ್ತ ಪ್ರಕೃತಿ.  

ಹಿಂದಿನ ಶಿಮ್ಲಾ ಅನುಭವಗಳಿಂದ ನಾವು ಕಲಿತ ಪಾಠ ಚಳಿ ತಡೆಯಲು ಬೇಕಾದದ್ದು ಬೆಚ್ಚನೆ ಬಟ್ಟೆ ಎಂಬುದು. ಹಿಂದೆ “ಕುಫ್ರಿ’ಯಲ್ಲಿ ಚಳಿ ತಡೆಯಲಾಗದೆ ನಾನು ಮತ್ತೆ ಮತ್ತೆ ಹೀಟರ್‌ ಬಳಿ ಹೋಗಿ ಕೈ ಬೆಚ್ಚಗೆ ಮಾಡಿಕೊಳ್ಳುತ್ತಿದ್ದುದನ್ನು ನೋಡಿ ಅಲ್ಲಿಯ ಮ್ಯಾನೇಜರ್‌ ಹೇಳಿದ್ದ, “ಚಳಿ ಚಳಿ ಎಂದು ಬಿಸಿಗೆ ಮೈಯೊಡ್ಡುವುದರಿಂದ ಮತ್ತೆ ಚಳಿ ಹೆಚ್ಚಿಸುತ್ತದೆ. ಬದಲು ಬೆಚ್ಚಗೆ, ಪದರಗಳಲ್ಲಿ ಮೈಯನ್ನು ಚಳಿಯಿಂದ ರಕ್ಷಿಸಿಕೊಳ್ಳಬೇಕು. ಆಗ ಎಂಥ ಚಳಿಯಲ್ಲಿಯೂ ನೀವು ಆರಾಮವಾಗಿರಬಲ್ಲಿರಿ’. ಆಗ ಆತನ ಮೇಲೆ ಸಿಟ್ಟು ಬಂತಾದರೂ ಅನುಭವದಿಂದ ಅದು ನಿಜವೆಂದು ಕಂಡುಕೊಂಡಿದ್ದೆ
ವು. 

ಶುಷ್ಕ ಋತು
ಈ ಬಾರಿ ಶಿಮ್ಲಾದಲ್ಲಿ “ಡ್ರೈ ಸೀಸನ್‌’.  ಹಿಮವೂ ಇಲ್ಲ, ನೀರೂ ಇಲ್ಲ. ಹಾಗಾಗಿ, ಹೋಟೆಲಿನಲ್ಲಿ ಟಬ್ಬುಗಳಿಗೂ ನೀರಿನ ಬರ. ಎಲ್ಲೆಲ್ಲಿಯೂ “ನೀರು ಪೋಲು ಮಾಡಬೇಡಿ’ ಎಂಬ ಬೇಡಿಕೆಯ ಫ‌ಲಕಗಳು. ನಮ್ಮಂತೆಯೇ ಹಿಮದಲ್ಲಿ ಆಡಲು ಬಂದ ಪ್ರವಾಸಿಗರು, ಹಿಮದಲ್ಲಿಯೇ ನಡೆಯುವ ಆಟಗಳಿಂದ ದುಡ್ಡು ಮಾಡುವ ಜನರು ಎಲ್ಲರಿಗೂ ನಿರಾಸೆ.  ಕುಫ್ರಿಯಲ್ಲಿ ಕುದುರೆ ಮೇಲೇರಿ, ಮೇಲೇರಿ ಹೋಗುವಾಗ ಮಣ್ಣು-ಲದ್ದಿ ಮಿಶ್ರವಾಗಿ ಹಸಿರು ಮಿಶ್ರಿತ ಕೆಂಪು ಬಣ್ಣದ ಧೂಳು ಹಾರುತ್ತಿತ್ತು.  ಹಿಮದ ಬಿಳಿ ಬಣ್ಣವನ್ನು ಎಲ್ಲರೂ ಮಿಸ್‌ ಮಾಡುವಂತಾಗಿತ್ತು.  ಕುಫ್ರಿಯ ಮೈದಾನದಲ್ಲಿ ಹಿಮವಿರದಿದ್ದರೂ ಯಾಕ್‌ಗಳಿಗೆ, ಹಿಮಾಚಲದ ವೇಷಭೂಷಣದ ಫೋಟೋಗಳಿಗೆ ಬರವಿರಲಿಲ್ಲ.  “ಸ್ನೋ ಇಲ್ವಲ್ಲಾ!’ ಎಂದದ್ದಕ್ಕೆ ಒಬ್ಬ ಹುಡುಗ “ಅಭೀ ಆಶಾ ಹೈ!  ಶಾಯದ್‌ ಇಸ್‌ ಹಫೆ¤à ಮೇ ಬಫ್ì ಗಿರೇಗಾ!’ ಎಂದ. 

Advertisement

ಸರಿ, ಮೂರು ದಿನ ಶಿಮ್ಲಾದಲ್ಲಿ ಕಳೆಯಬೇಕಿತ್ತು. ಸುತ್ತಮುತ್ತ ಏನೇನಿದೆ ಎಂದು ಹುಡುಕಿದ್ದೆವು.  ಶಿಮ್ಲಾದ ಮುಖ್ಯರಸ್ತೆ ಮಾಲ್‌ ರೋಡ್‌. ಇಲ್ಲಿ ವಾಹನಗಳು ಬರುವ ಹಾಗಿಲ್ಲ.  ಉದ್ದಕ್ಕೂ ಅಂಗಡಿಗಳು. ಹಿಮಾಚಲದ ಬ್ರಿಟಿಷ್‌ ಮಿಶ್ರಿತ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ರೀತಿಯ ಫ‌ಲಕಗಳು. ನೂರು ರೂಪಾಯಿಗೆ ಒಂದು ಪೇಪರ್‌ ಪ್ಲೇಟ್‌ನಲ್ಲಿ ಪೇರಲೆ-ಸ್ಟ್ರಾಬೆರ್ರಿ- ರಾಸ್‌³ಬೆರ್ರಿ- ಕಿವಿ-ಸೇಬು ಹಣ್ಣುಗಳನ್ನು ಅಡ್ಡಲಾಗಿ ಕತ್ತರಿಸಿ, ಆಲಂಕಾರಿಕವಾಗಿ ಇಟ್ಟು ಕೊಡುತ್ತಾರೆ. ತಿನ್ನುತ್ತ ಹೊರಟರೆ ಈ ರಸ್ತೆಯೊಂದರಲ್ಲೇ ಗಂಟೆಗಟ್ಟಲೆ ಕಳೆಯಬಹುದು. ಹೀಗೆ ನಡೆಯುವಾಗ ಕಣ್ಣಿಗೆ ಬಿದ್ದದ್ದು ಶಿಮ್ಲಾದ ವ್ಯಾಕ್ಸ್‌ ಮ್ಯೂಸಿಯಂ!
ಮೇಣದ ಮೂರ್ತಿಗಳು
ಮೊದಲು ಮೇಡಂ ಟ್ಯುಸಾಡ್ಸ್‌ ಒಬ್ಬಳದ್ದೇ “ವ್ಯಾಕ್ಸ್‌ ಮ್ಯೂಸಿಯಂ’ ಎಂದುಕೊಂಡಿದ್ದೆವು.  ಲಂಡನ್‌ನಲ್ಲಿ ದುಡ್ಡು ತೆತ್ತು ನೋಡಿ, ಹಾಂಕಾಂಗ್‌ನಲ್ಲಿ ಹೊರಗಡೆಯೇ ನಿಂತು ಬ್ರೂಸ್‌ಲೀಯ ಜೊತೆ ಫೋಟೋ ತೆಗೆದುಕೊಂಡಿದ್ದೆವು.  ಇಲ್ಲಿ ನಮ್ಮ ಬಳಿ ಬೇಕಾದಷ್ಟು ಸಮಯವಿತ್ತು.  ದುಡೂx ಕಡಿಮೆ! ಲಂಡನ್‌ನಲ್ಲಿ ಸುಮಾರು 6 ರಿಂದ 7 ಸಾವಿರ ರೂಪಾಯಿ; ಇಲ್ಲಿ 250 ರೂಪಾಯಿ. ಸರಿ ಒಳಹೊಕ್ಕೆವು. ಚಿಕ್ಕ ಮ್ಯೂಸಿಯಂ. ಆದರೆ, ಮೇಣದ ಗೊಂಬೆಗಳು ಮಕ್ಕಳಿಗಂತೂ ತುಂಬಾ ಖುಷಿ ಕೊಟ್ಟವು.  ಮೋದಿ ಜೊತೆ, ಒಬಾಮಾ ಜೊತೆ ನಿಲ್ಲುವ ಮಜಾ!  

ಶಿಮ್ಲಾದಲ್ಲಿ ಕೆಲವು ಟೂರಿಸ್ಟ್‌ ಕಂಪೆನಿಗಳು “ಟೆಂಪಲ್‌ ಟೂರ್‌’ ಎಂದು ಶಿಮ್ಲಾ ಸುತ್ತಮುತ್ತ ಇರುವ ದೇವಸ್ಥಾನಗಳದ್ದೇ ಒಂದು ದಿನದ ಪ್ರವಾಸ ಮಾಡಿಸುತ್ತವೆ. ಗುಡ್ಡದ ಮೇಲೆ ಹತ್ತಿ, ಗುಹೆಯ ಒಳ ಹೋಗಿ ಕಾಲ್ಕಾಜೀ (ಕಾಳಿಕಾ ದೇವಿ ಇವರ ಬಾಯಲ್ಲಿ ಕಾಲ್ಕಾಜಿಯಾಗುತ್ತಾಳೆ) ಯ ದರ್ಶನ ಮಾಡಬಹುದು. ನಡಿಗೆಯಲ್ಲಿಯೇ ಜಾಖೂ ದೇವಸ್ಥಾನ’ಕ್ಕೆ ಹೋಗಿ “ಟ್ರೆಡ್‌ಮಿಲ್‌’ ಪರೀಕ್ಷೆ ಮುಗಿಸಿ ಹೃದಯಸಾಮರ್ಥ್ಯವನ್ನು ಪರೀಕ್ಷಿಸಬಹುದು !  ಬೇಡ ಎಂದರೆ ರೋಪ್‌ವೇಯ ಕೇಬಲ್‌ ಕಾರ್‌ನಲ್ಲಿ ಹೋಗಿ ಜಾಖೂ ದೇವಸ್ಥಾನವಿರುವ ಬೆಟ್ಟದಲ್ಲಿಳಿಯಬಹುದು. ಇಲ್ಲಿ  ಹನುಮಂತನ 108 ಅಡಿ ಉದ್ದದ, 1.5 ಕೋಟಿ ವೆಚ್ಚದ ಅಗಾಧ ಮೂರ್ತಿಯಿದೆ. 2,455 ಅಡಿ ಎತ್ತರದಲ್ಲಿರುವ ಪರ್ವತದ ಮೇಲೆ ಈ ದೇವಸ್ಥಾನವಿದೆ.

ಶಿಮ್ಲಾದಲ್ಲಿ ಇರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಅಡ್ವಾನ್ಸ್‌$x ಸ್ಟಡೀಸ್‌ ನೋಡ‌ಲೇಬೇಕಾದ ತಾಣ. ವೈಸ್‌ರಾಯ್‌ ಲಾಡ್ಜ್ ಎಂಬುದು ವೈಸ್‌ರಾಯ್‌ಗಾಗಿ ಕಟ್ಟಲ್ಪಟ್ಟ ಭವ್ಯ ಬಂಗಲೆ. ಭಾರತದ ರಾಷ್ಟ್ರಪತಿಗಳೂ – ಶಿಕ್ಷಕರೂ ಆಗಿದ್ದ ಎಸ್‌. ರಾಧಾಕೃಷ್ಣನ್‌ರಿಂದಾಗಿ ಇದು ರಾಜಕಾರಣಿಗಳ ನಿವಾಸವಾಗಿ ಬದಲಾಗದೇ, ಭಾರತದ ಉನ್ನತ ಸಾಹಿತ್ಯ- ಸಾಂಸ್ಕೃತಿಕ- ಮಾನವಿಕ ವಿಷಯಗಳ ಸಂಶೋಧನಾ ಸಂಸ್ಥೆಯಾಗಿ ಮಾರ್ಪಾಡುಗೊಂಡಿತು.  ಹಿಮವಿರದಿದ್ದರೂ, ಶಿಮ್ಲಾದಲ್ಲಿ ಚಳಿ ಜೋರಾಗಿಯೇ ಇತ್ತು.  

– ಕೆ. ಎಸ್‌. ಪವಿತ್ರಾ

Advertisement

Udayavani is now on Telegram. Click here to join our channel and stay updated with the latest news.

Next