Advertisement

ಪ್ರವಾಸಿಗರ ನಡುಗಿಸಿದ ಹಿಮ: ಹಿಮಾಚಲ ಪ್ರದೇಶ, ಕಾಶ್ಮೀರದಲ್ಲಿ ಸುರಿಯುತ್ತಿದೆ ಹಿಮ ಮಳೆ

10:09 AM Dec 16, 2019 | Team Udayavani |

ಶಿಮ್ಲಾ/ಶ್ರೀನಗರ: ಶಿಮ್ಲಾ, ಮನಾಲಿ, ಡಾಲ್‌ಹೌಸಿ, ಕುಫ್ರಿ ಸೇರಿದಂತೆ ಹಿಮಾಚಲಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಶುಕ್ರವಾರ ರಾತ್ರೋರಾತ್ರಿ ಭಾರೀ ಹಿಮಮಳೆ ಸುರಿಯು ತ್ತಿದ್ದು, ಅನೇಕ ಪ್ರವಾಸಿಗರು ಅತಂತ್ರರಾಗಿದ್ದಾರೆ. ಕುಫ್ರಿಯಲ್ಲಿ ಸಿಲುಕಿಕೊಂಡಿದ್ದ 170 ವಿದ್ಯಾರ್ಥಿ ಗಳನ್ನು ಶನಿವಾರ ಬೆಳಗ್ಗೆ ರಕ್ಷಿಸಲಾಗಿದೆ.

Advertisement

ಈ ಪೈಕಿ 90 ವಿದ್ಯಾರ್ಥಿಗಳು ಮಹಾರಾಷ್ಟ್ರ ದವರಾಗಿದ್ದರೆ, 80 ಮಂದಿ ರಾಜಸ್ಥಾನದವರು. ಅವರು ಸಂಚರಿಸುತ್ತಿದ್ದ ಬಸ್‌ ಕುಫ್ರಿ ಸಮೀಪದ ಫ‌ಗು ಎಂಬಲ್ಲಿ ಸ್ಕಿಡ್‌ ಆದ ಕಾರಣ, ಅವರು ಹಿಮದಲ್ಲೇ ಸಿಲುಕುವಂತಾಗಿತ್ತು. ರಕ್ಷಣಾ ತಂಡ ಕೂಡಲೇ ಆಗಮಿಸಿ 170 ವಿದ್ಯಾರ್ಥಿ ಗಳನ್ನು ರಕ್ಷಿಸಿ, ಸಮೀಪದ ರೆಸಾರ್ಟ್‌ನಲ್ಲಿ ಆಶ್ರಯ ನೀಡಿದೆ ಎಂದು ಎಸ್‌ಪಿ ಒಮಾಪತಿ ಜಮಾÌಲ್‌ ತಿಳಿಸಿದ್ದಾರೆ.

ಶುಕ್ರವಾರ ಸಂಜೆ 5.30ರಿಂದ ಶನಿವಾರ ಬೆಳಗ್ಗೆ 8.30ರವರೆಗೆ ಡಾಲ್‌ಹೌಸಿಯಲ್ಲಿ 60 ಸೆ.ಮೀ. ಹಿಮ ಸುರಿದಿದ್ದು(ರಾಜ್ಯದಲ್ಲೇ ಅತ್ಯಧಿಕ), ಕುಫ್ರಿಯಲ್ಲಿ 20 ಸೆಂ.ಮೀ., ಶಿಮ್ಲಾದಲ್ಲಿ 13 ಸೆ.ಮಿ., ಮನಾಲಿಯಲ್ಲಿ 10 ಸೆ.ಮೀ. ಹಿಮವರ್ಷ ದಾಖಲಾಗಿದೆ ಎಂದು ಶಿಮ್ಲಾ ಹವಾಮಾನ ಇಲಾಖೆ ತಿಳಿಸಿದೆ.

ವೈಷ್ಣೋದೇವಿಗೂ ಹಿಮ ತಡೆ: ಜಮ್ಮು- ಕಾಶ್ಮೀರದ ಪ್ರಸಿದ್ಧ ಗುಹಾಂತರ ದೇವಾಲಯ ಮಾತಾ ವೈಷ್ಣೋದೇವಿಯಲ್ಲೂ ಹಿಮವರ್ಷ ದಿಂದಾಗಿ ಪ್ರವಾಸಿಗರು ಸಂಕಷ್ಟ ಅನುಭವಿಸಿ ದ್ದಾರೆ. ಹೆಲಿಕಾಪ್ಟರ್‌ ಮತ್ತು ರೋಪ್‌ವೇ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಯಾತ್ರಿಗಳಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿ ದ್ದಾರೆ. ಕಣಿವೆ ರಾಜ್ಯದಲ್ಲಿ ಭಾರೀ ಹಿಮವರ್ಷ ಸುರಿಯುತ್ತಿರುವ ಕಾರಣ, ಶ್ರೀನಗರ- ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದ್ದು, ಕಣಿವೆ ರಾಜ್ಯದೊಂದಿಗೆ ಇಡೀ ದೇಶದ ಸಂಪರ್ಕವೇ ಕಡಿತಗೊಂಡಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next