Advertisement

ಮದುವೆಗಾಗಿ ಯೋಧನ ಏರ್‌ ಲಿಫ್ಟ್ : ಗಡಿ ನಿಯಂತ್ರಣಾ ರೇಖೆ ಬಳಿ ವಿಶೇಷ ಘಟನೆ

08:05 PM Apr 28, 2022 | Team Udayavani |

ಶ್ರೀನಗರ: ಇನ್ನೇನು ಕೆಲ ದಿನಗಳಲ್ಲಿ ಹಸೆಮಣೆ ಏರಬೇಕಿರುವ ಯೋಧನನ್ನು ಗಡಿ ಭದ್ರತಾ ಪಡೆಯ ಅಧಿಕಾರಿಗಳು ಏರ್‌ ಲಿಫ್ಟ್ ಮಾಡಿಸಿ, ಮನೆಗೆ ಕಳುಹಿಸಿರುವ ವಿಶೇಷ ಘಟನೆ ಗಡಿ ನಿಯಂತ್ರಣಾ ರೇಖೆ(ಎಲ್‌ಒಸಿ) ಬಳಿ ನಡೆದಿದೆ.

Advertisement

ಒಡಿಶಾ ಮೂಲದ ನಾರಾಯಣ ಬೆಹೆರಾ(30) ಗಡಿ ಭದ್ರತಾ ಪಡೆಯಲ್ಲಿ ಯೋಧರಾಗಿದ್ದು, ಅವರು ಜಮ್ಮು ಮತ್ತು ಕಾಶ್ಮೀರದ ಎಲ್‌ಒಸಿ ಬಳಿ ಸೇವೆಯಲ್ಲಿದ್ದಾರೆ. ಮೇ 2ರಂದು ಅವರ ಊರಿನಲ್ಲಿ ಮದುವೆ ನಿಶ್ಚಯವಾಗಿದೆ. ಆದರೆ ಎಲ್‌ಒಸಿ ಭಾಗದಲ್ಲಿ ಹಿಮವರ್ಷ ಮುಂದುವರಿದಿರುವುದರಿಂದಾಗಿ ಅಲ್ಲಿಂದ ಶ್ರೀನಗರಕ್ಕಿದ್ದ ಭೂ ಮಾರ್ಗ ಮುಚ್ಚಲಾಗಿದೆ. ಈ ವಿಚಾರವಾಗಿ ಇತ್ತೀಚೆಗೆ ನಾರಾಯಣ ಅವರ ತಂದೆ ಅವರ ಯುನಿಟ್‌ನ ಕಮಾಂಡರ್‌ರೊಂದಿಗೆ ಮಾತನಾಡಿ, “ಬಹುಶಃ ನನ್ನ ಮಗ ಅವನ ಮದುವೆಗೆ ಬರುವುದು ಸಾಧ್ಯವಿಲ್ಲ’ ಎನಿಸುತ್ತದೆ ಎಂದು ನೋವು ತೋಡಿಕೊಂಡಿದ್ದರು.

ಈ ವಿಚಾರವನ್ನು ಬಿಎಸ್‌ಎಫ್ ಇನ್‌ಸ್ಪೆಕ್ಟರ್‌ ಜನರಲ್‌ ರಾಜಾ ಬಾಬು ಸಿಂಗ್‌ ಅವರ ಗಮನಕ್ಕೆ ತರಲಾಗಿದೆ. ಅವರು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ತಕ್ಷಣವೇ ನಾರಾಯಣ ಅವರನ್ನು ಸೇನೆಯ ಚೀತಾ ಹೆಲಿಕಾಪ್ಟರ್‌ ಮೂಲಕ ಏರ್‌ಲಿಫ್ಟ್ ಮಾಡಿ ಶ್ರೀನಗರ ತಲುಪಿಸಲು ಆದೇಶಿಸಿದ್ದಾರೆ. ಅದರಂತೆ ಗುರುವಾರ ಬೆಳಗ್ಗೆ ನಾರಾಯಣ ಅವರನ್ನು ಹೆಲಿಕಾಪ್ಟರ್‌ ಮೂಲಕ ಶ್ರೀನಗರ ಸೇರಿಸಲಾಗಿದ್ದು, ಅಲ್ಲಿಂದ ಅವರು ತಮ್ಮೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next