Advertisement

ಈಶಾನ್ಯ ಅಮೆರಿಕ ಮೇಲೆ ಹಿಮ ಬಾಂಬ್‌ : 24 ಸಾವು

10:37 AM Jan 07, 2018 | |

ಅಮೆರಿಕದ ಪೂರ್ವ ಕರಾವಳಿ ಅಕ್ಷರಶಃ ಹೆಪ್ಪುಗಟ್ಟಿದೆ. ಒಂದೇ ಸಮನೆ ಸುರಿಯುತ್ತಿರುವ ಹಿಮದಿಂದಾಗಿ 9 ವರ್ಷದ ಬಾಲಕಿ ಸೇರಿ 24 ಮಂದಿ ಸಾವಿಗೀಡಾಗಿದ್ದಾರೆ. ಮೈನಸ್‌ 40 ಡಿಗ್ರಿ ಸೆಲ್ಶಿಯಸ್‌ಗಿಂತಲೂ ಕಡಿಮೆ ತಾಪಮಾನ ದಾಖಲಾಗಿದ್ದು ಜನ ಮನೆಯಿಂದ ಹೊರಗೆ ಕಾಲಿಟ್ಟರೆ ಅಲ್ಲೇ ಫ್ರೀಜ್‌ ಆಗುವ ಸ್ಥಿತಿ ನಿರ್ಮಾಣವಾಗಿದೆ.

Advertisement

1000c ಮೌಂಟ್‌ ವಾಷಿಂಗ್ಟನ್‌ನ ಶೀತ ಮಾರುತ
1,200 ವಿಮಾನಗಳ ಹಾರಾಟ ಶುಕ್ರವಾರ ದಿಂದಲೇ ಸ್ಥಗಿತ
 31,000 ಕೆರೋಲಿನಾದ ಮನೆಗಳಿಗೆ ವಿದ್ಯುತ್‌ ಸಂಪರ್ಕ ಇಲ್ಲ
1978ರ ಬಳಿಕ ಬೋಸ್ಟನ್‌ನಲ್ಲಿ ಇಂಥ ಪರಿಸ್ಥಿತಿ

ಮೈನಸ್‌ 40 ಡಿಗ್ರಿ  ತಾಪಮಾನ ಹೇಗಿರುತ್ತದೆ?
ಕ್ಷಣ ಮಾತ್ರದಲ್ಲಿ ರಸ್ತೆ ಮುಚ್ಚು ಹೋಗುವಷ್ಟು ಮಂಜು ಸುರಿಯುತ್ತದೆ. ಮನುಷ್ಯರು, ಪ್ರಾಣಿಗಳು ಸೇರಿದಂತೆ ಯಾವುದೇ ಜೀವಿಯ ಚರ್ಮವನ್ನು ಈ ತಾಪಮಾನಕ್ಕೆ ಒಡ್ಡಿದರೆ ಒಂದೆರಡು ನಿಮಿಷಗಳಲ್ಲಿ ಹೆಪ್ಪುಗಟ್ಟುತ್ತದೆ. 

ನದಿಗಳೆಲ್ಲ ಮಂಜುಗಡ್ಡೆಯಾಗಿ ಬದಲಾಗುತ್ತವೆ. ಜಲಪಾತವೂ ಹೆಪ್ಪುಗಟ್ಟುತ್ತದೆ. ಅದೇ ರೀತಿ ಎಲ್ಲಿಯೂ ನೀರು ದ್ರವ ರೂಪದಲ್ಲಿ ಸಿಗುವುದೇ ಇಲ್ಲ. ಕೊತ ಕೊತ ಕುದಿಯುವ ನೀರನ್ನು ಮೇಲಕ್ಕೆ ಎರಚಿದರೂ ನೆಲಕ್ಕೆ ಬೀಳುವ ವೇಳೆಗಾಗಲೇ ಅದು ಮಂಜುಗಡ್ಡೆಯಾಗಿರುತ್ತದೆ. ಕಣ್ಣುಗುಡ್ಡೆಗಳು, ಹಲ್ಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಉಸಿರಾಡುವಾಗ ಮಂಜುಗಡ್ಡೆಯ ಚೂಪಾದ ಹರಳುಗಳೇ ನಿಮ್ಮ ಶ್ವಾಸನಾಳದಲ್ಲಿ ಹಾದು ಹೋದಂತೆ ಅನುಭವವಾಗುತ್ತದೆ.

Advertisement

ಉಸಿರಾಡಲು ಕಷ್ಟವಾಗುತ್ತದೆ ಮಸ್ಸಾಚ್ಯುಸೆಟ್ಸ್‌ ಕಡಲ ತೀರದಲ್ಲಿ ನೂರಾರು ಶಾರ್ಕ್‌ ಮೀನು
ಹಿಮಗಟ್ಟಿ ಸಾವು 

ಮನೆಯ ಹೊರಗೆ ಇದ್ದ ನಾಯಿಗಳು ಮತ್ತು ಇತರ ಸಾಕುಪ್ರಾಣಿಗಳೂ ಮಂಜುಗಟ್ಟಿ ಸಾವು

ಕಾರುಗಳು ಹಿಮದಲ್ಲಿ ಮುಚ್ಚಿ ಕಣ್ಮರೆಯಾಗುವುದನ್ನು ತಪ್ಪಿಸಲು ವಿಂಡ್‌ಶೀಲ್ಡ್‌ ಮತ್ತು ವೈಪರ್‌ಗಳನ್ನು ತೆರೆದಿಟ್ಟ ಮಾಲೀಕರು ಮಸ್ಸಾಚ್ಯುಸೆಟ್ಸ್‌ ತೀರದಲ್ಲಿ ಬಿರುಗಾಳಿ ಮತ್ತು ಹಿಮದ ಅಲೆಗಳಿಂದ ಮನೆಗಳಿಗೆ ಹಾನಿ

 ಬಾಂಬ್‌ ಸೈಕ್ಲೋನ್‌ ಬಳಿಕ ನಗರಗಳ ರಸ್ತೆಗಳು ಐಸ್‌ ಶೀಟ್‌ ಮತ್ತು ಕೊರೆಯುವ ನೀರಿನಿಂದ ಆವೃತ. ಇದರ ದುಷ್ಪರಿಣಾಮ ಹಿಮಕ್ಕಿಂತಲೂ ಹೆಚ್ಚು.

ಬುಧವಾರ ಸಂಭವಿಸಿದ ಸೂಪರ್‌ಮೂನ್‌ ನಿಂದಾಗಿ ಸಮುದ್ರದಲ್ಲಿನ ಉಬ್ಬರ ಇಳಿತ ಹೆಚ್ಚಾಗಿದ್ದೇ ಹಿಮ ಮಾರುತ ಸಾಮಾನ್ಯಕ್ಕಿಂತ ಹೆಚ್ಚಾಗಲು ಕಾರಣ.

Advertisement

Udayavani is now on Telegram. Click here to join our channel and stay updated with the latest news.

Next