Advertisement

ಹಿಮ ಬಾಂಬ್‌: 60 ಸಾವು: ಅಮೆರಿಕದಾದ್ಯಂತ ಜನ ಜೀವನ ಅಸ್ತವ್ಯಸ್ತ; ವಿದ್ಯುತ್‌ ವ್ಯತ್ಯಯ

01:47 AM Dec 28, 2022 | Team Udayavani |

ನ್ಯೂಯಾರ್ಕ್‌: ಕ್ರಿಸ್ಮಸ್‌ ಮತ್ತು ಹೊಸ ವರ್ಷದ ಈ ಸಂದರ್ಭದಲ್ಲಿ ಬಾಂಬ್‌ ಚಂಡಮಾರುತದಿಂದ ಅಮೆರಿಕ ತತ್ತರಿಸಿ ಹೋಗಿದೆ. ಚಂಡಮಾರುತದ ಪರಿಣಾಮ ಅಮೆರಿಕದಲ್ಲಿ ಕನಿಷ್ಠ 60 ಮಂದಿ ಮೃತಪಟ್ಟಿದ್ದಾರೆ.

Advertisement

ಈ ಪೈಕಿ ನ್ಯೂಯಾರ್ಕ್‌ ಒಂದರಲ್ಲೇ 27 ಮಂದಿ ಅಸುನೀಗಿದ್ದಾರೆ. ಅಮೆರಿಕ ಸರಕಾರದ ಪ್ರಕಾರ ಇದೊಂದು “ಶತಮಾನದ ಹಿಮ ದುರಂತ’ ಎಂದು ಬಣ್ಣಿಸಿದೆ.

ಹಿಮದ ಮಳೆಯಿಂದಾಗಿ ರಸ್ತೆಯಲ್ಲಿ ನಿಂತಿರುವ ಕಾರುಗಳು, ಟ್ರಕ್‌ಗಳು, ಬಸ್‌ಗಳ ಸಹಿತ ಇತರ ವಾಹನಗಳು ಹಿಮದಿಂದ ತುಂಬಿ ಹೋಗಿವೆ. ಮನೆಗಳು ಮತ್ತು ಕಟ್ಟಡಗಳ ಛಾವಣಿಗಳು ಹಿಮಚ್ಛಾದಿತವಾಗಿವೆ. ನ್ಯೂಯಾರ್ಕ್‌ ಮತ್ತು ಬಫೆಲೊ ನಗರಗಳಲ್ಲಿ ರಸ್ತೆಯಲ್ಲಿ ತುಂಬಿರುವ ಹಿಮವನ್ನು ತೆರವು ಮಾಡುವ ಕಾರ್ಯ ದಲ್ಲಿ ಸ್ಥಳೀಯ ಪಾಲಿಕೆ ಸಿಬಂದಿ ನಿರತರಾಗಿದ್ದಾರೆ.

ಕಡು ಚಳಿ: ಮೊನಟಾನಾ ಎಂಬಲ್ಲಿ ತಾಪಮಾನ ಮೈನಸ್‌ 45 ಡಿಗ್ರಿ ಸೆಲ್ಸಿಯಸ್‌, ಐಯೋವಾದ ಡೆಸ್‌ ಮಾನಿಸ್‌ನಲ್ಲಿ ತಾಪಮಾನ ಮೈನಸ್‌ 37 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಶತಮಾನದ ಹಿಮ ದುರಂತದಿಂದಾಗಿ ಅಮೆರಿಕದ 20 ಕೋಟಿ ಮಂದಿಗೆ ತೊಂದರೆಯಾಗಿದೆ. ಹಲವು ಪ್ರಾಂತಗಳಲ್ಲಿ ಇನ್ನೂ ವಿದ್ಯುತ್‌ ಪೂರೈಕೆ ವ್ಯತ್ಯಯವಾಗಿದೆ.

ಮುಂದುವರಿದ ರಕ್ಷಣ ಕಾರ್ಯಾಚರಣೆ: ಬಾಂಬ್‌ ಚಂಡಮಾರುತದಿಂದ ಹಾನಿಯಾದ ಪ್ರದೇಶಗಳಲ್ಲಿ ರಕ್ಷಣ ಕಾರ್ಯಾಚರಣೆ ಮುಂದುವರಿದಿದೆ. ನ್ಯೂಯಾರ್ಕ್‌ ಮತ್ತು ಬಫೆಲೊ ನಗರಗಳಲ್ಲಿ ಮೃತದೇಹಗಳನ್ನು ಕಾರಿನಿಂದ ಹೊರತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ನ್ಯೂಯಾರ್ಕ್‌ನ ಕೆಲವು ಪ್ರದೇ ಶಗಳಲ್ಲಿ 23 ಸೆ.ಮೀ. ಹಿಮ ಬಿದ್ದಿದೆ. ಬಫೆಲೊದ ನಯಾಗರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.25 ಮೀ. ಹಿಮ ಬಿದ್ದಿದೆ ಎಂದು ಅಮೆರಿಕ ಹವಾಮಾನ ಇಲಾಖೆ ವರದಿ ಮಾಡಿದೆ.

Advertisement

ವಿಮಾನ ಹಾರಾಟ ರದ್ದು
ಬಾಂಬ್‌ ಚಂಡಮಾರುತದ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಮೆರಿಕದಲ್ಲಿ 15,000 ಹೆಚ್ಚು ವಿಮಾನಗಳ ಸಂಚಾರ ರದ್ದುಗೊಂಡಿದೆ. ಸೋಮವಾರ ಒಂದೇ ದಿನ 3,410 ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ರದ್ದಾಗಿದೆ. ಇದರಿಂದ ಪ್ರವಾಸಿಗರು ಸಂಕಷ್ಟ ಅನುಭವಿಸುತ್ತಿದ್ದು, ವಿಮಾನ ನಿಲ್ದಾಣಗಳಲ್ಲೇ ಠಿಕಾಣಿ ಹೂಡುವಂತಾಗಿದೆ. ಪ್ರಮುಖವಾಗಿ ಅಟ್ಲಾಂಟಾ, ಲಾಸ್‌ ವೇಗಸ್‌, ಸಿಯೇಟಲ್‌, ಬಾಲ್ಟಿಮೊರ್‌, ಡೆನ್ವರ್‌ ಮತ್ತು ಚಿಕಾಗೊ ನಗರಗಳ ದೇಶೀಯ ವಿಮಾನಗಳ ಹಾರಾಟ ರದ್ದುಗೊಂಡಿವೆ. ಚಂಡಮಾರುತದಿಂದ ಹಲವು ನಗರಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಮಲಾ ಹ್ಯಾರಿಸ್‌ ಮನೆಗೆ ವಲಸಿಗರು
ಟೆಕ್ಸಾಸ್‌ನ ನೈಋತ್ಯ ಭಾಗದಿಂದ ಆಗಮಿಸಿರುವ ವಲಸಿಗರು ಬಾಂಬ್‌ ಚಂಡಮಾರುತದ ಹಿನ್ನೆಲೆಯಲ್ಲಿ ಸುರಿಯುತ್ತಿರುವ ನಿರಂ ತರ ಹಿಮದ ಮಳೆಯಿಂದಾಗಿ ಸೂರಿನ ವ್ಯವಸ್ಥೆ ಇಲ್ಲದೇ ಚಳಿಯಲ್ಲಿ ನಡುಗುತ್ತಿದ್ದರು. ರಕ್ಷಣ ಕಾರ್ಯಪಡೆಯ ತಂಡ ಸುಮಾರು 130 ವಲಸಿಗರನ್ನು ಬಸ್‌ ಮೂಲಕ ವಾಷಿಂಗ್ಟನ್‌ನಲ್ಲಿರುವ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಮನೆಗೆ ತಂದು ಬಿಟ್ಟಿದ್ದಾರೆ. ಅವರ ಮನೆಯಲ್ಲೇ ವಲಸಿಗರಿಗೆ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲಾಗಿದೆ.

ಚಂಡಮಾರುತದಿಂದ ಸಾವಿಗೀಡಾದ ಕುಟುಂಬಗಳಿಗೆ ನನ್ನ ಸಂತಾಪಗಳು. ಶೀಘ್ರ ರಕ್ಷಣ ಕಾರ್ಯಾಚರಣೆ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.
-ಜೋ ಬೈಡೆನ್‌, ಅಮೆರಿಕ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next