Advertisement
ನಿಮ್ಮ ಮನೆಯಲ್ಲಿರುವವರ ಗೊರಕೆಯ ಸಮಸ್ಯೆ ನಿಮ್ಮ ನಿದ್ದೆಯನ್ನು ಹಾಳುಮಾಡುತ್ತಿರಬಹುದು. ಅದೆಷ್ಟೋ ಸನ್ನಿವೇಶಗಳಲ್ಲಿ ಈ ಗೊರಕೆಯ ಸಮಸ್ಯೆ ಗಂಡ -ಹೆಂಡತಿಯರ ದಾಂಪತ್ಯ ಬದುಕಿನ ಮೇಲೆ ಪ್ರಭಾವ ಬೇರುವ ಮೂಲಕ ದಂಪತಿಗಳು ಪರಸ್ಪರ ದೂರವಾಗುವ ಸನ್ನೆವೇಶಗಳನ್ನು ನಾವು ಕೇಳಿದ್ದೇವೆ. ಆದರೆ ಗೊರಕೆಯಂತಹ ಸಮಸ್ಯೆ ಹೊಂದಿರುವ ವ್ಯಕ್ತಿಯನ್ನು ದೂರ ತಳ್ಳುವುದರ ಬದಲಾಗಿ ಕೆಲವು ಮನೆಮದ್ದುಗಳನ್ನು ಬಳಸುವ ಮೂಲಕ ಈ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
Related Articles
Advertisement
ಆಲ್ಕೊಹಾಲ್ ತ್ಯೆಜಿಸಿ
ಆಲ್ಕೊಹಾಲ್ ನಿದ್ರಾಜನಕವಾಗಿ ಕಾರ್ಯನಿರ್ವಹಿಸುತ್ತದೆ, ನಿಮ್ಮ ಗಂಟಲಿನ ಹಿಂಭಾಗದಲ್ಲಿರುವ ಸ್ನಾಯುಗಳ ಮೇಲೆ ಉದ್ವೇಗವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ನಿಮ್ಮ ಗೊರಕೆಯ ಸಮಸ್ಯೆ ಹೆಚ್ಚಾಗುತ್ತದೆ. ತಂಬಾಕು ಹೊಗೆ, ಮತ್ತೊಂದೆಡೆ ಗಂಟಲಿನಲ್ಲಿರುವ ಲೋಳೆಯ ಪೊರೆಗಳನ್ನು ಕೆರಳಿಸಬಹುದು. ಆದ್ದರಿಂದ ಈ ಎರಡನ್ನೂ ನೀವು ಸಂಪೂರ್ಣವಾಗಿ ಬಿಟ್ಟುಬಿಡಲು ಸಾಧ್ಯವಾಗದಿದ್ದರೂ, ನೀವು ಆಲ್ಕೊಹಾಲ್ ಸೇವನೆ ಮತ್ತು ಸಿಗರೇಟ್ ಬಳಕೆ ಮಾಡುವ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳುವುದು ಬಹಳ ಮುಖ್ಯ. ಹೀಗೆ ಮಾಡುವುದರಿಂದ ಕೇವಲ ಗೊರಕೆ ಸಮಸ್ಯೆ ಮಾತ್ರವಲ್ಲದೆ ಆಲ್ಕೊಹಾಲ್ ಸೇವನೆಯಿಂದ ಕಂಡುಬರುವ ಹಲವಾರು ಸಮಸ್ಯೆಗಳಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ,
ಬೆಳ್ಳುಳ್ಳಿಯ ಬಳಕೆ
ಬೆಳ್ಳುಳ್ಳಿಯಲ್ಲಿ ಹಲವಾರು ರೋಗ ನಿರೋಧಕ ಅಂಶಗಳಿದ್ದು, ಹಲವಾರು ಆರೋಗ್ಯದ ಸಮಸ್ಯೆಗಳಿಗೆ ಇದು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ, ಬೆಳ್ಳುಳ್ಳಿಯ ಸೂಕ್ಷ್ಮಜೀವಿಯ ವಿರೋಧಿ ಗುಣಲಕ್ಷಣಗಳು ಮೂಗಿನ ಮಾರ್ಗದಲ್ಲಿರುವ ಲೋಳೆ ತೊಡೆದುಹಾಕಲು ಸಹಾಯ ಮಾಡುತ್ತದೆ. ಬರೀ ಸಾಮಾನ್ಯ ಶೀತದಿಂದಾಗಿ ನೀವು ಗೊರಕೆ ಹೊಡೆಯುತ್ತಿದ್ದರೆ, ಬೆಳ್ಳುಳ್ಳಿ ನಿಮಗೆ ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಹಾಯ ಮಾಡುತ್ತದೆ. ಹಸಿ ಬೆಳ್ಳುಳ್ಳಿ ಮತ್ತು ಲವಂಗವನ್ನು ಅಗಿಯಿರಿ. ನಂತರ ಒಂದು ಲೋಟ ನೀರನ್ನು ಕುಡಿಯಿರಿ. ಮಲಗುವ ಮುನ್ನ ಕನಿಷ್ಠ 20 ರಿಂದ 30 ನಿಮಿಷಗಳಾದರೂ ಇದನ್ನು ಅನುಸರಿಸುವುದು ಉತ್ತಮ.
ಬಿಸಿ ನೀರಿನ ಬಳಕೆ
ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಬಿಸಿ -ಬಸಿಯಾದ ನೀರನ್ನು ಸೇವನೆ ಮಾಡುವುದರಿಂದ ಸಾಮಾನ್ಯ ಶೀತದಿಂದ ಗಂಟಲಿನಲ್ಲಿ ಸಂಗ್ರಹವಾಗಿರುವ ಲೋಳೆಯಂತಹ ಅಂಶ ಕರಗುತ್ತದೆ. ಇದರಿಂದ ಗೊರಕೆ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
ಅರಿಶಿನ ಬಳಕೆ
ಸಾಮಾನ್ಯವಾಗಿ ಎಲ್ಲಾ ವಿಧವಾದ ಆರೋಗ್ಯ ಸಮಸ್ಯೆಗಳಿಗೆ ಅರಶಿನದ ಬಳಕೆ ಅತ್ಯಂತ ಪ್ರಮುಖವಾದ ಮದ್ದಾಗಿ ಕಾರ್ಯನಿರ್ವಹಿಸುತ್ತದೆ. ಇದು ಪ್ರಬಲವಾದ ನಂಜು ನಿರೋಧಕ ಎಂದು ತಿಳಿದುಬಂದಿದೆ. ಇದು ನಿಮ್ಮ ಗೊರಕೆ ಸಮಸ್ಯೆಗೆ ಪರಿಣಾಮಕಾರಿ ಚಿಕಿತ್ಸೆ ನೀಡುತ್ತದೆ. ಒಂದು ಗ್ಲಾಸ್ ಬಿಸಿ ಹಾಲಿಗೆ ಎರಡು ಚಮಚ ತಾಜಾ ಅರಿಶಿನ ಪುಡಿಯನ್ನು ಸೇರಿಸಿ, ಮಲಗುವ ಮುನ್ನ ಬೆರೆಸಿ ಕುಡಿಯಿರಿ. ಹೀಗೆ ಅರಶಿನವನ್ನು ಸೇವನೆ ಮಾಡುವುದರಿಂದ ಸಮಸ್ಯೆಯಿಂದ ಬಹುಬೇಗ ಗುಣಮುಖವಾಗಬಹುದಾಗಿದೆ.
ಏಲಕ್ಕಿ
ಭಾರತೀಯ ಆಹಾರ ಪರಂಪರೆಯಲ್ಲಿ ಹಲವಾರು ಮಸಾಲೆಗಳಿದ್ದು, ಇವುಗಳು ತನ್ನಲ್ಲಿ ಬಹಳಷ್ಟು ಆರೋಗ್ಯಕರ ಅಂಶಗಳನ್ನು ಒಳಗೊಂಡಿದೆ. ಅವುಗಳಲ್ಲಿ ಏಲಕ್ಕಿ ಕೂಡಾ ಒಂದು . ಈ ಮಸಾಲೆ ಅತ್ಯುತ್ತಮ ಎಕ್ಸ್‌ಪೆಕ್ಟೊರೆಂಟ್ ಮತ್ತು ಡಿಕೊಂಜೆಸ್ಟೆಂಟ್ ಆಗಿದೆ. ಇದರಿಂದಾಗಿ ಉಸಿರಾಟದ ಜಾಗದ ಉದ್ದಕ್ಕೂ ಗಾಳಿಯನ್ನು ಸ್ಪಷ್ಟವಾಗಿ ಸಾಗಿಸಲು ಸಹಾಯ ಮಾಡುತ್ತದೆ. ಒಂದು ಲೋಟ ಬೆಚ್ಚಗಿನ ನೀರಿಗೆ ಸುಮಾರು ಒಂದೂವರೆ ಟೀಸ್ಪೂನ್ ಏಲಕ್ಕಿ ಪುಡಿಯನ್ನು ಸೇರಿಸಿ ಮತ್ತು ಮಲಗುವ ಮುನ್ನ ಕನಿಷ್ಠ ಅರ್ಧ ಘಂಟೆಯಾದರೂ ಮುಂಚೆ ಕುಡಿಯಿರಿ.