Advertisement

ಮುರಿದುಬಿದ್ದ ಸ್ನ್ಯಾಪ್ ಡೀಲ್, ಫ್ಲಿಪ್ ಕಾರ್ಟ್ ವಿಲೀನ ಮಾತುಕತೆ 

05:34 PM Jul 31, 2017 | |

ನವದೆಹಲಿ: ತಮ್ಮ ಪ್ರತಿಸ್ಪರ್ಧಿ ಫ್ಲಿಪ್ ಕಾರ್ಟ್ ಜತೆಗಿನ ವಿಲೀನ ಮಾತುಕತೆ ಮುರಿದು ಬಿದ್ದಿರುವುದಾಗಿ ಭಾರತೀಯ ಇ ವಹಿವಾಟಿನ ದಿಗ್ಗಜ ಸಂಸ್ಥೆ  ಗುರ್ಗಾಂವ್ ಮೂಲದ ಸ್ನ್ಪಾಪ್ ಡೀಲ್ ತಿಳಿಸಿದೆ. ತಮ್ಮ ಸಂಸ್ಥೆ ಸ್ವತಂತ್ರವಾಗಿಯೇ ವ್ಯವಹಾರ ನಡೆಸಲಿದೆ ಎಂದು ಹೇಳಿದೆ.

Advertisement

ವಿಲೀನ ಪ್ರಕ್ರಿಯೆಗಾಗಿ ಸ್ನ್ಯಾಪ್ ಡೀಲ್ ಕಳೆದ ಕೆಲವು ತಿಂಗಳಿಂದ ಮಾತುಕತೆ ನಡೆಸುತ್ತಿತ್ತು. ಹಲವಾರು ಆಯ್ಕೆಗಳನ್ನು ನೀಡಲಾಗಿತ್ತು. ಆದರೆ ಇದೀಗ ನಮ್ಮ ಸಂಸ್ಥೆ ಸ್ವತಂತ್ರವಾಗಿ ವಹಿವಾಟು ನಡೆಸಲು ನಿರ್ಧರಿಸಿದೆ. ಅಲ್ಲದೇ ಫ್ಲಿಪ್ ಕಾರ್ಟ್ ಜತೆಗಿನ ವಿಲೀನ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದೆ ಎಂದು ಸ್ನ್ಯಾಪ್ ಡೀಲ್ ವಕ್ತಾರ ಪತ್ರಿಕಾ ಪ್ರಕಟಣೆಯಲ್ಲಿ ಫ್ಲಿಪ್ ಕಾರ್ಟ್ ಹೆಸರನ್ನು ಉಲ್ಲೇಖಿಸಿದೆ ತಿಳಿಸಿದ್ದಾರೆ.

900, 950 ಮಿಲಿಯನ್ ಡಾಲರ್ ಮೊತ್ತಕ್ಕೆ ಸ್ನ್ಯಾಪ್ ಡೀಲ್ ಇ ವಾಣಿಜ್ಯ ಮಾರುಕಟ್ಟೆಯನ್ನು ಫ್ಲಿಪ್ ಕಾರ್ಟ್ ಗೆ ಮಾರಾಟ ಮಾಡಲು ಮಾತುಕತೆ ನಡೆಸಿತ್ತು. ಸ್ನ್ಯಾಪ್ ಡೀಲ್ ನ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಮೊಬೈಲ್ ಪೇಮೆಂಟ್ಸ್ ವ್ಯಾಲೆಟ್ ಪ್ರೊವೈಡರ್ ಫ್ರೀಚಾರ್ಜ್ ಅನ್ನು 385 ಕೋಟಿ ಮೊತ್ತಕ್ಕೆ ಆಕ್ಸಿಸ್ ಬ್ಯಾಂಕ್ ಗೆ ಮಾರಾಟ ಮಾಡಲಾಗುತ್ತಿದೆ ಎಂದು ಸ್ನ್ಯಾಪ್ ಡೀಲ್ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next