ರಾಮನಗರ: ನಗರದ 3ನೇ ವಾರ್ಡ್‌ನ ಗಾಂಧಿ ನಗರ ಬಡಾವಣೆಯ ಮನೆಯೊಂದರ ಎದುರಿನ ಚರಂಡಿಯಲ್ಲಿ 20ಕ್ಕೂ ಹೆಚ್ಚು ಹಾವಿನ ಮರಿಗಳು ಕಾಣಿಸಿಕೊಂಡಿದ್ದು, ನಿವಾಸಿಗಳಲ್ಲಿ ಆತಂಕ ಉಂಟು ಮಾಡಿದೆ.
ಈ ಹಾವುಗಳು ಮಂಡಲ ಜಾತಿಗೆ ಸೇರಿದ ಹಾವಿನ ಮರಿಗಳು ಎನ್ನಲಾಗಿದ್ದು, ಕೆಲ ಮಂದಿ ಅವುಗಳನ್ನು ಕೋಲಿನಿಂದ ಹೊಡೆಯಲು ಮುಂದಾಗಿದ್ದರು. ಆದರೆ, ಅವರನ್ನು ತಡೆದು ಹಾವುಗಳನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.
ತಾಯಿ ಹಾವಿಗಾಗಿ ಸುತ್ತಮುತ್ತಲಿನ ಚರಂಡಿ ಹಾಗೂ ಮತ್ತಿತರ ಕಡೆ ಶೋಧ ಕಾರ್ಯ ನಡೆಸಿದರಾದರೂ ಕಡೆಗೂ ಅದು ಸಿಗಲಿಲ್ಲ. ಮೊದಲಿಗೆ ಇಷ್ಟೊಂದು ಹಾವಿನ ಮರಿಗಳನ್ನು ಕಂಡು ಗಾಂಧಿ ನಗರದ ನಿವಾಸಿಗಳು ಮರಿಗಳ ರಕ್ಷಣೆ ನಂತರ ನಿಟ್ಟುಸಿರು ಬಿಟ್ಟಿದ್ದಾರೆ. ಘಟನೆಯಿಂದ ನೂರಾರು ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದರು.
Advertisement
ಬಡಾವಣೆಯ ಶುದ್ಧ ಕುಡಿಯುವ ನೀರಿನ ಘಟಕದ ಪಕ್ಕದಲ್ಲಿರುವ ಗೌತಮ್ ಎಂಬುವರ ಮನೆ ಎದುರಿನ ಚರಂಡಿಯಲ್ಲಿ 20ಕ್ಕೂ ಹೆಚ್ಚು ಹಾವಿನ ಮರಿಗಳು ಬೆಳಗ್ಗೆ ಗೌತಮ್ ಮನೆ ಮುಂದೆ ಕಾಣಿಸಿಕೊಂಡಿದೆ. ಆತಂಕದಿಂದ ಹುಡುಕಾಡಿದ ನಂತರ ಮೋರಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಮರಿಗಳು ಕಾಣಿಸಿಕೊಂಡಿವೆ. ಉರಗ ತಜ್ಞರು ಹಾಗೂ ಸಾರ್ವಜನಿಕರ ನೆರವಿನಿಂದ ಹಾವಿನ ಮರಿಗಳನ್ನು ಚೀಲ ವೊಂದರಲ್ಲಿ ರಕ್ಷಿಸಲಾಯಿತು.