ನ್ಯೂಜೆರ್ಸಿ : ಫ್ಲೋರಿಡಾದ ಟ್ಯಾಂಪಾದಿಂದ ನ್ಯೂಜೆರ್ಸಿಗೆ ತೆರಳುತ್ತಿದ್ದ ವಿಮಾನದಲ್ಲಿ ಹಾವೊಂದು ಕಂಡು ಪ್ರಯಾಣಿಕರು ಭಯಭೀತರಾದ ಘಟನೆ ನಡೆದಿದೆ. ನೆವಾರ್ಕ್ ಲಿಬರ್ಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ವನ್ಯಜೀವಿ ಇಲಾಖೆ ಮತ್ತು ಪೊಲೀಸರು ಹಾವನ್ನು ಹಿಡಿದು ಕಾಡಿಗೆ ಬಿಟ್ಟ ಬಳಿಕ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಹಾವು ವಿಮಾನದೊಳಗೆ ಹೇಗೆ ಬಂತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಅಮೆರಿಕದ ಮಾಧ್ಯಮಗಳ ಪ್ರಕಾರ, ಬಿಸಿನೆಸ್ ಕ್ಲಾಸ್‌ನಲ್ಲಿದ್ದ ಪ್ರಯಾಣಿಕರು ಮೊದಲು ಹಾವನ್ನು ನೋಡಿ ಕಿರುಚಲು ಪ್ರಾರಂಭಿಸಿದ್ದಾರೆ ಈ ವೇಳೆ ಬಂದ ವಿಮಾನದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಯುನೈಟೆಡ್ ಸಂಸ್ಥೆಗೆ ಸೇರಿದ ವಿಮಾನ ಸಂಖ್ಯೆ 2038ರಲ್ಲಿ ಹಾವು ಕಾಣಿಸಿಕೊಂಡಿದ್ದು , ಹಾವನ್ನು ಸೆರೆ ಹಿಡಿಯಲಾಗಿದೆ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಿಂದ ವಿಮಾನದಲ್ಲಿದ್ದ ಪ್ರಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಅಲ್ಲದೆ ಹಾವು ವಿಷಕಾರಿಯಾಗಿರಲಿಲ್ಲ ಎಂದು ಹೇಳಲಾಗಿದೆ. ಹಾವು ರಕ್ಷಣೆ ಮಾಡಿದ ಬಳಿಕ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು ಎಂದು ವಿಮಾನಯಾನ ಅಧಿಕಾರಿಗಳು ಹೇಳಿದ್ದಾರೆ, ಪ್ರಯಾಣಿಕರು ಇಳಿದ ಬಳಿಕ ಇನ್ನೊಂದು ಸುತ್ತಿನ ಕಾರ್ಯಾಚರಣೆ ನಡೆಸಲಾಯಿತು ಆ ವೇಳೆ ಯಾವುದೇ ಸರೀಸೃಪಗಳು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.
ಅಧಿಕಾರಿಗಳ ಕಾರ್ಯಾಚರಣೆಯ ಬಳಿಕವೂ ಹಾವು ಮಾತ್ರ ವಿಮಾನದೊಳಗೆ ಹೇಗೆ ಬಂತೆಂಬ ವಿಚಾರ ನಿಗೂಢವಾಗಿಯೇ ಉಳಿಯಿತು.
ಇದನ್ನೂ ಓದಿ : ಪಾಟ್ ಹೋಲ್ ಸಮಿಟ್ ಮಾಡಿ: ಸರಕಾರಕ್ಕೆ ಎಚ್.ಡಿ.ಕೆ. ಕುಟುಕು