ಶಿವಮೊಗ್ಗ: ಕಾಳಿಂಗ ಸರ್ಪವನ್ನು ಹಿಡಿಯಲು ಹೋದ ಉರಗ ತಜ್ಞರೊಬ್ಬರು ಸರ್ಪದ ಕಡಿತದಿಂದ ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ಜಿಲ್ಲೆಯ ಕೋಡೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಮತ್ತಿಘಟ್ಟದಲ್ಲಿ ನಡೆದಿದೆ.
ಮತ್ತಿಘಟ್ಟದ ಮನೆಯ ಬಳಿ ಬಂದ ಕಾಳಿಂಗ ಸರ್ಪವನ್ನು ರಿಪ್ಪನಪೇಟೆ ಬಳಿಯ ಚಿಕ್ಕಜೇನಿ ಸ್ನೇಕ್ ಪ್ರಭಾಕರ್ ಎಂಬವರು ಹಿಡಿಯಲು ಹೋದಾಗ ಈ ಘಟನೆ ನಡೆದಿದೆ.
ಮನೆಯ ಬಳಿಯ ತೋಟದಲ್ಲಿದ್ದ ಕಾಳಿಂಗಸರ್ಪವನ್ನು ಸ್ನೇಕ್ ಪ್ರಭಾಕರ್ ಹಿಡಿಯಲು ಹೋದಾಗ ಅದು ತೋಟದ ನಡುವೆ ಇದ್ದ ಕೆರೆಗೆ ಹೋಗಿದೆ. ಈ ವೇಳೆ ಕೆರಯಲ್ಲಿದ್ದ ಮರದ ತುಂಡಿನ ಮೇಲೆ ನಿಂತು ಕಾಳಿಂಗ ಸರ್ಪವನ್ನು ನೀರಿನಿಂದ ಮೇಲೆತ್ತಿ ಹಿಡಿಯಲು ಹೋದಾಗ ಅದು ಸ್ನೇಕ್ ಪ್ರಭಾಕರ್ ಮೇಲೆಯೇ ದಾಳಿ ನಡೆಸಲು ಮುಂದಾಯಿತು.
ಕಾಳಿಂಗ ಸರ್ಪ ಪ್ರಭಾಕರ ಕಾಲಿಗೆ ಕಡಿಯಲು ಮುಂದಾಯಿತು. ಕೂಡಲೇ ಅದರಿಂದ ಸ್ನೇಕ್ ಪ್ರಭಾಕರ್ ತಪ್ಪಿಸಿಕೊಂಡಿದ್ದಾರೆ. ಆದರೆ ಈ ವೇಳೆ ಅವರು ಕಾಲು ಜಾರಿ ಬಿದ್ದಿದ್ದಾರೆ. ಆಗ ಮತ್ತೆ ದಾಳಿ ಮಾಡಿದ ಕಾಳಿಂಗ ಸರ್ಪವು ಪ್ರಭಾಕರ್ ಮುಖಕ್ಕೆ ಕಚ್ಚಲು ಮುಂದಾಗಿದೆ.
Related Articles
ಇದನ್ನೂ ಓದಿ:ಮೇಲಾಧಿಕಾರಿಗಳ ಕಾಟದಿಂದ ಬೇಸತ್ತು ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ KSRTC ಬಸ್ ನಿರ್ವಾಹಕ
ಕೂಡಲೇ ಜಾಗೃತರಾದ ಅವರು ಹಾವಿನ ತಲೆಯನ್ನು ಹಿಡಿದುಕೊಂಡಿದ್ದಾರೆ. ಅವರ ಜೊತೆಯಿದ್ದ ಸಹಾಯಕನೂ ಕೂಡಲೇ ಸರ್ಪವನ್ನು ಹಿಡಿದುಕೊಂಡಿದ್ದಾರೆ. ಒಟ್ಟಿನಲ್ಲಿ ಸೂಕ್ತ ಸಮಯ ಪ್ರಜ್ಞೆಯಿಂದ ಸ್ನೇಕ್ ಪ್ರಭಾಕರ್ ಕೂದಲೆಳೆ ಅಂತರದಲ್ಲಿ ಕಾಳಿಂಗಸರ್ಪದ ಕಡಿತದಿಂದ ಪಾರಾಗಿದ್ದಾರೆ.
ನಂತರ ಸುರಕ್ಷಿತವಾಗಿ ಕಾಳಿಂಗ ಸರ್ಪವನ್ನು ಹಿಡಿದು ಸಮೀಪದ ಕಾಡಿಗೆ ಬಿಡಲಾಗಿದೆ.