Advertisement

ಹೀಗೊಂದು ಹಾವು ಪ್ರೇಮಿ

03:41 PM Sep 20, 2020 | Team Udayavani |

ಹಾವೆಂದರೆ ಹೆಚ್ಚಿನವರಿಗೆ ಕುತೂಹಲ, ಪ್ರೀತಿಗಿಂತ ಭಯವೇ ಅಧಿಕ. ಈ ಶೀತರಕ್ತ ಜೀವಿ ಸದ್ದಿಲ್ಲದೇ ಹರಿದಾಡಿದರೂ ತನ್ನ ವಿಷದಿಂದ ಮನುಷ್ಯರೆಡೆಯಲ್ಲಿ ಒಂದು ಭಯವನ್ನು ಸೃಷ್ಟಿ ಮಾಡಿದೆ.

Advertisement

ಆದರೆ ಹಾವು ತನಗೆ ನೋವಾಘದ ಹೊರತು ಯಾವುದೇ ಉಪದ್ರವ ಮಾಡುವುದಿಲ್ಲ ಎಂಬ ಸಂಗತಿಯನ್ನು ಹೆಚ್ಚಿನವರು ಮರೆತಿದ್ದಾರೆ. ತನ್ನನ್ನು ತಾನು ರಕ್ಷಿಸುವ ಸಲುವಾಗಿ ವಿಷವನ್ನು ಪ್ರಯೋಗಿಸುತ್ತದೆ ಎಂಬುದನ್ನು ಹಲವು ಉರಗ ಪ್ರೇಮಿಗಳು ತಿಳಿದುಕೊಂಡಿದ್ದಾರೆ.

ಆದರೆ ಅಮೆರಿಕದ ಓರ್ವ ಉರಗಪ್ರೇಮಿಯ ನಡೆಯಂತು ಬಹಳ ವಿಚಿತ್ರವಾಗಿದೆ. ಬರೋಬ್ಬರಿ 173 ಬಾರಿ ಹಾವಿನಿಂದ ಕಚ್ಚಸಿಕೊಂಡರೂ ಹಾವನ್ನೂ ದ್ವೇಷಿಸದೇ ತನ್ನ ಜೀವಮಾನವಿಡೀ ಹಾವನ್ನು ಪ್ರೀತಿಸಿದ ವ್ಯಕ್ತಿಯ ಕಥೆ.

ಬಿಲ್‌ ಹಾಸ್ಟ್‌ ಎಂಬ ಅಮೆರಿಕ ಮೂಲದ ವ್ಯಕ್ತಿ ಹುಟ್ಟಿದ್ದು 1910ರಲ್ಲಿ. ಮೊದಲು ವಿಜ್ಞಾನಿಯಾಗಿ ಗುರುತಿಸಿಕೊಂಡಿದ್ದ ಇವರು ಆನಂತರದಲ್ಲಿ ಉರಗತಜ್ಞನಾಗಿ ಬದಲಾಗುತ್ತಾರೆ. ತನ್ನ 11ನೇ ವಯಸ್ಸಿನಲ್ಲಿ ಹಾವುಗಳ ಬಗ್ಗೆ ಆಸಕ್ತಿ ಹುಟ್ಟಿಕೊಳ್ಳುತ್ತದೆ. ಅತಿ ಸಣ್ಣ ವಯಸ್ಸಿನಲ್ಲೇ ಮೊದಲಬಾರಿಗೆ ಹಾವಿನಿಂದ‌ ಕಡಿತಕ್ಕೊಳಗಾದ ಇವರು ಆನಂತರದಲ್ಲಿ ಅದರ ಬಗ್ಗೆ ವಿಶೇಷವಾದ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ಹಾಗೂ ಹಾವು ಕಡಿತಕ್ಕೊಳಗಾದರೆ ಅದಕ್ಕೆ ಹಾವಿನ ವಿಷದ ಮೂಲಕವೇ ಚಿಕಿತ್ಸೆ ಮಾಡುವುದನ್ನು ಕರಗತ ಮಾಡಿಕೊಳ್ಳುತ್ತಾರೆ, ಸರಿ ಸುಮಾರು 10 ಸಾವಿರ ಬೇರೆ ಬೇರೆ ತರದ ಹಾವುಗಳನ್ನು ಸಾಕಿ, ಅವುಗಳ ವಿಷವನ್ನು ಸಂಗ್ರಹಿಸಿ ಜಗತ್ತಿನೆಲ್ಲೆಡೆ ಔಷಧ ಬಳಕೆಗಾಗಿ ರಫ್ತು ಮಾಡಿದ್ದರು.

ಹಾವುಗಳಿಗಾಗಿ ಸೂಕ್ತ ವ್ಯವಸ್ಥೆ ಮಾಡಲು ಉದ್ಯೋಗ ಹುಡುಕಿದ್ದರು. ಹಾವಿನ ಕಡಿತದಿಂದ 20 ಬಾರಿ ಕೋಮಾವಸ್ಥೆಗೆ ಜಾರಿದ್ದರೂ ಹಾವನ್ನು ಹೆಚ್ಚು ಸಂರಕ್ಷಿಸಲು ಪ್ರಯತ್ನಿಸಿದ್ದರು. ಹಾವಿನ ವಿಷದಿಂದ ತನ್ನ ದೇಹವನ್ನು ರಕ್ಷಿಸಲು ಅಥವಾ ರೋಗಪ್ರತಿರೋಧ ಶಕ್ತಿಯನ್ನು ಹೆಚ್ಚಿಸಲು ಅವರು ಪ್ರತಿದಿನ ದುರ್ಬಲವಾದ ಹಾವಿನ ವಿಷವನ್ನು ಸೇವಿಸಲು ಆರಂಭಿಸಿದರು.

Advertisement

ಇದರಿಂದ ಮುಂದೆ ಅವರಿಗೆ ಹಾವಿನ ಕಡಿತದಿಂದ ಯಾವುದೇ ತೊಂದರೆ ಉಂಟಾಗಲಿಲ್ಲ. ಜತೆಗೆ ಹಾವಿನ ಕಡಿತಕ್ಕೊಳಪಟ್ಟವರ ರಕ್ಷಣೆಗಾಗಿ ಇವರು ತಮ್ಮ ರಕ್ತದಾನ ಮಾಡುತ್ತಿದ್ದರು. 2011ರಲ್ಲಿ ಈ ಉರಗಪ್ರೇಮಿ ಮರಣ ಹೊಂದಿದರು.

Advertisement

Udayavani is now on Telegram. Click here to join our channel and stay updated with the latest news.

Next