Advertisement

ಹಾವಿನ ಜತೆ ಸರಸ: ಗಾಯಕಿಗೆ ಸ್ನೇಕ್‌ ಬೈಟ್‌!

10:54 PM Dec 26, 2021 | Team Udayavani |

ವಾಷಿಂಗ್ಟನ್‌: ಆಲ್ಬಂ ಸಾಂಗ್‌ಗಾಗಿ ಮೈ ಮೇಲೆ ಹಾವು ಬಿಟ್ಟುಕೊಂಡಿರು ವ ಗಾಯಕಿಯ ಮುಖಕ್ಕೇ ಹಾವು ಕಚ್ಚಿರುವ ಘಟನೆ ನಡೆದಿದೆ. ಅಮೆರಿಕದ 21 ವರ್ಷದ ಗಾಯಕಿ ಮೇಟಾ ಈ ರೀತಿ ಹಾವಿನಿಂದ ಕಚ್ಚಿಸಿ ಕೊಂಡಿರುವವರು.

Advertisement

ಅವರು ಇತ್ತೀಚೆಗೆ ವೀಡಿಯೋಕ್ಕಾಗಿ ಹಾವನ್ನು ಮೈ ಮೇಲೆ ಬಿಟ್ಟುಕೊಂಡಿದ್ದಾರೆ. ಕಪ್ಪು ಬಣ್ಣದ ಹಾವೊಂದನ್ನು ಮೈ ಮೇಲೆ ಬಿಟ್ಟುಕೊಂಡಿದ್ದು, ಅದು ಕುತ್ತಿಗೆ ಬಳಿ ಹರಿದಾಡಿದೆ. ಆಗ ಬಿಳಿ ಬಣ್ಣದ ಇನ್ನೊಂದು ಹಾವು ಬಿಡಲಾಗಿದ್ದು, ಅಷ್ಟೊತ್ತಿಗೆ ಕಪ್ಪು ಹಾವು ಮೇಟಾರ ಮುಖಕ್ಕೇ ಬಾಯಿ ಹಾಕಿದೆ. ಮೇಟಾ ಆ ಹಾವನ್ನು ಕೈನಲ್ಲಿ ಹಿಡಿದು ತೆಗೆದು, ಅಲ್ಲಿಂದ ಎದ್ದು ಹೋಗಿದ್ದಾರೆ. ಈ ವೀಡಿಯೋವನ್ನು ಮೇಟಾ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದು ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next