Advertisement
ಸಮಾರಂಭದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಾಲಾಡಳಿತ ಮಂಡಳಿಯ ಸ್ಥಳೀಯ ಸಮಿತಿಯ ಅಧ್ಯಕ್ಷ ಶಿವಾಜಿ ಸುವರ್ಣ ಮಾತನಾಡಿ ಪ್ರಕೃತಿಯಲ್ಲಿರುವ ನಾನಾ ಜಾತಿಯ ಹಾವುಗಳು ಪರಿಸರ ಸೇ°ಹಿಯಾಗಿದ್ದು ಪ್ರಕೃತಿಯ ಸಮತೋಲನ ಕಾಯ್ದುಕೊಂಡು ಬರಲು ಸಹಕಾರಿಯಾಗಿವೆ.ಈ ನಿಟ್ಟಿನಲ್ಲಿ ಉರಗ ತಜ್ಞ ಗುರುರಾಜ ಸನಿಲ್ ಅವರ ಹಾವುಗಳ ಬಗ್ಗೆ ಕಾಳಜಿ ಶ್ಲಾಘನೀಯವಾಗಿದ್ದು, ಅವರು ಉರಗಗಳ ಬಗ್ಗೆ ಬರೆದ ಕೃತಿಯು ಮಂಗಳೂರು ವಿ.ವಿ.ಯ ಪಠ್ಯಪುಸ್ತಕದಲ್ಲಿ ಪಠ್ಯವಾಗಿ ಸೇರ್ಪಡೆಗೊಂಡಿರುವುದು ಅವರ ಪರಿಶ್ರಮಕ್ಕೆ ಸಂದ ಗೌರವವಾಗಿದೆ ಎಂದು ಹೇಳಿದರು.
ನಾರಾಯಣ ಗುರು ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಜಿನರಾಜ್ ಸಾಲಿಯಾನ್ ಸ್ವಾಗತಿಸಿದರು. ಎಸ್‌ಕೆಪಿಎ ಕಾಪು ವಲಯದ ಅಧ್ಯಕ್ಷ ಉದಯ ಮುಂಡ್ಕೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ವೀಣಾ ಕಾರ್ಯಕ್ರಮ ನಿರೂಪಿಸಿ, ವೀರೇಂದ್ರ ಶಿರ್ವ ವಂದಿಸಿದರು.