Advertisement

ಬಸವನ ಹುಳು ಹತೋಟಿಗೆ ಜಾಗೃತಿ

03:42 PM Jul 13, 2022 | Team Udayavani |

ಬಸವಕಲ್ಯಾಣ: ತಾಲೂಕಿನ ಖಂಡಾಳ ಗ್ರಾಮದಲ್ಲಿ ಮುಂಗಾರು ಬೆಳೆಗಳಿಗೆ ಕಾಣಿಸಿಕೊಂಡಿರುವ ಬಸವನ ಹುಳುವಿನ ಬಾಧೆ ಹತೋಟಿಗಾಗಿ ಕೃಷಿ ಇಲಾಖೆಯಿಂದ ಮಂಗಳವಾರ ರೈತರಿಗೆ ಜಾಗೃತಿ ಕಾರ್ಯಕ್ರಮ ಜರುಗಿತು.

Advertisement

ಶಾಸಕ ಶರಣು ಸಲಗರ, ತಹಶೀಲ್ದಾರ್‌ ಸಾವಿತ್ರಿ ಸಲಗರ, ಕೃಷಿ ಸಹಾಯಕ ನಿರ್ದೇಶಕ ಮಾರ್ತಂಡ ಸೇರಿ ಅಧಿಕಾರಿಗಳು ಮತ್ತು ರೈತರ ಸಮ್ಮುಖದಲ್ಲಿ ರೋಗ ನಿಯಂತ್ರಣದ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಯಿತು. ಪ್ರಸಕ್ತ ಹಂಗಾಮಿನಲ್ಲಿ ಸೋಯಾ, ತೊಗರಿ, ಉದ್ದು, ಹೆಸರು ಬೆಳೆಗಳಿಗೆ ಬಸವನ (ಶಂಖದ) ಹುಳು ಬಾಧೆ ಕಂಡುಬಂದಿದೆ. ವಾರದ ಹಿಂದೆ ಬಿತ್ತನೆ ಕೈಗೊಂಡ ಜಮೀನಿನಲ್ಲಿ ಬೆಳೆಗಳ ಮೊಳಕೆ ಒಡೆಯುವ ಹಂತ ಹಾಗೂ ಎರಡು ಮೂರು ಎಲೆ ಬಂದಿರುವ ಹಂತ ಹುಳುವಿನ ಬಾಧೆ ಕಾಣಿಸಿರುವುದು ರೈತರಲ್ಲಿ ಆತಂಕ ಮೂಡಿಸಿದೆ ಎಂದು ಶಾಸಕ ಸಲಗರ ಹೇಳಿದರು.

ಶಂಖದ ಹುಳು ತನ್ನ ಜೀವಿತಾವಧಿಯಲ್ಲಿ 100-500 ಮೊಟ್ಟೆಗಳನ್ನು ಇಡುವ ಸಾಮರ್ಥ್ಯ ಹೊಂದಿದ್ದು, 3-5 ಸೆ.ಮೀ. ಆಳದಲ್ಲಿ ಭೂಮಿಯ ಒಳಗಡೆ ಇಟ್ಟು ನಂತರ ಅವುಗಳನ್ನು ಜಿಗುಟಾದ ವಸ್ತುವಿನಿಂದ ಮುಚ್ಚುತ್ತದೆ. ಅನುಕೂಲಕರ ವಾತಾವರಣವಿದ್ದಲ್ಲಿ ಮೊಟ್ಟೆಯಿಂದ ಮರಿಗಳು ಹೊರ ಬಂದು ಜೀವಿಸುವುದನ್ನು ನೋಡುತ್ತದೆ. ಇಲ್ಲದಿದ್ದಲ್ಲಿ ಸೂಪ್ತಾವಸ್ಥೆಗೆ ಹೋಗುತ್ತವೆ. ಬಸವನ ಹುಳು ಹತೋಟಿಗೆ ನಿರ್ಲಕ್ಷ್ಯ ವಹಿಸಿದಲ್ಲಿ ಸಂಪೂರ್ಣ ಬೆಳೆ ನಾಶವಾಗಿ ಮರು ಬಿತ್ತನೆ ಮಾಡುವ ಪರಿಸ್ಥಿತಿ ಉದ್ಭವವಾಗುವ ಸಾಧ್ಯತೆಯಿದೆ. ಹೀಗಾಗಿ ಸಮಗ್ರ ಹತೋಟಿ ಕ್ರಮಗಳನ್ನು ಅನುಸರಿಸಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಾರ್ತಂಡ ರೈತರಿಗೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next