Advertisement

ಪರ್ಕಳ ದೇವಿನಗರದಲ್ಲಿ ಬಸವನ ಹುಳು ಬಾಧೆ

10:02 PM Oct 04, 2021 | Team Udayavani |

ಉಡುಪಿ: ಪರ್ಕಳದ ದೇವಿನಗರ ಪರಿಸರದಲ್ಲಿ ಬಸವನ ಹುಳು ಅಥವಾ ಶಂಖದ ಹುಳುಗಳ ಬಾಧೆ ಕಂಡುಬಂದಿದ್ದು, ಅಡಿಕೆ, ತೆಂಗು ಸೇರಿದಂತೆ ವಿವಿಧ ಗಿಡಗಳಿಗೆ ಹಾನಿ ಉಂಟಾಗುವ ಭೀತಿ ಸ್ಥಳೀಯರಲ್ಲಿ ಮೂಡಿಸಿದೆ.

Advertisement

ದೇವಿನಗರದ ನಿವಾಸಿಗಳಾದ ಉದಯ ಕುಮಾರ್‌, ಸರಸ್ವತಿ, ದಿಲ್‌ಶಾದ್‌, ಅಬೂಬಕರ್‌, ನಿಹಾಲ್‌ ಅವರ ಹಾಗೂ ಹೊಟೇಲ್‌ ಮಂದಾರ ಸೇರಿದಂತೆ ಸುತ್ತಮುತ್ತ ಕಳೆದೆರಡು ದಿನಗಳಿಂದ ಮನೆಯ ಆವರಣ, ಗೋಡೆ, ತೆಂಗಿನ ಮರ, ಹೂವಿನ ಗಿಡದಲ್ಲಿ ರಾಶಿ ರಾಶಿ ಹುಳುಗಳು ಕಾಣ ಸಿಗುತ್ತಿವೆೆ. ಮನೆಯೊಳಗೆ ಸಹ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ ಹಾಗೂ ಗ್ರಾ.ಪಂ.ಗೆ ಒಳಪಟ್ಟ ಆರೋಗ್ಯ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬಸವನ ಹುಳುಗಳು ದ್ವಿಲಿಂಗಿ ಗಳಾಗಿದ್ದು, ಜೀವಿತಾವಧಿ 3ರಿಂದ 5 ವರ್ಷಗಳಾಗಿದೆ. ಸುಮಾರು 50-200 ಹಳದಿ ಬಣ್ಣದ ಮೊಟ್ಟೆಗಳನ್ನು ಮಣ್ಣಿನ ಮೇಲ್ಪದರದಲ್ಲಿ ಇಡುತ್ತವೆ. ಮೊಟ್ಟೆ ಇಟ್ಟ ವಾರದೊಳಗೆ ಮರಿ ಹುಳುಗಳು ಹೊರ ಬರುತ್ತವೆ. ಪ್ರೌಢಾವಸ್ಥೆಗೆ ಬರಲು ಒಂದು ವರ್ಷ ಬೇಕಾಗುತ್ತದೆ. ಈ ಹುಳುಗಳು ನಿಶಾಚರಿಗಳು (ರಾತ್ರಿ ಸಮಯದಲ್ಲಿ ಸಂಚಾರ). ಮಳೆಗಾಲದಲ್ಲಿ ಬೆಳೆಗಳ ಎಲೆಗಳು, ಕಾಂಡ, ಹಣ್ಣು ಹಾಗೂ ಹೂವುಗಳನ್ನು ತಿಂದು ಹೆಚ್ಚಿನ ಹಾನಿ ಉಂಟು ಮಾಡುತ್ತದೆ ಎನ್ನುತ್ತಾರೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣ ವಿಜ್ಞಾನಿ ಹಾಗೂ ಕೀಟ ತಜ್ಞ ಡಾ| ಸಚಿನ್‌.

ಇದನ್ನೂ ಓದಿ:ಕೈ ಕೊಟ್ಟ ವಾಟ್ಸಾಪ್, ಫೇಸ್ ಬುಕ್, ಇನ್‍ಸ್ಟಾಗ್ರಾಂ | ಬಳಕೆದಾರರ ಪರದಾಟ

ಪರಿಹಾರವೇನು?
ಹುಳುಗಳ ಬೆಳವಣಿಗೆಗೆ ಪೂರಕ ವಾತಾವರಣವನ್ನು ಒದಗಿಸದೆ ತೋಟಗಳ ಕಳೆಗಳನ್ನು ನಿರ್ಮೂಲನೆ ಮಾಡಿ ಶುಚಿಯಾಗಿಡಬೇಕು. ತೋಟಗಳಲ್ಲಿ ಕೃಷಿ ತ್ಯಾಜ್ಯಗಳನ್ನು ಗುಂಪು ಹಾಕದೆ ಹುಳುಗಳಿಗೆ ಅಡಗಿಕೊಳ್ಳಲು ಸ್ಥಳಗಳು ಸಿಗದಂತೆ ಮಾಡಬೇಕು. ಹಾನಿಯ ಪ್ರಮಾಣ ಕಡಿಮೆ ಇರುವಾಗ ಅಥವಾ ಮೊದಲ ಹಂತದಲ್ಲಿಯೇ ಇವುಗ ಳನ್ನು ಹಿಡಿದು ನಾಶಪಡಿಸುವುದು ಪರಿಣಾಮಕಾರಿಯಾಗಿದೆ. ಬ್ಲೀಚಿಂಗ್‌ ಪುಡಿ, ಸುಣ್ಣದ ಪುಡಿಯನ್ನು ಧೂಳೀ ಕರಿಸಿ ಹುಳುಗಳನ್ನು ನಾಶ ಮಾಡ ಬಹುದು ಎಂದು ಸಚಿನ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next