Advertisement

ಮುದ್ನಾಳ್‌ಗೆ ಬಸವ ಸಮಿತಿ ಸನ್ಮಾನ

03:35 PM Sep 11, 2022 | Team Udayavani |

ಯಾದಗಿರಿ: ಸಮಾಜದಲ್ಲಿ ಮನೆ ಮಾಡಿದ್ದ ಅಸ್ಪೃಶ್ಯತೆ ನಿವಾರಣೆಗಾಗಿ ಸದಾ ತಲೆ ಮೇಲೆ ಶ್ವೇತವಸ್ತ್ರ ಧರಿಸಿ, ಮೌನಕ್ರಾಂತಿ ಮಾಡಿದ್ದ ಸ್ವಾತಂತ್ರ್ಯ ಹೋರಾಟಗಾರ ದಿ. ವಿಶ್ವನಾಥರಡ್ಡಿ ಮುದ್ನಾಳ್‌ ಬಸವ ತತ್ವ ನಿಷ್ಠರಾಗಿದ್ದರು ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಬಣ್ಣಿಸಿದರು.

Advertisement

ಬೆಂಗಳೂರಿನ ಬಸವ ಭವನದಲ್ಲಿ ಬಸವ ಸಮಿತಿ ಸಂಸ್ಥಾಪಕ ಅಧ್ಯಕ್ಷ ದಿ. ಬಿ.ಡಿ. ಜತ್ತಿ ಅವರ 110ನೇ ಜನ್ಮದಿನ ಕಾರ್ಯಕ್ರಮದಲ್ಲಿ ವೀರಶೈವ ಸಮುದಾಯಕ್ಕೆ ಮುದ್ನಾಳರ ಕೊಡುಗೆ ಸ್ಮರಿಸಿದ ಅವರು, ವರದಕ್ಷಿಣೆ ತೆಗೆದುಕೊಳ್ಳುವ ಮದುವೆಗೆಗಳಿಗೆ ವಿಶ್ವನಾಥರಡ್ಡಿ ಎಂದಿಗೂ ಹೋಗಲಿಲ್ಲ. ಹೈಕ (ಕಲ್ಯಾಣ ಕರ್ನಾಟಕ) ಭಾಗ ಸರ್ವತೋಮುಖ ಅಭಿವೃದ್ಧಿ ಕಾಣದ ಹೊರತು ನನಗ್ಯಾವ ಪ್ರಶಸ್ತಿಯೂ ಬೇಡ ಎಂದು ಮನೆ ಬಾಗಿಲಿಗೆ ಬಂದಿದ್ದ ಕರ್ನಾಟಕ ಏಕೀಕರಣ ಪ್ರಶಸ್ತಿ ನಿರಾಕರಿಸಿದ ನಿಸ್ವಾರ್ಥ ಜೀವಿ ಮುದ್ನಾಳ್‌ ಎಂದರು.

ಬಸವ ಸಮಿತಿ ಹಿರಿಯ ಉಪಾಧ್ಯಕ್ಷರಾಗಿ ಬಿಡಿ ಜತ್ತಿ ಮತ್ತು ಭೀಮಣ್ಣ ಖಂಡ್ರೆ ಜತೆ ಮುದ್ನಾಳ್‌ ಅವರು ನಾಡಿನಾದ್ಯಂತ ಶರಣರ ವಚನ, ಸಿದ್ಧಾಂತಗಳನ್ನು ಪಸರಿಸಲು ಹಗಲಿರಳು ಶ್ರಮಿಸಿದ್ದರು ಎಂದು ಹೇಳಿದರು.

ಇದೇ ವೇಳೆ ಅಖೀಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷರಾದ ಶಾಸಕ ವೆಂಕಟರಡ್ಡಿ ಮುದ್ನಾಳ್‌ರನ್ನು ಬಸವ ಸಮಿತಿಯಿಂದ ಸನ್ಮಾನಿಸಲಾಯಿತು. ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮಿಗಳು ಹಾಗೂ ಬೇಲಿಮಠದ ಸ್ವಾಮಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next