ಅಲಿರಾಜಪುರ: ರಾಜ್ಯ ಸರ್ಕಾರದ 108 ಸಹಾಯವಾಣಿಯ ಆ್ಯಂಬುಲೆನ್ಸ್‌ನಲ್ಲಿ ಸಾಗುವಾನಿ ನಾಟ ಕಳ್ಳಸಾಗಣೆ ಮಾಡಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯಲ್ಲಿ ನಡೆದಿದೆ.
ಅಲಿರಾಜಪುರದ ಭವ್ರಾದಿಂದ ಕತ್ತಿವಾಡಕ್ಕೆ ಶನಿವಾರ ರಾತ್ರಿ ಸಾಗುವಾನಿ ಮರದ ತುಂಡುಗಳನ್ನು ಆ್ಯಂಬುಲೆನ್ಸ್‌ನಲ್ಲಿ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಅದನ್ನು ಸ್ಥಳೀಯರು ತಡೆದಿದ್ದು, ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು, ಆ್ಯಂಬುಲೆನ್ಸ್‌ನಲ್ಲಿದ್ದ 15,000 ರೂ. ಬೆಲೆಯ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಗಾಡಿ ಬಿಟ್ಟು ಓಡಿಹೋಗಿದ್ದ ಚಾಲಕ ವಿಕ್ರಂ ಧಾಕತ್(29) ಮತ್ತು ಆತನ ಸಹಾಯಕ ಅರುಣ್ ಬಮಾನಿಯಾ(30)ನನ್ನು ಬಂಧಿಸಲಾಗಿದೆ.
ಆ ನಾಟವನ್ನು ಪೊಲೀಸ್ ಪೇದೆಯೊಬ್ಬರ ಸ್ಥಳಕ್ಕೆ ಕೊಂಡೊಯ್ಯುತ್ತಿದ್ದುದ್ದಾಗಿ ಅವರಿಬ್ಬರು ತಿಳಿಸಿದ್ದಾರೆ ಎನ್ನಲಾಗಿದೆ. ಆ್ಯಂಬುಲೆನ್ಸ್‌ನಲ್ಲಿ ಆಕ್ಸಿಜನ್ ಸಿಲಿಂಡರ್‌ಗಳೂ ಇದ್ದಿದ್ದಾಗಿ ವರದಿಯಾಗಿದೆ.
ಇದನ್ನೂ ಓದಿ:ಉಪ ಚುನಾವಣೆ ಬಿಜೆಪಿ ಹಣ ಹಂಚುವ ಮೂಲಕ ಗೆಲ್ಲಲು ಯತ್ನ: ಸುರ್ಜೆವಾಲ ಆರೋಪ