Advertisement

ಬಾರಕೂರು ರುಕ್ಮಿಣಿ ಶೆಡ್ತಿ ಸ್ಮಾರಕ ಕಾಲೇಜು: ಪ್ರವೇಶಾತಿ ಪ್ರಗತಿ

08:02 PM Apr 30, 2019 | Sriram |

ಬ್ರಹ್ಮಾವರ: ಬಾರಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್‌ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ತರಗತಿಗಳಿಗೆ ಪ್ರವೇಶಾತಿ ಪ್ರಗತಿಯಲ್ಲಿದೆ.

Advertisement

ಕಾಲೇಜಿನಲ್ಲಿ ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎಂ., ಬಿ.ಎಸ್‌.ಡಬ್ಲೂÂ, ಬಿ.ಸಿ.ಎ. ಕೋರ್ಸ್‌ಗಳಿವೆ. ಪೂರ್ಣಕಾಲಿನ ಉಪನ್ಯಾಸಕ ವೃಂದ, ಸುಸಜ್ಜಿತ ಕಟ್ಟಡ, ವ್ಯವಸ್ಥಿತ ಪ್ರಯೋಗಾಲಯ ಹೊಂದಿದೆ.

ವಿಶೇಷತೆಗಳು
ವಿಶೇಷ ತರಬೇತಿ ಹೊಂದಿದ ಉಪನ್ಯಾಸಕರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ವಿದ್ಯಾರ್ಥಿ ವೇತನ ಸೌಲಭ್ಯ, ಕ್ಯಾಂಪಸ್‌ ಆಯ್ಕೆ, ಸಾಫ್ಟ್‌ಸ್ಕಿಲ್‌ ತರಬೇತಿ, ವಿಕಸನ ಹಾಗೂ ವೃತ್ತಿ ಕೌಶಲ ತರಬೇತಿ, ಆಪ್ತ ಸಲಹೆ, ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ದೊರೆಯಲಿದೆ. ಕಾಲೇಜು ಉತ್ತಮ ಫಲಿತಾಂಶದೊಂದಿಗೆ ರ್‍ಯಾಂಕ್‌ ಹೊಂದಿದೆ. ವಿದ್ಯಾರ್ಥಿ ನಿಲಯ ಸೌಲಭ್ಯ, ಹಿಂದುಳಿದ, ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವಿದ್ಯಾರ್ಥಿನಿಯರಿಗೆ ಶುಲ್ಕದ ಮರುಪಾವತಿ ವ್ಯವಸ್ಥೆ ಇರುವುದಾಗಿ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next