Advertisement
2015ರಲ್ಲಿ ನ್ಯೂಜಿಲ್ಯಾಂಡ್ ನ ಸೋಫಿಯೋ ಡಿವೈನ್ ಅವರು ಕೇವಲ 18 ಎಸೆತಗಳಲ್ಲಿ ಅವೀ ವೇಗದ ಅರ್ಧ ಶತಕ (50) ಬಾರಿಸಿ ನಿರ್ಮಿಸಿದ್ದ ದಾಖಲೆಯನ್ನು ಸ್ಮೃತಿ ಮಂದನ ಸರಿಗಟ್ಟಿದಂತಾಗಿದೆ.ಭಾನುವಾರ ರಾತ್ರಿ ಲೌಬರೋ ಲ್ಶೆಟ್ನಿಂಗ್ ವಿರುದ್ಧ ನಡೆದ ಪಂದ್ಯದಲ್ಲಿ ವೆಸ್ಟರ್ನ್ ಸ್ಟಾರ್ಮ್ ಆರಂಭಿಕ ಆಟಗಾರ್ತಿಯು ಈ ವಿಶ್ವ ದಾಖಲೆಯ ಇನ್ನಿಂಗ್ಸಲ್ಲಿ 4 ಬೌಂಡರಿ 4 ಸಿಕ್ಸರ್ ಸಹಿತ19 ಎಸೆತಗಳಲ್ಲಿ 52 ರನ್ ಹೊಡೆದರು. ಮಳೆಯಿಂದಾಗಿ 6 ಓವರ್ ಗಳಿಗೆ ಸೀಮಿತವಾಗಿ ನಡೆದ ಪಂದ್ಯದಲ್ಲಿ ವೆಸ್ಟ ರ್ನ್ ಸ್ಟಾರ್ಮ 2 ವಿಕೆಟ್ ಗೆ 85 ರನ್ ಗಳಿಸಿದರೆ, ಲೌಬರೋ ಲ್ಶೆಟ್ನಿಂಗ್ ತಂಡ 67 ರನ್ ಗಳಿಸಲಷ್ಟೆ ಶಕ್ತವಾಯಿತು.