Advertisement

ICC ಏಕದಿನ ರ‍್ಯಾಂಕಿಂಗ್‌ :ಸ್ಮೃತಿ ಮಂಧಾನಾ ನಂಬರ್‌1 ಬ್ಯಾಟ್ಸ್‌ವುಮನ್

02:58 PM Feb 02, 2019 | |

ಹೊಸದಿಲ್ಲಿ: ಭಾರತ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಾ ಅವರು ಐಸಿಸಿ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ನಂಬರ್‌ 1 ಬ್ಯಾಟ್ಸ್‌ವುಮನ್‌ ಎನಿಸಿಕೊಂಡಿದ್ದಾರೆ.

Advertisement

ಐಸಿಸಿ ಭಾನುವಾರ ರ್‍ಯಾಂಕಿಂಗ್‌ ಪ್ರಕಟಿಸಿದ್ದು , ಮಂಧಾನಾ 3 ಸ್ಥಾನಗಳನ್ನು ಜಿಗಿದು ಮೊದಲ ಸ್ಥಾನ ಗಳಿಸಿಕೊಂಡಿದ್ದಾರೆ. ನ್ಯೂಜಿಲ್ಯಾಂಡ್‌ ಸರಣಿಯಲ್ಲಿ ಅವರ ನಾಲ್ಕನೇ ಏಕದಿನ ಶತಕ ಮತ್ತು ಆಜೇಯ 90 ರನ್‌ಗಳಿಕೆ ಸಾಧನೆ ಮೊದಲ ಸ್ಥಾನಕ್ಕೇರಲು ನೆರವಾಗಿದೆ. 

22 ರ ಹರೆಯದ ಆಟಗಾರ್ತಿ  3 ಪಂದ್ಯಗಳ ಸರಣಿಯಲ್ಲಿ  ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು. ಭಾರತ ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡಿತ್ತು. 

ಆಸ್ಟ್ರೇಲಿಯಾದ ಆಟಗಾರ್ತಿಯರಾದ ಎಲ್ಲಿಸಿ ಪೆರ್ರಿ ಮತ್ತು ಮೆಗ್‌ ಲಾನ್ನಿಂಗ್‌ ಅವರು ತಲಾ 2 ಮತ್ತು 3  ನೇ ಸ್ಥಾನ ಪಡೆದುಕೊಂಡಿದ್ದಾರೆ. ನ್ಯೂಜಿಲ್ಯಾಂಡ್‌ ತಂಡದ ನಾಯಕಿ ಸಾಟ್ಟರ್ಥ್‌ ವ್ರೇಟ್‌ ಅವರು ನಾಲ್ಕನೇ ಸ್ಥಾನ ಪಡೆದಿದ್ದಾರೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next