ಹೊಸದಿಲ್ಲಿ : ಕೇಂದ್ರ ಸಚಿವ ಸ್ಮತಿ ಇರಾನಿ ಅವರು ತನ್ನ ಮಗಳ ಶೈಕ್ಷಣಿಕ ಸಾಧನೆಯಿಂದ ಮತ್ತೂಮ್ಮೆ ಹೆಮ್ಮೆಯ ಅಮ್ಮ ಎನಿಸಿಕೊಂಡಿದ್ದಾರೆ.
Advertisement
ಅಮೇಥಿ ಲೋಕಸಭಾ ಕ್ಷೇತ್ರದಿಂದ ರಾಹುಲ್ ಗಾಂಧಿ ವಿರುದ್ಧ ಸೆಣಸುತ್ತಿರುವ ಇರಾನಿ ಅವರ ಮಗಳು 10ನೇ ಸಿಬಿಎಸ್‌ಇ ಪರೀಕ್ಷೆಯಲ್ಲಿ ಶೇ.82 ಅಂಕ ಗಳಿಸಿದ್ದಾಳೆ.
ಕೆಲ ದಿನಗಳ ಹಿಂದಷ್ಟೇ 12ನೇ ತರಗತಿ ಸಿಬಿಎಸ್‌ಇ ಪರೀಕ್ಷೆಯಲ್ಲಿ ತನ್ನ ಪುತ್ರ ಅತ್ಯುತ್ತಮ ಅಂಕ ಗಳಿಸಿದ ಸಾಧನೆ ಮಾಡಿದ್ದಾಗ ಇರಾನಿ ಅವರು ಹೆಮ್ಮೆಯ ಅಮ್ಮ ಎನಿಸಿಕೊಂಡಿದ್ದರು. ಇಂದು ಸೋಮವಾರ ಪ್ರಕಟಗೊಂಡಿರುವ 10ನೇ ಸಿಬಿಎಸ್‌ಇ ಪರೀಕ್ಷೆಯಲ್ಲಿ ಶೇ.91.1 ಫಲಿತಾಂಶ ದಾಖಲಾಗಿದೆ.