Advertisement
ಅಪಘಾತ ಹೆಚ್ಚಳಕ್ಕೆ ಕಾಮಗಾರಿ ವೈಫಲ್ಯವೂ ಕಾರಣ ಎಂಬ ಚರ್ಚೆ ಆರಂಭಗೊಂಡಿದ್ದು, ಹೆದ್ದಾರಿಯಲ್ಲಿ 100 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಪ್ರಯಾಣಿಸುವುದು ಸವಾಲಿನ ಕೆಲಸ ಎಂದು ಅನುಭವಿ ಚಾಲಕರೇ ಹೇಳುತ್ತಿದ್ದಾರೆ.
Related Articles
Advertisement
ಕಿ.ಮೀ. ರಸ್ತೆ ನಿರ್ಮಾಣಕ್ಕೆ 40 ಕೋಟಿ ರೂ.: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಹೈವೇ ಮೊದಲ ಹಂತದ 56.2 ಕಿ.ಮೀ. ರಸ್ತೆ ನಿರ್ಮಾಣಕ್ಕೆ 3900 ಕೋಟಿ ರೂ. ಖರ್ಚಾಗಿದ್ದು ಇದರಲ್ಲಿ 1600 ಕೋಟಿರೂ. ಭೂಸ್ವಾಧೀನಕ್ಕೆ, 2300 ಕೋಟಿ ರೂ. ಕಾಮಗಾರಿಗೆ ಖರ್ಚುಮಾಡಲಾಗಿದೆ. ಕಾಮಗಾರಿಗೆ ಮಾಡಿರುವ ಮೊತ್ತವನ್ನು ಲೆಕ್ಕ ಹಾಕಿದರೆ ಪ್ರತಿ ಕಿ.ಮೀ. 40.92 ಕೋಟಿ ರೂ. ವೆಚ್ಚವಾಗಿದೆ. ಇನ್ನು 2ನೇ ಹಂತದ 61.1 ಕಿ.ಮೀ. ಉದ್ದದ ಕಾಮಗಾರಿಗೆ 3600 ಕೋಟಿ ರೂ. ಖರ್ಚಾಗಿದ್ದು, ಇದರಲ್ಲಿ 1200 ಕೋಟಿ ರೂ. ಭೂಸ್ವಾಧೀನಕ್ಕೆ, 2400 ಕೋಟಿ ರೂ. ರಸ್ತೆ ಕಾಮಗಾರಿಗೆ ಖರ್ಚಾಗಿದೆ. ಪ್ರತಿ ಕಿ.ಮೀ.ಗೆ ಸರಾಸರಿ 39.27 ಕೋಟಿ ರೂ. ಖರ್ಚಾಗಿದೆ. ಇಷ್ಟೊಂದು ಕೋಟಿ ರೂ. ಖರ್ಚುಮಾಡಿ ನಿರ್ಮಿಸಿರುವ ರಸ್ತೆ ಇನ್ನಷ್ಟು ಗುಣಮಟ್ಟದಲ್ಲಿರಬೇಕಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಎಕ್ಸ್‌ಪ್ರೆಸ್ ಹೈವೇಯಲ್ಲಿ ಸವಾರರಿಗೆ ಎದುರಾಗುವ ಸಮಸ್ಯೆ:
ವಿಶೇಷವಾಗಿ ನಿರ್ಮಾಣ ಮಾಡಿರುವುದಾಗಿ ಎನ್‌ಎಚ್‌ಎಐ ಹೇಳಿದ್ದ ಬಿಡದಿ ಬೈಪಾಸ್ ಬಳಿಯ ರೈಲ್ವೆ ಓವರ್ ಬ್ರಿಡ್ಜ್ನಲ್ಲಿ ಟೆಂಪೋ ಸ್ಕಿಡ್ ಆಗಿ ಬಿದ್ದಿತ್ತು. ಇನ್ನು ಐರಾವತ ಬಸ್ ಸಹ ಮಳೆಯಲ್ಲಿ ಜಾರುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಎನ್‌ಎಚ್‌ಎಐ ಅಧಿಕಾರಿಗಳು ವೈಟ್‌ಪಟ್ಟೆ ಬಳಿದು ಈ ಸೇತುವೆ ಮೇಲೆ ವಾಹನ ಮಂದಗತಿಯಲ್ಲಿ ಸಾಗುವಂತೆ ಮಾಡಿದ್ದಾರೆ. ಆದರೆ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ.
ಪಂಚಮುಖೀ ಗಣಪತಿ ದೇವಾಲಯ ಮುಂಭಾಗದಿಂದ ಜೈನ್ ಕಾಲೇಜಿನವರೆಗೆ ಇರುವ ಎಲಿವೇ ಟೆಡ್ ರಸ್ತೆ(ಫ್ಲೈ ಓವರ್) ಜಾಯಿಂಟ್ ಬಳಿ ವಾಹನ ಚಲಿಸಿದಾಗ ಜಂಪ್ ಆಗುತ್ತಿದ್ದು ಶಬ್ಧ ಬರುತ್ತದೆ.
ಮಳೆ ನೀರು ಹರಿದೋಗಲು ವ್ಯವಸ್ಥೆ ಮಾಡಿಲ್ಲ. ಕೆಲವೆಡೆ ಚರಂಡಿಗೆ ನೀರು ಹೋಗಲು ನೆಲಮಟ್ಟ ದಿಂದ ಒಂದು ಅಡಿ ಎತ್ತರದಲ್ಲಿ ರಂಧ್ರ ಮಾಡಿದ್ದು, ಇದರಿಂದ ರಸ್ತೆಗೆ ನೀರು ಹರಿಯುವಂತಾಗಿದೆ.
ಮಾಯಗಾನಹಳ್ಳಿ ಬಳಿ ಸಣ್ಣ ಮಳೆಗೂ ರಸ್ತೆಯಲ್ಲಿ ನೀರು ಹರಿದು ಪ್ರಯಾಣಿಕರು ಕಿರಿಕಿರಿ ಅನುಭವಿಸುವಂತಾಗಿದ್ದು, ಈ ಬಗ್ಗೆ ಇನ್ನೂ ಹೆದ್ದಾರಿ ಪ್ರಾಧಿಕಾರ ಪರಿಹಾರ ಹುಡುಕುತ್ತಲೇ ಇದೆ.
ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗಳ ಬಳಿ ಸರಿಯಾಗಿ ಫಿನಿಷಿಂಗ್ ಆಗದಿದ್ದು ವಾಹನಗಳು ಚಲಿಸುವಾಗ ಹಳಕ್ಕೆ ಬಿದ್ದಂತೆ ಅನುಭವವಾಗುತ್ತದೆ.
ಎಕ್ಸ್‌ಪ್ರೆಸ್ ಹೈವೇಯಲ್ಲಿ ಚಾಲನೆ ಮಾಡುವಾಗ 100 ಕಿ.ಮೀ. ವೇಗ ದಾಟುತ್ತಿದ್ದಂತೆ ವಾಹನ ಅಲುಗಾಡುತ್ತದೆ. ಇದರಿಂದಾಗಿ ಸವಾರರ ನಿಯಂತ್ರಣಕ್ಕೆ ವಾಹನ ಸಿಗಲ್ಲ. ಈ ಹಿಂದೆ ಇದ್ದ ಬೆಂ-ಮೈ ಚತುಷ್ಪಥ ರಸ್ತೆಯಲ್ಲಿ ಈ ಸಮಸ್ಯೆ ಇರಲಿಲ್ಲ. ವಾಹನ ಏಕೆ ಅಲುಗಾಡುತ್ತದೆ ಎಂಬುದು ಗೊತ್ತಿಲ್ಲ. – ಯೋಗೀಶ್, ಚಾಲಕ
– ಸು.ನಾ.ನಂದಕುಮಾರ್