Advertisement

ಧೂಮಪಾನ; ಅಪರಾಧ ಫ‌ಲಕ ಕಡ್ಡಾಯ

03:31 PM Jul 26, 2019 | Suhan S |

ಚಿಕ್ಕಬಳ್ಳಾಪುರ: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಈ ಕುರಿತು ಸರ್ಕಾರ ಹೊರಡಿಸಿರುವ ಅಧಿಕೃತ ಸೂಚನೆಯನ್ನು ಶಾಲಾ ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ, ಅಂಗಡಿ, ಬಸ್‌ ನಿಲ್ದಾಣ, ದೇವಾಲಯ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ತಂಬಾಕು ಮಾರಾಟ ಅಂಗಡಿಗಳಲ್ಲಿ ಧೂಮಪಾನ ಅಪರಾಧ ಕುರಿತು ಸೂಚನಾ ಫ‌ಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಅಪರ ಜಿಲ್ಲಾಧಿಕಾರಿ ಆರತಿ ಆನಂದ್‌ ತಿಳಿಸಿದರು.

Advertisement

ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮ (ಕೊಟ್ಪಾ) ತ್ರೈಮಾಸಿಕ ಪರಿಶೀ ಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾನೂನು: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಹಾಗಾಗಿ, ತಂಬಾಕು ಉತ್ಪನ್ನಗಳ ಉದ್ದಿಮೆದಾರರು, ಮಾರಾಟಗಾರರು, ವ್ಯಾಪಾರಸ್ಥರು, ಸಾರ್ವಜನಿಕರು ಕಡ್ಡಾಯವಾಗಿ ಕೋಟ್ಪಾ ಕಾಯಿದೆಯ 2003ರ ಕಾನೂನುಗಳನ್ನು ಪಾಲಿಸಬೇಕಾಗಿದೆ ಎಂದರು.

ಸೂಚನೆ: ಸೆಕ್ಷನ್‌ 4ರ ಅಡಿಯಲ್ಲಿ ಸಾರ್ವಜನಿಕರು ಸೇರುವ, ಓಡಾಡುವ ಸ್ಥಳಗಳಲ್ಲಿ ಯಾರು ಧೂಮ ಪಾನ ಮಾಡ ದಂತೆ ಹಾಗೂ ಸಾರ್ವಜನಿಕ ಸ್ಥಳದ ಮಾಲೀಕರು, ವ್ಯವಸ್ಥಾಪಕರ, ಮುಖ್ಯಸ್ಥರು ಇತರೆ ಜವಾಬ್ದಾರಿಯು ತರು ಕನಿಷ್ಠ 60 ರಿಂದ 45 ಸೆಂ.ಮೀ ಅಳತೆಯ ನಾಮಫ‌ಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಸೂಚನೆ ನೀಡಿದರು. ನಿರ್ಲಕ್ಷಿಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ ಎಂದು ಸೂಚನೆ ನೀಡಿದರು. ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ವಿವಿಧ ರೀತಿ ದುಷ್ಟರಿಣಾಮ ಬೀರುತ್ತಿದೆ. ತಂಬಾಕು ಉತ್ಪನ್ನಗಳಲ್ಲಿ 60ಕ್ಕಿಂತ ಹೆಚ್ಚು ಕ್ಯಾನ್ಸರ್‌ ಉಂಟು ಮಾಡು ವಂಥ ರಾಸಾಯನಿಕಗಳು ಇದ್ದು ಈ ತಂಬಾಕು ಉತ್ಪನ್ನಗಳ ಸೇವನೆಯಿಂದ ಬಾಯಿ ಕ್ಯಾನ್ಸರ್‌ ಧ್ವನಿ ಪೆಟ್ಟಿಗೆ ಕ್ಯಾನ್ಸರ್‌, ಅನ್ನನಾಳದ ಕ್ಯಾನ್ಸರ್‌, ಶ್ವಾಸಕೋಶದ ಕ್ಯಾನ್ಸರ್‌, ದಂತಕ್ಷಯ, ಹೃದಯ ಸಂಬಂಧಿ ಕಾಯಿಲೆಗಳಿಗೆ ನಾಗರಿಕರು ತುತ್ತಾಗುತ್ತಿದ್ದಾರೆ. ಹಾಗಾಗಿ, ಇದನ್ನು ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯವಾಗಿದ್ದು, ಎಲ್ಲ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿ ಎಂದು ಸಭೆಯಲ್ಲಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ದಂಡ ವಿಧಿಸಿ: ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕೆ.ಬಾಬು ರೆಡ್ಡಿ ಮಾತನಾಡಿ, ತಂಬಾಕು ಉತ್ಪನ್ನಗಳ ಪ್ಯಾಕ್‌ ಮೇಲೆ ಎಚ್ಚರಿಕೆ ಚಿತ್ರ ಇಲ್ಲದ ಉತ್ಪನ್ನಗಳನ್ನು ಮಾರಾಟ ಮಾಡುವುದು, ತಂಬಾಕು ಉತ್ಪನ್ನಗಳ ನೇರ ಪರೋಕ್ಷ ಜಾಹೀರಾತು ಮಾಡು ವುದು ಶಿಕ್ಷಾರ್ಹ ಅಪರಾಧವಾಗಿದೆ. ಶಾಲಾ ಕಾಲೇಜು ಆವ ರಣದ ತಂಬಾಕು ಮಾರಾಟ ಕಂಡುಬಂದರೆ ಅಂತಹ ವರ ವಿರುದ್ಧ ದಂಡ ವಿಧಿಸಿ ತಂಬಾಕು ಮಾರಾಟ ಮಾಡ ದಂತೆ ಎಚ್ಚರಿಕೆ ಸೂಚನೆ ನೀಡಲಾಗಿದೆ ಎಂದರು.

Advertisement

ಸೆಕ್ಷನ್‌-7,8 ಮತ್ತು 9ರ ಪ್ರಕಾರ ಸರ್ಕಾರದ ಆದೇಶದಂತೆ ರಾಜ್ಯದಲ್ಲಿ ಬಿಡಿ ಬಿಡಿಯಾಗಿ ಮಾರಾಟ ಮಾಡುತ್ತಿರುವ ಸಿಗರೇಟು, ಬೀಡಿ ಹಾಗೂ ಕಡ್ಡಿಪುಡಿ ಮತ್ತು ಇತರೆ ಜಗಿಯುವ ತಂಬಾಕು ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಉಲ್ಲಂಘಿಸಿದಲ್ಲಿ ಕೊಟ್ಪಾ ಕಾಯ್ದೆ ಕಲಂ 20ರ ಅಡಿಯಲ್ಲಿ ದಂಡನೆಗೆ ಒಳಪಡಿಸಲಾಗುವುದು ಎಂದರು.

ಕುಷ್ಟರೋಗ ನಿಯಂತ್ರಣಾಧಿಕಾರಿ ಚಂದ್ರ ಮೋಹನ್‌, ಜಿಲ್ಲಾ ಪಿಯು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸೀತಾರಾಮರೆಡ್ಡಿ ಸೇರಿದಂತೆ ತಾಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next