Advertisement

ಅಕಾಡೆಮಿ ಆಯ್ಕೆಯಲ್ಲಿ ಪ್ರಾದೇಶಿಕ ಅಸಮಾಧಾನದ ಹೊಗೆ

01:12 AM Mar 25, 2024 | Team Udayavani |

ಉಡುಪಿ: ಲೋಕಸಭೆ ಚುನಾವಣೆ ಘೋಷಣೆಯ ಮುನ್ನಾದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಒಮ್ಮೆಗೆ 18 ಅಕಾಡೆಮಿ, ಪ್ರಾಧಿಕಾರಗ ಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಿರುವುದು ಹಲವು ರೀತಿಯ ಅಸಮಾಧಾನ, ಗೊಂದಲಕ್ಕೆ ಕಾರಣವಾಗಿದೆ.

Advertisement

ಸಾಮಾಜಿಕ ನ್ಯಾಯ, ಪ್ರಾದೇ ಶಿಕ ಸಮಾನತೆ ಇತ್ಯಾದಿಗಳಿಗೆ ಮನ್ನಣೆ ನೀಡದೆ ಪ್ರಾಧಿಕಾರ, ಅಕಾಡೆಮಿಗೆ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಉ.ಕ. ಪ್ರಾತಿನಿಧ್ಯವೇ ಇಲ್ಲ
ಯಕ್ಷಗಾನ ಅಕಾಡೆಮಿಗೆ ಅಧ್ಯಕ್ಷರು ಹಾಗೂ 10 ಸದಸ್ಯರನ್ನು ನೇಮಿಸಲಾ ಗಿದೆ. ಅಧ್ಯಕ್ಷ ಸ್ಥಾನ ಉಡುಪಿ ಜಿಲ್ಲೆಗೆ ನೀಡಿದರೆ 9 ಸದಸ್ಯರು ದ.ಕ., ಕಾಸರಗೋಡಿನ ಒಬ್ಬರಿಗೆ ಅವಕಾಶ ನೀಡಲಾಗಿದೆ. ಸದಸ್ಯರಲ್ಲಿ ಉಡುಪಿಯವರು ಯಾರೂ ಇಲ್ಲ. ಯಕ್ಷಗಾನ ವನ್ನು ಉಳಿಸಿ, ಬೆಳೆಸುವಲ್ಲಿ ಹಾಗೂ ಆಧುನಿಕತೆಯ ಹೊಡೆತದ ನಡುವೆಯೂ ಕಲೆ ಸತ್ವ ಉಳಿಸಲು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಷ್ಟೇ ಕೊಡುಗೆ ಉತ್ತರ ಕನ್ನಡ ಜಿಲ್ಲೆಯೂ ನೀಡಿದೆ. ಅಕಾಡೆಮಿಗೆ ಪದಾಧಿಕಾರಿಗಳ ನೇಮಕದ ಸಂದರ್ಭದಲ್ಲಿ ಉ.ಕ.ಗೆ ಒಂದೂ ಸ್ಥಾನ ನೀಡಿಲ್ಲ. ಯಕ್ಷಗಾನದಲ್ಲಿ ತೆಂಕು, ಬಡಗು, ಬಡಬಡಗು ಹಾಗೂ ದೊಡ್ಡಾಟ ಪ್ರಮುಖವಾಗಿದೆ. ದಕ್ಷಿಣ ಕನ್ನಡದ ಪ್ರಮುಖ ಮೇಳಗಳು ತೆಂಕು ತಿಟ್ಟಿನ ವಾದರೆ, ಉಡುಪಿ, ಉ.ಕ.ದಬಹುಪಾಲು ಮೇಳಗಳು ಬಡಗು ತಿಟ್ಟಿನಂತೆ ನಡೆ ಯುತ್ತಿವೆ. ತೀರ ಉತ್ತರ ಕನ್ನಡಕ್ಕೆ ಸೀಮಿತವಾಗಿದ್ದ ಬಡಬಡಗು ತಿಟ್ಟು ಕಾಣ ಸಿಗುತ್ತದೆ. ಅದರಿಂದಾಚೆಗೆ ದೊಡ್ಡಾಟ ಚಾಲ್ತಿಯಲ್ಲಿದೆ. ಆದರೆ, ಇಲಾಖೆಯಿಂದ ಯಕ್ಷಗಾನ ಅಕಾಡೆಮಿಗೆ ಸದಸ್ಯರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಬೇರೆ ಜಿಲ್ಲೆಗಳನ್ನು ಪರಿಗಣಿಸದೇ ಒಂದೇ ಜಿಲ್ಲೆಗೆ ಮನ್ನಣೆ ನೀಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ವಿವಿಧ ಅಕಾಡೆಮಿಯಲ್ಲೂ ಇದೇ ಕಥೆ
ತುಳು ಸಾಹಿತ್ಯ ಅಕಾಡೆಮಿಯಲ್ಲೂ ಪ್ರಾದೇಶಿಕ ಅಸಮಾನತೆ ಆರೋಪ ಕೇಳಿ ಬರುತ್ತಿದೆ. ಅಧ್ಯಕ್ಷರು ಸಹಿತವಾಗಿ ಬಹುಪಾಲು ಸದಸ್ಯರನ್ನು ದ.ಕ. ಜಿಲ್ಲೆಯಿಂದಲೇ ಆಯ್ಕೆ ಮಾಡಲಾಗಿದೆ. ಉಡುಪಿಗೆ ಕೇವಲ 2 ಸ್ಥಾನ ಮಾತ್ರ ನೀಡಲಾಗಿದೆ. ಕಾಸರಗೋಡಿನಲ್ಲಿ ತುಳು ಭಾಷಿಕರು ಮತ್ತು ಸಾಧಕರಿ ದ್ದರೂ ಯಾರನ್ನೂ ಗಣನೆಗೆ ತೆಗೆದು ಕೊಂಡಿಲ್ಲ ಎನ್ನಲಾಗುತ್ತಿದೆ.

ಒಂದೇ ವರ್ಗಕ್ಕೆ ಆದ್ಯತೆ?
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಜತೆಗೆ ಐದು ಸದಸ್ಯರ ಸ್ಥಾನವನ್ನು ದ.ಕ. ಜಿಲ್ಲೆಗೆ ನೀಡಲಾಗಿದೆ. ಉ.ಕ. ಜಿಲ್ಲೆಗೆ 2 ಸದಸ್ಯ ಸ್ಥಾನ ನೀಡಿದರೆ ಉಡುಪಿಗೆ ಒಂದು ಸ್ಥಾನ ಮಾತ್ರ ಕೊಡಲಾಗಿದೆ. ಪ್ರಾದೇಶಿಕ ಅಸಮಾನತೆಯ ಜತೆಗೆ ಕೊಂಕಣಿ ಮಾತನಾಡುವ ಮತೀಯ ಅಲ್ಪಸಂಖ್ಯಾಕ ಸಮೂದಾಯಕ್ಕೆ ಹೆಚ್ಚಿನ ಮನ್ನಣೆ ನೀಡಲಾಗಿದೆ. ಇನ್ನೂಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಲ್ಲೂ ಉಡುಪಿಯನ್ನು ಅವಗಣಿಸಲಾಗಿದೆ. 10 ಸದಸ್ಯರಲ್ಲಿ ತಲಾ 1 ಸ್ಥಾನವನ್ನು ಉಡುಪಿ, ಚಿಕ್ಕ ಮಗಳೂರು ಹಾಗೂ ಬೆಂಗಳೂರಿಗೆ ನೀಡಿ, ಅಧ್ಯಕ್ಷ ಸ್ಥಾನ ಸಹಿತ ಉಳಿದ 7 ಸದಸ್ಯತ್ವವನ್ನು ದ.ಕ.ಕ್ಕೆ ನೀಡಲಾಗಿದೆ.

Advertisement

ಹೊಸ ಸರಕಾರ ರಚನೆಯಾದ ಅನಂತರದಲ್ಲಿ ನಿಗಮ ಮಂಡಳಿಗಳ ನೇಮಕಕ್ಕೆ ಸಾಕಷ್ಟು ಕಾಲಾವಕಾಶ ಇದ್ದರೂ ಲೋಕಸಭೆ ಅಧಿಸೂಚನೆಗೆ ಒಂದು ದಿನ ಮೊದಲು ಏಕಾಏಕಿ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿರುವುದು ಬೇರೆಯೇ ಸಂದೇಶ ರವಾನೆಯಾಗುತ್ತಿದೆ. ನೀತಿ ಸಂಹಿತೆ ಜಾರಿಯಾದ ಅನಂತರದಲ್ಲಿ ಹೊಸದಾಗಿ ಅಧಿಸೂಚನೆ ಹೊರಡಿಸಲು ಸಾಧ್ಯವಾಗುವುದಿಲ್ಲ. ಅಸಮಾನತೆಯಿದ್ದರೂ ಅದನ್ನು ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಾಗುತ್ತದೆ ಎಂಬುದನ್ನು ತಿಳಿದೇ ಹೀಗೆ ಮಾಡಿದ್ದಾರೆ. ಒಂದೇ ಜಿಲ್ಲೆ ಕೇಂದ್ರಿತವಾಗಿ ಆಯ್ಕೆ ನಡೆದಿರುವುದು ಸರಿಯಲ್ಲ ಎಂದು ಕೆಲವರು ಅಸಮಾಧಾನಹೊರ ಹಾಕಿದ್ದಾರೆ.
– ಶಿವರಾಜ್‌ ತಂಗಡಗಿ, ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next