Advertisement
ಸುದ್ದಿಗೋಷ್ಠಿಯ ಮೊದಲಿಗೆ ನಾನು ಪತ್ರಕರ್ತರೊಂದಿಗೆ ಬೆಳೆದಿದ್ದೇನೆ ಮತ್ತು ಅವರು ನನ್ನನ್ನು ಬೆಳೆಸಿದ್ದಾರೆ. ಕೆಲವರು ನಮ್ಮನ್ನಗಲಿದ್ದಾರೆ ಅವರೆಲ್ಲರನ್ನೂ ನಾನು ನೆನಪಿಸಿಕೊಳ್ಳುತ್ತೇನೆ ಎಂದರು.
Related Articles
Advertisement
ದೇಶದಲ್ಲಿ ಎಲ್ಲ ರಾಜಕೀಯ ಪಕ್ಷಗಳಲ್ಲಿ ದ್ವಂದ್ವತೆ ಕಾಣಲಿಕ್ಕೆ ಪ್ರಾರಂಭವಾಗಿದ್ದು ಅವುಗಳನ್ನು ರಾಜಕೀಯ ಪಕ್ಷಗಳು ಮೆಟ್ಟಿ ನಿಲ್ಲಬೇಕಿದೆ. ಯಾವ ಪಕ್ಷದಲ್ಲಿ ಹಿರಿತನಕ್ಕೆ ಬೆಲೆ ಇಲ್ಲವೋ ಅದು ಒಳ್ಳೆಯದಲ್ಲ , ಎಲ್ಲಾ ಪಕ್ಷಗಳು ಹಿರಿತನಕ್ಕೆ ಬೆಲೆ ನೀಡಬೇಕು ಹಾಗಂತ ಅವರದ್ದೇ ಪಾಲಿಸಬೇಕೆಂದು ಹೇಳುವುದಿಲ್ಲ ಎಂದರು.
ಇಂದಿರಾ ಗಾಂಧಿ ಅವರ ಶಕೆ ಮುಗಿದ ಬಳಿಕ ರಾಜೀವ್ ಗಾಂಧಿ ಅವರ ಶಕೆ ಪ್ರಾರಂಭವಾಯಿತು. ನನ್ನನ್ನು ಕೇಂದ್ರ ಮಂತ್ರಿಯನ್ನಾಗಿ ಮಾಡಿದ್ದೇ ಅವರು .ರಾಜೀವ್ ಗಾಂಧಿ ಅವರ ಕೊಡುಗೆ ಅಪಾರ ,ಅವರು ಹತ್ತಾರು ವರ್ಷ ನಮ್ಮೊಂದಿಗೆ ಇರಬೇಕಾಗಿತ್ತು ಆದರೆ ವಿಧಿಯ ಲಿಖೀತ ಬೇರೆಯೇ ಆಗಿತ್ತು ಎಂದರು.
ಸಾರ್ವಜನಿಕ ಜೀವನದಲ್ಲಿ ರಾಗ ದ್ವೇಷಗಳನ್ನು ದೂರ ಇಡಬೇಕಾದುದ್ದು ಅವಶ್ಯ , ಅಧಿಕಾರ ಪಡೆದ ಬಳಿಕ ಎಲ್ಲ ಸಮಾಜಗಳನ್ನು ಒಂದೇ ದೃಷ್ಟಿಯಿಂದ ನೋಡಬೇಕು ಎಂದರು.
ನನಗೆ ನೋವಾದದ್ದು ವಯಸ್ಸನ್ನು ಕಾರಣವನ್ನಾಗಿ ಮಾಡಿಕೊಂಡು ಒಬ್ಬ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತನನ್ನು ಸೈಡ್ ಲೈನ್ ಮಾಡುವುದು ಎಷ್ಟು ಸೂಕ್ತ ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತಲೆ ಇದೆ ಎಂದು ನೋವು ತೋಡಿಕೊಂಡರು.
ವಯಸ್ಸು ನಿಮ್ಮ ಮನೋಸ್ಥಿತಿಯಲ್ಲಿ ನಿಲ್ಲುತ್ತದೆ. ಕೆಲವರು 40 ರಲ್ಲಿ 80 ವ ವಯಸ್ಸಿನಂತಿರಬಹುದು. ಇನ್ನು ಕೆಲವರು 80 ರ ಗಡಿಯಲ್ಲಿ ಚುರುಕಾಗಿರಬಹುದು. ನನ್ನ ನಡೆದಾಟದಲ್ಲೂ ನಿಧಾನಗತಿ ಬಂದಿದೆ. ಪ್ರಾಯ ಎನ್ನುವಂತಹದ್ದು ತರತಕ್ಕಂತಹ ಪ್ರಾಕೃತಿಕ ಬದಲಾವಣೆ ಎಂದರು.
ಪ್ರತಿಯೊಬ್ಬರಿಗೂ ಸ್ವಾಭಿಮಾನ, ಆತ್ಮಗೌರವ ಎಲ್ಲರಿಗೂ ಅಮೂಲ್ಯವಾದುದ್ದು , ತಲೆಮಾರುಗಳು ಬದಲಾದರೂ ಮೌಲ್ಯಗಳು ಬದಲಾಗುವುದಿಲ್ಲ ಎಂದರು.
ನನಗೆ ಸೋನಿಯಾ ಗಾಂಧಿ ಅವರು ಅಪಾರ ಗೌರವ ನೀಡಿದ್ದಾರೆ. ಅವರ ಆರೋಗ್ಯ ಸುಧಾರಿಸಲಿ ಎನ್ನುವುದು ನನ್ನ ಪ್ರತಿನಿತ್ಯದ ಪ್ರಾರ್ಥನೆ. ನನಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನೂ ಕೊಟ್ಟಿದೆ.ಈಗ ನಾನು ಪಕ್ಷವನ್ನು ತೊರೆಯುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದರು.
ನಿವೃತ್ತಿ ಎನ್ನುವಂತಹ ಪದ ನನ್ನ ಡಿಕ್ಷನರಿಯಲ್ಲೇ ಇಲ್ಲ
ಕೆಲವರಿಗೆ ನನ್ನನ್ನು ರಾಜಕೀಯದಿಂದ ನಿವೃತ್ತಿ ಮಾಡಬೇಕೆಂಬ ಉದ್ದೇಶ ಇರಬೇಕು. ಆದರೆ ನಾನು ನಿವೃತ್ತಿಯಾಗುವುದೇ ಇಲ್ಲ ಎಂದರು.
ರಾಹುಲ್ ಗಾಂಧಿ ಬಗ್ಗೆ ಕೇಳಿದಾಗ ನಾನು ಉಪಾಧ್ಯಕ್ಷರ ವಿಚಾರದಲ್ಲಿ ಮಾತನಾಡುವುದಿಲ್ಲ , ಅಧ್ಯಕ್ಷರ ವಿಚಾರದಲ್ಲಿ ಮಾತನಾಡುತ್ತೇನೆ ಎಂದರು.