Advertisement

ಕೆಪಿಸಿಸಿ ಕಚೇರಿಯಲ್ಲಿ ಎಸ್ಎಂಕೆ ಫೋಟೋ ತೆರವು, ಪರಂ ಗರಂ

06:16 PM Sep 16, 2017 | Team Udayavani |

ಬೆಂಗಳೂರು: ಕಾಂಗ್ರೆಸ್ ಪಕ್ಷದ ಮಾಜಿ ಹಿರಿಯ ಮುಖಂಡ, ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಭಾವಚಿತ್ರವನ್ನು ತೆಗೆದ ಕಾರ್ಯಕರ್ತನನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

Advertisement

ಕೆಪಿಸಿಸಿ ಕಚೇರಿಯ ಮೊದಲನೇ ಮಹಡಿಯ ಕೋಣೆಯಲ್ಲಿದ್ದ ಎಸ್ಎಂ ಕೃಷ್ಣ ಫೋಟೋವನ್ನು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ತೆಗೆದು, ಕೆಳಗಿಟ್ಟು ಪರಾರಿಯಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಕಚೇರಿಯಲ್ಲಿ ಹೈಡ್ರಾಮಾ ನಡೆದಿತ್ತು. ಬಳಿಕ ಪರಮೇಶ್ವರ್ ಅವರನ್ನು ಎಸ್ಎಂಕೆ ಫೋಟೋವನ್ನು ಗೋಡೆಗೆ ಅಳವಡಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಫೋಟೋ ತೆಗೆದು ಕೆಳಗಿಟ್ಟ ವಿಚಾರವಾಗಿ ಕೆಪಿಸಿಸಿ ಕಚೇರಿ ಸಿಬ್ಬಂದಿ ಮತ್ತು ಕಾರ್ಯಕರ್ತನ ನಡುವೆ ವಾಗ್ವಾದ ನಡೆದಿತ್ತು. ತದನಂತರ ಕಚೇರಿಗೆ ಪರಮೇಶ್ವರ್ ಆಗಮಿಸಿದ್ದರು. ವಿಷಯ ತಿಳಿದ ಪರಮೇಶ್ವರ್ ಅವರು, ಎಸ್ಎಂಕೆ ಫೋಟೋ ತೆಗೆದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಅವರು ನಮ್ಮ ಪಕ್ಷ(ಕಾಂಗ್ರೆಸ್)ವನ್ನು ತೊರೆದಿರಬಹುದು. ಆದರೆ ಅವರ ಮೇಲೆ ಗೌರವವಿದೆ. ಎಸ್ಎಂಕೆ ಕೆಪಿಸಿಸಿ ಮಾಜಿ ಅಧ್ಯಕ್ಷರು, ಮಾಜಿ ಸಿಎಂ ಆಗಿದ್ದವರು, ಹಾಗಾಗಿ ಫೋಟೋ ತೆಗೆದಿದ್ದು ಸರಿಯಲ್ಲ ಎಂದು ಹೇಳಿ, ತಾವೇ ಎಸ್ಎಂಕೆ ಫೋಟೋವನ್ನು ಮತ್ತೆ ಗೋಡೆಗೆ ಅಳವಡಿಸಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next