Advertisement
ಕೇಪ್‌ಟೌನ್ ಟೆಸ್ಟ್ ಪಂದ್ಯದ “ಚೆಂಡು ವಿರೂಪ’ ಪ್ರಕರಣ ದ ವೇಳೆ ಸ್ಮಿತ್ ಆಸೀಸ್ ನಾಯಕರಾಗಿದ್ದರೆ, ವಾರ್ನರ್ ಉಪನಾಯಕರಾಗಿದ್ದರು. ಆದರೆ ವಿಶ್ವಕಪ್ ವೇಳೆ ಇವರು ಸಾಮಾನ್ಯ ಆಟಗಾರರಾಗಷ್ಟೇ ಆಗಿರುತ್ತಾರೆ. ತಂಡದ ನಾಯಕತ್ವ ಆರನ್ ಫಿಂಚ್ ಪಾಲಾಗಿದೆ. ನಿಷೇಧದ ಬಳಿಕ ಪಾಕಿಸ್ಥಾನ ವಿರುದ್ಧದ ಅಂತಿಮ 2 ಪಂದ್ಯಗಳಲ್ಲಿ ವಾರ್ನರ್ ಮತ್ತು ಸ್ಮಿತ್ ಆಡಬಹುದಿತ್ತಾದರೂ ಆಯ್ಕೆಗಾರರು ಇವರನ್ನು ಪರಿಗಣಿಸಲಿಲ್ಲ. ಇಬ್ಬರೂ ಐಪಿಎಲ್ ಆಡಲು ಭಾರತಕ್ಕೆ ಆಗಮಿಸಿದರು. ಇವರಲ್ಲಿ ವಾರ್ನರ್ ರನ್ ಮಳೆ ಸುರಿಸುತ್ತಿದ್ದಾರೆ.
ಆರನ್ ಫಿಂಚ್ (ನಾಯಕ), ಉಸ್ಮಾನ್ ಖ್ವಾಜಾ, ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಶಾನ್ ಮಾರ್ಷ್, ಗ್ಲೆನ್ ಮ್ಯಾಕ್ಸ್ ವೆಲ್, ಮಾರ್ಕಸ್ ಸ್ಟೋಯಿನಿಸ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೇ ರಿಚರ್ಡ್ ಸನ್, ನಥನ್ ಕೋಲ್ಟರ್ ನೈಲ್, ಜಾಸನ್ ಬೆಹ್ರಾನ್ಡಾಫ್ , ನಥನ್ ಲಿಯೋನ್, ಆ್ಯಡಂ ಝಂಪ.