Advertisement
ಇನ್ನು, ಇಡೀ ಚಿತ್ರ ಪ್ರಿಯಾಂಕ ಅವರ ತವರೂರಾದ ಕೊಲ್ಕತ್ತಾದಲ್ಲೇ ಚಿತ್ರೀಕರಣವಾಗಿದೆ. ಇದರೊಂದಿಗೆ ಹೊಸ ಸುದ್ದಿಯೆಂದರೆ, ಮಹಿಳಾ ಪ್ರಧಾನ ಚಿತ್ರವೊಂದಕ್ಕೆ ಬಿಡುಗಡೆ ಮೊದಲೇ ವಿತರಣೆಯ ಹಕ್ಕು ಪಡೆಯಲು ಮುಂದಾಗಿರುವುದು. ಹೌದು, “ದೇವಕಿ’ ಚಿತ್ರದ ವಿತರಣೆ ಹಕ್ಕನ್ನು ಕಾರ್ತಿಕ್‌ಗೌಡ (ಕೆಜಿಎಫ್) ಅವರು ಪಡೆದಿದ್ದಾರೆ.
Related Articles
Advertisement
ಸೆನ್ಸಾರ್‌ಗೆ ಇನ್ನಷ್ಟೇ ಹೋಗಬೇಕಿದ್ದು, ಸೆನ್ಸಾರ್ ಬಳಿಕ ಆ ಬಗ್ಗೆ ಮಾತುಕತೆ ನಡೆಸಲಾಗುವುದು. ಎಲ್ಲವೂ ಅಂದುಕೊಂಡಂತೆ ನಡೆದರೆ ಮೇ ಅಂತ್ಯ ಇಲ್ಲವೇ ಜೂನ್‌ನಲ್ಲಿ “ದೇವಕಿ’ ಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎಂದು ವಿವರ ಕೊಡುತ್ತಾರೆ ನಿರ್ದೇಶಕ ಲೋಹಿತ್.
ಚಿತ್ರದ ವಿಶೇಷ ಪಾತ್ರದಲ್ಲಿ ಕಿಶೋರ್, ಬಾಲಿವುಡ್ ನಟ ಸಂಜೀವ್ ಜೆಸ್ವಾಲ್ ಸೇರಿದಂತೆ ಬೆಂಗಾಲಿಯ ಬಹುತೇಕ ರಂಗಭೂಮಿ ಕಲಾವಿದರೂ ಸಹ ಚಿತ್ರದಲ್ಲಿ ನಟಿಸಿದ್ದಾರೆ. ಸುಮಾರು 32 ದಿನಗಳ ಕಾಲ ನಡೆದ ಚಿತ್ರೀಕರಣದಲ್ಲಿ ಬಹುತೇಕ ಭಾಗ ಕೊಲ್ಕತ್ತಾದಲ್ಲೇ ಚಿತ್ರೀಕರಿಸಲಾಗಿದೆ.
ಸಾಹಸ ನಿರ್ದೇಶಕ ರವಿವರ್ಮ ಅವರು, ರಾತ್ರಿ ವೇಳೆಯಲ್ಲೊಂದು ಅದ್ಧೂರಿ ವೆಚ್ಚದಲ್ಲಿ ಚೇಸಿಂಗ್ ದೃಶ್ಯವನ್ನು ಕಂಪೋಸ್ ಮಾಡಿದ್ದಾರೆ. ಉಳಿದಂತೆ ಚಿತ್ರಕ್ಕೆ ಎಚ್.ಸಿ.ವೇಣು ಅವರು ಛಾಯಾಗ್ರಾಹಕರು. ನೊಬಿನ್ ಪಾಲ್ ಅವರು ಸಂಗೀತ ನೀಡಿದ್ದಾರೆ. ರವಿಚಂದ್ರ ಅವರ ಸಂಕಲನವಿದೆ. ಬಹುತೇಕ “ಮಮ್ಮಿ’ ಟೀಮ್ ಇಲ್ಲಿ ಕೆಲಸ ಮಾಡಿದೆ ಎನ್ನುತ್ತಾರೆ ಅವರು.