Advertisement

ಜಾರಿ ಬಿದ್ದರೂ ಯಾಕೀ ನಗು…;ಕಂಬ್ಳಿ ಹುಳದಿಂದ ಹಾಡು ಬಂತು!

12:35 PM Aug 19, 2022 | Team Udayavani |

ಸಿನಿಮಾದ ಟೈಟಲ್‌ ವಿಭಿನ್ನವಾಗಿದ್ದರೆ ಪ್ರೇಕ್ಷಕರ ಗಮನವನ್ನು ಬೇಗನೇ ಸೆಳೆಯಬಹುದು ಎಂಬ ನಂಬಿಕೆ ಸಿನಿಮಾ ಮಂದಿಯಲ್ಲಿದೆ. ಅದೇ ಕಾರಣದಿಂದ ವಿಭಿನ್ನ ಟೈಟಲ್‌ ಗಳ ಹುಡುಕಾಟದಲ್ಲಿ ರುತ್ತವೆ ಚಿತ್ರ ತಂಡಗಳು.

Advertisement

ಇದೇ ರೀತಿ ಒಂದು ಹೊಸ ಬಗೆಯ ಶೀರ್ಷಿಕೆಯೊಂದಿಗೆ ಸಿನಿಮಾ ಕನಸು ಕಂಡ ತಂಡ “ಕಂಬ್ಳಿಹುಳ’. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಈ ಚಿತ್ರದ ಮೊದಲ ಹಾಡು ಇತ್ತೀ ಚೆಗೆ ಬಿಡುಗಡೆಯಾಗಿದೆ. “ಜಾರಿ ಬಿದ್ದರೂ ಯಾಕೀ ನಗು…’ಎಂಬ ಹಾಡು ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಎರಡು ಮುದ್ದಾದ ಜೋಡಿಯ ನವೀರಾದ ಪ್ರೇಮಕಥೆಯನ್ನು ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ಮಹದೇವ್‌ ಸ್ವಾಮಿ, ರವಿ ಧನ್ಯನ್‌ ಸಾಹಿತ್ಯದ ಹಾಡಿಗೆ ವಿಜಯ್‌ ಪ್ರಕಾಶ್‌ -ಸಂಗೀತ ರವೀಂದ್ರನಾಥ್‌ ಧ್ವನಿಯಾಗಿದ್ದು, ಶಿವ ಪ್ರಸಾದ್‌ ಸಂಗೀತದ ಹಾಡಿನಲ್ಲಿ ರಂಗಭೂಮಿ ಕಲಾವಿದ ಅಂಜನ್‌ ನಾಗೇಂದ್ರ ಹಾಗೂ ಅಶ್ವಿ‌ತಾ ಆರ್‌ ಹೆಗ್ಡೆ ಜೋಡಿ ನಟಿಸಿದೆ.

ಈ ಚಿತ್ರವನ್ನು ನವನ್‌ ಶ್ರೀನಿವಾಸ್‌ ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಶ್ರೀನಿವಾಸ್‌, “ಕಿರುಚಿತ್ರದಿಂದ ಆರಂಭವಾದ ನನ್ನ ಜರ್ನಿ ಈಗ “ಕಂಬ್ಳಿಹುಳ’ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಗುರುತಿಸಿಕೊಳ್ಳುವ ಹಂತಕ್ಕೆ ಬಂದಿದೆ. ಮಲೆನಾಡಿನ ಹಿನ್ನೆಲೆಯಲ್ಲಿ ನಡೆಯುವ ಚಿತ್ರವಿದು. ಶೃಂಗೇರಿ, ಸಕಲೇಶಪುರ, ತೀರ್ಥಹಳ್ಳಿ, ಸುತ್ತಮುತ್ತ ಶೂಟಿಂಗ್‌ ಮಾಡಿದ್ದೇವೆ. ಇದೊಂದು ಎಮೋಶನಲ್‌ ಜರ್ನಿ. ಎರಡು ಕಾಲು ಘಂಟೆ ನಗು,
ಅಳು, ಕಾಮಿಡಿ ಎಲ್ಲವೂ ಇದೆ’ ಎಂದರು.

ಗ್ರೇ ಸ್ಕ್ವೇರ್‌ ಸ್ಟುಡಿಯೋಸ್‌ ಬ್ಯಾನರ್‌ನಡಿ ತಯಾರಾಗಿರುವ “ಕಂಬ್ಳಿಹುಳ ನೈಜ ಘಟನೆಯಾಧಾರಿತ ಸಿನಿಮಾವಾಗಿದೆ. ಈ ಚಿತ್ರದಲ್ಲಿ ರೋಹಿತ್‌ ಕುಮಾರ್‌, ದೀಪಕ್‌ ರೈ ಪಾಣಾಜೆ, ಸಂಧ್ಯಾ ಅರಕೆರೆ, ಸಂಪತ್‌ ಶೆಟ್ಟಿ ಸೇರಿದಂತೆ ಹಲವು ಯುವ ಪ್ರತಿಭೆಗಳು ನಟಿಸಿದ್ದಾರೆ. ವಿಜಯ್, ಸವೀನ್‌, ಪುನೀತ್‌ ಹಾಗೂ ಗುರು ಬಂಡವಾಳ ಹೂಡಿದ್ದು, ಸತೀಶ್‌ ರಾಜೇಂದ್ರ ಛಾಯಾಗ್ರಹಣ, ಜಿತೇಂದ್ರ ನಾಯಕ ಮತ್ತು ರಾಘವೇಂದ್ರ ಟಿ.ಕೆ ಸಂಕಲನ ಸಿನಿಮಾಕ್ಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next