Advertisement

Smartphone Addiction: ಹೆತ್ತವರು ಎಂದಿಗೂ ಎಡವದಿರಿ

03:19 PM Feb 03, 2024 | Team Udayavani |

ಹಿಂದೆಲ್ಲ ಕೂಡು ಕುಟುಂಬದ ಪರಿಕಲ್ಪನೆ ಒಗ್ಗಟ್ಟಿನ ಶಕ್ತಿಯನ್ನು ಕಲಿಸಿತ್ತು. ಭಜನೆ, ಊಟ, ಪ್ರವಾಸ ಹೀಗೆ ಎಲ್ಲದರಲ್ಲೂ ಖುಷಿ ಕಾಣುವ ಬದುಕು ಅದಾಗಿತ್ತು. ಆದರೆ ಈಗ ಕಾಲ ಬದಲಾಗಿದೆ.

Advertisement

ಇಂದು ವಿಭಕ್ತ ಕುಟುಂಬಗಳು ಪ್ರಚಲಿತದಲ್ಲಿದ್ದು, ಅದೆಷ್ಟೋ ಪೋಷಕರು ಮಕ್ಕಳಿಗೆ ಕೆಲ ನಿರ್ದಿಷ್ಟ ವಿಚಾರಗಳ ಬಗ್ಗೆ ನೈತಿಕ ಶಿಕ್ಷಣವನ್ನು ಸಹ ನೀಡಲು ವಿಫ‌ಲವಾಗಿದ್ದಾರೆ.

ಮನೆಯಲ್ಲಿದ್ದರೆ ಮೊಬೈಲ್‌ ಒಳಗೆಯೇ ಬಿದ್ದಿರುತ್ತಾರೆಂದು ವಸತಿ ಗೃಹ (ಹಾಸ್ಟೆಲ್) ಗಳಿಗೆ ತಂದು ಸೇರಿಸಿರುತ್ತಾರೆ. ಅದರ ಮೂಲ ಉದ್ದೇಶ ಮಕ್ಕಳು ಮೊಬೈಲ್‌ ಜಗತ್ತಿನಿಂದ ದೂರವಿದ್ದು ಆಡಿಕೊಂಡು ಓದಿಕೊಂಡು ಬೆಳೆಯಲಿ ಎಂದು.

ಸಣ್ಣ ವಯಸ್ಸಿನಲ್ಲಿರುವಾಗ ಮಕ್ಕಳಿಗೆ ಮೊಬೈಲ್‌ ಎನ್ನುವುದು ಒಂದು ರೀತಿ ಮಾಯಾಲೋಕದಂತೆ ಕಾಣಲ್ಪಡುತ್ತದೆ. ಮನೆಯಲ್ಲಿ ತಂದೆ, ತಾಯಿ,‌ ಮಕ್ಕಳಿಗೆಪರಸ್ಪರ ಮಾತನಾಡಿ ಸಂವಹನ ಮಾಡಲು ಸಮಯ ಇರುವುದೋ ಇಲ್ಲವೋ ಆದರೆ  ಮೊಬೈಲ್‌ನಲ್ಲಂತೂ ಕಾಲ ಕಳೆಯುತ್ತಾರೆ.

ಹೆಚ್ಚಿನ ಪೋಷಕರು ಮಕ್ಕಳನ್ನು ವಸತಿ ಗೃಹಗಳಿಗೆ ಒಂದು ಶಿಸ್ತಿನ ಚೌಕಟ್ಟಿನಲ್ಲಿ ಬೆಳೆಯಬೇಕೆಂಬ ಆಸೆಯಿಂದ ಅಲ್ಲಿ ಬಿಟ್ಟಿರುತ್ತಾರೆ, ಆ ಮಕ್ಕಳು ಅಲ್ಲಿನ ಶಿಸ್ತಿಗೆ ಒಳ ಪಟ್ಟು ಎರಡು ತಿಂಗಳಾಗಿರುವುದಿಲ್ಲ, ಆಗಲೇ ಹೆತ್ತವರು ಮಕ್ಕಳನ್ನು ಕಾಣಲು ಬರುತ್ತಾರೆ.  ಬಂದವರು ಹಾಗೆ ಹೋಗಿಯಾರಾ? ಇಲ್ಲ.

Advertisement

ತಮ್ಮ ಕೈಯಲ್ಲಿದ್ದ ಮೊಬೈಲ್‌ ಮಹನೀಯನನ್ನು ಆ ಮಗುವಿನ ಕೈಗಿಡುತ್ತಾರೆ. ಆ ಮಗು ತಾನೆ ಏನು ಮಾಡಬಲ್ಲದು, ಸಿಕ್ಕ ಅವಕಾಶವನ್ನು ನಾವೇ ಹೇಳಿಕೊಟ್ಟಿರುವಂತೆ ಸರಿಯಾಗಿಯೇ ಉಪಯೋಗಿಸುತ್ತದೆ.

ಅದು ಎಷ್ಟರ ಮಟ್ಟಿಗೆ ಎಂದರೆ ತಂದೆ ತಾಯಿ ಆ ಮಗುವನ್ನು ಏನಾದರೂ ತಿನ್ನಲು ಕರೆದುಕೊಂಡು ಹೋದರೆ ಆ ಹೆತ್ತವರ ಮುಖ ನೋಡಿ ಮಾತನಾಡುವುದನ್ನು ಬಿಟ್ಟು ಮೊಬೈಲ್‌ ನೋಡಿ ಹುಬ್ಬೇರಿಸುತ್ತಿರುತ್ತದೆ. ಆ ಮಗು ಅದರ ಜಂಜಾಟದಿಂದ ದೂರದಿಂದ ಬೆಳೆಯುತ್ತಿರುತ್ತದೆ, ಬಂದಂತ ತಂದೆ ತಾಯಿ, ಪಾಪ ಮಗು ತುಂಬಾ ದಿನಗಳಾಯ್ತು, ಮೊಬೈಲ್‌ ನೋಡಿ ಎಂದು ಏನೋ ಅದರ ಕೈಗೆ ಕೊಟ್ಟು, ಹೋಗುವಾಗ ತೆಗೆದುಕೊಂಡೆನೋ ಹೋಗುತ್ತಾರೆ.

ಆದರೆ ಆ ಮಗುವಿನ ಮನಸ್ಸು ಮತ್ತೆ ಹಿಂದಿನತಾಂಗಲು ಹೆಚ್ಚು ಕಡಿಮೆ ಕೆಲವು ದಿನ ಹಿಡಿಯುತ್ತದೆ. ಮೊಬೈಲ್‌ ಒಳ್ಳೆಯದೋ ಕೆಟ್ಟದೋ ಅದು ಎರಡನೆಯ ವಿಷಯ ಯಾವುದಕ್ಕೆ ಆದರೂ ನಾವು ಅದನ್ನು ಚಟವಾಗಿ ಮಾಡಿಕೊಂಡರೆ ಅದು ಒಳಿತಲ್ಲ. ಆ ಮಗುವಿನ ಮನಸ್ಸಿನಲ್ಲಿ ತನ್ನ ಹೆತ್ತವರು ಬಂದ ಖುಷಿಗಿಂತ ತಾನು ಬಳಸುವ ಮೊಬೈಲ್‌ ಬಂದ ಖುಷಿಯೇ ದುಪ್ಪಟ್ಟಿರುತ್ತದೆ.

ಏನೇ ಆಗಲಿ ಇಂದು ಅದೆಷ್ಟೋ ತಂತ್ರಜ್ಞಾನಗಳು ಬಂದಿವೆ. ಎಂತಹದೇ ತಂತ್ರಜ್ಞಾನವಿರಲಿ ಅದರ ಎದುರು ಹೆತ್ತವರಿಗಿಂತ ದೊಡ್ಡ ಆಸ್ತಿ ಮತ್ತೂಂದಿಲ್ಲ. ಒಮ್ಮೆ ಯಾರನ್ನಾದರೂ ಕಳೆದುಕೊಂಡರೆ ಅವರು ಮತ್ತೆ ಸಿಗಲಾರರು, ಮೊಬೈಲ್‌ ಯಾವಾಗ ಬೇಕಾದರೂ ಜತೆಗಿಟ್ಟುಕೊಳ್ಳಬಹುದು ಆದರೆ ಹೆತ್ತವರು ? ಹಾಗಾಗಿ ಮೊಬೈಲ್‌ಗೆ ದಾಸರಾಗುವ ಬದಲು ಸಿಕ್ಕ ಸಮಯದಲ್ಲಿ ಓದುವುದು, ಹೊಸ ವಿಚಾರಗಳ ಬಗ್ಗೆ ತಿಳಿಯುವುದು, ತಂದೆ, ತಾಯಿ ಕುಟುಂಬದವರೊಂದಿಗೆ ಬೆರೆಯುವುದು ಅತ್ಯವಶ್ಯಕ.

-ರಾಹುಲ್‌ ಆರ್‌. ಸುವರ್ಣ

ಆಳ್ವಾಸ್‌ ಕಾಲೇಜು, ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next