ತುಮಕೂರು: ದಿನೇ ದಿನೆ ಪ್ರಗತಿಯತ್ತ ಮುನ್ನೆಡೆಯುತ್ತಿರುವ ಶೈಕ್ಷಣಿಕ ನಗರ ತುಮಕೂರಿನಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಮಾರ್ಟ್‌ಸಿಟಿ ಕಾಮಗಾರಿಗಳು ದೇಶದ ವಿವಿಧ ನಗರಗಳ ಸ್ಮಾರ್ಟ್‌ಸಿಟಿ ಕಾಮಗಾರಿಗಳಿಗೆ ಪೈಪೋಟಿ ನೀಡುತ್ತಿದ್ದು, ರಾಜ್ಯದಲ್ಲಿಯೂ ತುಮಕೂರು ಸ್ಮಾರ್ಟ್‌ಸಿಟಿ ಕಾಮಗಾರಿಗಳ ಪ್ರಗತಿಯಲ್ಲಿ ಪ್ರಥಮ ಸ್ಥಾನದಲ್ಲಿದೆ.
ಕಾಮಗಾರಿಗೆ ಪೈಪೋಟಿ: ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ನೂರಾರು ಕೋಟಿ ರೂ.ಗಳ ಕಾಮಗಾರಿ ನಡೆಯುತ್ತಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬಿಡುಗಡೆಯಾಗುವ ಹಣದಿಂದ ಸ್ಮಾರ್ಟ್‌ಸಿಟಿ ಯೋಜ ನೆಯ ಕಾಮಗಾರಿಗಳು ಈಗ ಚುರುಕಾಗಿ ನಡೆಯಲು ಆರಂಭವಾಗಿರುವ ಹಿನ್ನೆಲೆಯಲ್ಲಿ ದೇಶದ 100 ನಗರಗಳಿಗೆ ಮತ್ತು ರಾಜ್ಯದ ಇತರೆ ನಗರಗಳಲ್ಲಿ ನಡೆಯುತ್ತಿರುವ ಕಾಮಗಾರಿಗೆ ಪೈಪೋಟಿ ನೀಡುತ್ತಿದೆ.
ರಾಜ್ಯದಲ್ಲಿ ಪ್ರಥಮ: ಯೋಜನೆಯ ಅನುಷ್ಠಾನ ಮತ್ತು ಅನುದಾನ ಸದ್ಬಳಕೆಯ ಆಧಾರದ ಮೇಲೆ ಆಯ್ಕೆಯಾದ ನಗರಗಳನ್ನು ಭಾರತ ಸರ್ಕಾರವು ರ್‍ಯಾಂಕಿಂಗ್ ಮಾಡುತ್ತಿದ್ದು, ಕಳೆದ ವರ್ಷ ತುಮ ಕೂರು ಸ್ಮಾರ್ಟ್‌ಸಿಟಿ ದೇಶದಲ್ಲಿ 23ನೇ ಸ್ಥಾನದಲ್ಲಿದ್ದು, ಪ್ರಸ್ತುತ 9ನೇ ಸ್ಥಾನಕ್ಕೆ ಏರಿಕೆಯಾಗಿದೆ ಹಾಗೂ ರಾಜ್ಯದ 7 ಸ್ಮಾರ್ಟ್ ಸಿಟಿಗಳಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಪ್ರಥಮ ಸ್ಥಾನಕ್ಕೆ ಏರಿಕೆಯಾಗಿದೆ.
ಕಾಲಕಾಲಕ್ಕೆ ಕೇಂದ್ರಕ್ಕೆ ಮಾಹಿತಿ: ಸ್ಮಾರ್ಟ್‌ಸಿಟಿ ಮಿಷನ್ ಅಡಿಯಲ್ಲಿ ಅನುಷ್ಠಾನಗೊಳಿಸಲಾಗುವ ಯೋಜನೆಗಳ ಪ್ರಗತಿಯ ವೇಗ, ಅನುದಾನ ಸದ್ಬಳಕೆ ಮತ್ತು ಇತರೆ ಮಾಹಿತಿಗಳನ್ನು ಆಧರಿಸಿ ರ್‍ಯಾಂಕಿಂಗ್ ನೀಡಲಾಗುತ್ತದೆ. ತುಮಕೂರು ಸ್ಮಾರ್ಟ್ ಸಿಟಿಯು ಅನುಷ್ಠಾನಗೊಳಿಸುತ್ತಿರುವ ಯೋಜನೆ ಗಳ ಪ್ರಗತಿ ಮತ್ತು ಸರ್ಕಾರದಿಂದ ಬಿಡುಗಡೆಯಾದ ಅನುದಾನದ ಸದ್ಬಳಕೆ ಹಾಗೂ ಇತರೆ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಕಾಲಕಾಲಕ್ಕೆ ಸಲ್ಲಿಸಲಾಗು ತ್ತದೆ. ಈ ಎಲ್ಲಾ ಮಾಹಿತಿಯ ಆಧಾರದ ಮೇಲೆ ಕೇಂದ್ರ ಸರ್ಕಾರವು ಜೂ.12ರಂದು ಬಿಡುಗಡೆ ಮಾಡಿರುವ ರ್‍ಯಾಂಕಿಂಗ್ ಪಟ್ಟಿಯಲ್ಲಿ ತುಮಕೂರು ಸ್ಮಾರ್ಟ್‌ಸಿಟಿ ಪ್ರಥಮ ಸ್ಥಾನ ಗಳಿಸಿದೆ.
ಎಲ್ಲರಿಗೂ ಅಭಿನಂದನೆ: ಯೋಜನೆಯ ಅನುಷ್ಠಾನ ದಲ್ಲಿ ಸಲಹೆ ಮತ್ತು ಸೂಚನೆಗಳನ್ನು ನೀಡುತ್ತಿರುವ ಜನ ಪ್ರತಿನಿಧಿಗಳಿಗೆ, ಸ್ಮಾರ್ಟ್‌ಸಿಟಿ ಅಧ್ಯಕ್ಷರಿಗೆ ಮತ್ತು ಸದಸ್ಯ ಮಂಡಳಿ ಸದಸ್ಯರಿಗೆ, ವಿವಿಧ ಇಲಾ ಖೆಯ ಅಧಿಕಾರಿಗಳಿಗೆ ಹಾಗೂ ಸಮಸ್ತ ನಾಗರಿಕ ಸಹಕಾರವನ್ನು ತುಮಕೂರು ಸ್ಮಾರ್ಟ್‌ಸಿಟಿ ಲಿಮಿ ಟೆಡ್‌ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಭೂಬಾಲನ್ ಸ್ಮರಿಸಿದ್ದು ಎಲ್ಲರನ್ನು ಅಭಿನಂದಿಸಿದ್ದಾರೆ.
ಕಾಮಗಾರಿ ಬಗ್ಗೆ ಮಾಹಿತಿ: ತುಮಕೂರಿನ ಸ್ಮಾರ್ಟ್ ಸಿಟಿಯಿಂದ ನಡೆಯುತ್ತಿರುವ ನಾಲ್ಕು ಲೈನ್ ಹತ್ತು ಕಿ.ಮೀ. ರಿಂಗ್ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಸರ್ವೀಸ್ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದೆ, ಬಾರ್ ಲೈನ್ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದೆ, ಎಂ.ಜಿ.ರಸ್ತೆ, ಅಶೋಕ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಸ್ಮಾರ್ಟ್ ಸಿಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ. ಭೂಬಾಲನ್ ತಿಳಿಸಿದರು.
ತುಮಕೂರು ಸ್ಮಾಟ್‌ಸಿಟಿ ಕಾಮಗಾರಿಗಳಲ್ಲಿ ದೇಶದ 100 ನಗರಗಳ ಪ್ರಗತಿಯಲ್ಲಿ ಕಳೆದ ವರ್ಷ 23ನೇ ಸ್ಥಾನದಲ್ಲಿ ಇತ್ತು. ಈ ವರ್ಷ ಕಾಮಗಾರಿಗಳನ್ನು ಚುರುಕು ಮಾಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ತುಮಕೂರು 9ನೇ ಸ್ಥಾನಕ್ಕೆ ಏರಿಕೆಯಾಗಿದೆ. ರಾಜ್ಯದ 7 ನಗರಗಳಲ್ಲಿ ತುಮಕೂರು ಸ್ಮಾರ್ಟ್‌ಸಿಟಿ ಪ್ರಥಮ ಸ್ಥಾನದಲ್ಲಿದೆ. 750 ಕೋಟಿ ರೂ. ವೆಚ್ಚದ ಕಾಮಗಾರಿಗಳು ಈಗ ಪ್ರಗತಿಯಲ್ಲಿವೆ.
-ಟಿ.ಭೂಬಾಲನ್, ತುಮಕೂರು ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ