Advertisement

ಸ್ಮಾರ್ಟ್‌ಸಿಟಿ ಅಧ್ಯಕ್ಷರ ಬದಲಾವಣೆಗೆ ಪಟ್ಟು

06:37 AM May 22, 2020 | Lakshmi GovindaRaj |

ರಾಮನಗರ: ಗ್ರೇಟರ್‌ ಬೆಂಗಳೂರು, ಬಿಡದಿ ಸ್ಮಾರ್ಟ್‌ ಸಿಟಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನ್ನು ಬದಲಾಯಿಸುವಂತೆ ಸ್ವಯಂ ಪ್ರಾಧಿಕಾರ ದ ಇಬ್ಬರು ನಿರ್ದೇಶಕರು ಮತ್ತು ಬಿಡದಿ ಬಿಜೆಪಿ ಮುಖಂಡರು ಜಿಲ್ಲಾ ಬಿಜೆಪಿ ಅಧ್ಯಕ್ಷರ ನ್ನು  ಆಗ್ರಹಿಸಿದ್ದಾರೆ. ಪ್ರಾಧಿಕಾರದ ಅಧ್ಯಕ್ಷ ವರದರಾಜಗೌಡರು ಸ್ಥಳೀಯ ಬಿಜೆಪಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗದುಕೊಂಡಿಲ್ಲ. ಪಕ್ಷ ಸಂಘಟನೆಯಲ್ಲೂ ತೊಡಗಿಸಿಕೊಂಡಿಲ್ಲ ಎಂದು ಸ್ಥಳೀಯ ಬಿಜೆಪಿ ಮುಖಂಡರು ದೂರಿದ್ದಾರೆ.

Advertisement

ಬೆಂಗಳೂರಿನ ಪ್ರಾಧಿಕಾರದ ಕಚೇರಿ ಬಿಡ ದಿಗೆ ಇನ್ನು ಸ್ಥಳಾಂತರವಾಗಿಲ್ಲ. ವರದರಾಜಗೌಡರು ಜಿಲ್ಲಾ ಯುವ ಬಿಜೆಪಿ ಘಟಕದ ಅಧ್ಯಕ್ಷರೂ ಆಗಿದ್ದಾರೆ. ಆದರೆ ಅವರು ಪಕ್ಷ ಸಂಘಟನೆಗೆ ಪ್ರಯತ್ನಿಸಿಯೇ ಇಲ್ಲ. ಅವರ ಬದಲಿಗೆ ಬಿಡದಿ  ಸ್ಥಳೀಯರೊಬ್ಬರನ್ನು ಪ್ರಾಧಿ ಕಾರದ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಕಾರ್ಯಕರ್ತರು ಬೇಡಿಕೆ ಇಟ್ಟಿದ್ದಾರೆ.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರುದ್ರೇಶ್‌ ಮತ್ತು ಮಾಗಡಿ ಬಿಜೆಪಿ ಘಟಕದ ಅಧ್ಯಕ್ಷ ರಂಗಧಾಮಯ್ಯ ಗಂಭೀರವಾಗಿ  ಪರಿಗಣಿಸಿಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಾಧಿಕಾರದ ನಿರ್ದೇಶ ಕರಾದ ಮುತ್ತುರಾಜು ಮತ್ತು ಪ್ರಕಾಶ್‌ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ತಮಗೆ ಅಧಿಕಾರಕ್ಕಿಂತ ಕಾರ್ಯಕರ್ತರ ಸ್ವಾಭಿಮಾನ ಮುಖ್ಯ. ತಾವು ತಮ್ಮ  ಸ್ಥಾನಗಳಿಗೆ ರಾಜೀನಾಮೆ ನೀಡಲು ಸಿದಟಛಿ ಎಂದು ಗುಡುಗಿದ್ದಾರೆ.

ಅಸಮಾಧಾನ ಶಮನಕ್ಕೆ ರಂಗಧಾಮಯ್ಯ ಯತ್ನ: ಗುರುವಾರ ಬಿಡದಿಯಲ್ಲಿ ಆಹಾರ ಕಿಟ್‌ ವಿತರಣೆಗೆ ಆಗಮಿಸಿದ್ದ ಮಾಗಡಿ ಬಿಜೆಪಿ ಘಟಕದ ಅಧ್ಯಕ್ಷ ರಂಗಧಾಮಯ್ಯ  ಅವರ ಬಳಿಯೂ ಬಿಡದಿ ಬಿಜೆಪಿ ಕಾರ್ಯಕರ್ತರು ಬಿಡದಿ ಸ್ಮಾರ್ಟ್‌ ಸಿಟಿ ಪ್ರಾಧಿಕಾರದ ಅಧ್ಯಕ್ಷರ ವಿರುದ್ದ ತಮ್ಮ ಅಸಮಾಧಾನ ಹೊರಹಾಕಿ ದರು. ಸಚಿವರ ಬೇಟಿ, ಜಿಲ್ಲಾಧ್ಯಕ್ಷರ ಭೇಟಿ ಇತ್ಯಾದಿ ಬಗ್ಗೆ ತಮಗೆ ಮಾಹಿತಿ ಲಭ್ಯವಾಗು ತ್ತಿಲ್ಲ ಎಂದು  ದೂರಿದರು. ಇದನ್ನೆಲ್ಲ ತಾಳ್ಮೆ ಯಿಂದಲೇ ಆಲಿಸಿದ ರಂಗಧಾಮಯ್ಯ ಕಾರ್ಯಕರ್ತರು ಕೆಲದಿನಗಳು ತಾಳ್ಮೆಯಿಂದ ಇರುವಂತೆ ಸಮಾಧಾನ ಪಡಿಸಿದರು.

ಯಾರನ್ನೂ ಕಡೆಗಣಿಸಿಲ್ಲ: ಬಿಡದಿ ಹೋಬಳಿ ಬಿಜೆಪಿ ಕಾರ್ಯಕರ್ತರು ಸೇರಿದಂತೆ  ನಾನು ಯಾರನ್ನು ಕಡೆಗಣಿಸಿಲ್ಲ. ಪಕ್ಷದ ಪ್ರಮುಖ ವಿಚಾರಗಳ ಬಗ್ಗೆ ಎಲ್ಲರಿಗೂ ಫೋನ್‌ ಮಾಡಲು ಸಾಧ್ಯವಿಲ್ಲ. ಹೀಗಾಗಿ ಬಿಡದಿ ಹೋಬಳಿ ಅಧ್ಯಕ್ಷರಿಗೆ ಮಾಹಿತಿ ಕೊಡುತ್ತಿ ದ್ದೇನೆ. ಅವರು ಉಳಿದವರಿಗೆ ತಿಳಿಸಬೇಕು ಎಂದು ಬಿಜೆಪಿ ಜಿಲ್ಲಾ  ಯುವ ಘಟಕದ ಅಧ್ಯಕ್ಷ ವರದರಾಜ ಗೌಡ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next