Advertisement
ಸ್ಮಾರ್ಟ್‌ಸಿಟಿ ಯೋಜನೆಯಡಿ ಕಟ್ಟಡ ಹೊರಾಂಗಣಕ್ಕೆ ಆಧುನಿಕ ಸ್ಪರ್ಶ ನೀಡಲಾಗುತ್ತಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 7 ಕೋಟಿ ರೂ. ವೆಚ್ಚ ಮಾಡಲಿದೆ. ಈಗಾಗಲೇ ಶೇ.10ರಷ್ಟು ಕಾಮ ಗಾರಿಆರಂಭವಾಗಿದ್ದು ಏಪ್ರಿಲ್ ಅಂತ್ಯದ ವೇಳೆಗೆ ರಸೆಲ್ ಮಾರುಕಟ್ಟೆ ಹೊಸತನ ದೊಂದಿಗೆ ಕಂಗೊಳಿಸಲಿದೆ. ಚರ್ಚ್ ಮತ್ತು ಚಾಂದಿನಿ ಚೌಕ್‌ವರೆಗಿರುವ ರಸೆಲ್ ಮಾರುಕಟ್ಟೆಯ ಮುಂಭಾಗದ ಖಾಲಿ ಸ್ಥಳದ ಒಟ್ಟು 150 ಮೀಟರ್ ಉದ್ದ ಹಾಗೂ 18 ಮೀಟರ್ ಅಗಲ ಪ್ರದೇಶವನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಬಳಸಿಕೊಳ್ಳಲಾಗುತ್ತಿದ್ದು, ಇಲ್ಲಿನ ಹೊರಾಂಗಣ ಪ್ರದೇಶದಲ್ಲಿ 7 ಪ್ಲಾಜಾಗಳು ನಿರ್ಮಾಣವಾಗಲಿವೆ.
Related Articles
Advertisement
ಚಾಂದಿನಿ ಚೌಕ್ ವೃತ್ತದಲ್ಲಿರುವ ಹಳೆ ಕಾಲದ ವಿದ್ಯುತ್ ದೀಪದ ಕಂಬಕ್ಕೆ ಹೊಸ ರೂಪನೀಡಲಾಗುತ್ತದೆ. ಈ ಕಂಬದ ಸುತ್ತಲಿನ ನೆಲವನ್ನು ಬಣ್ಣ ಬಣ್ಣದ ಗ್ರಾನೈಟ್‌ಗಳಿಂದ ವಿನ್ಯಾಸಗೊಳಿಸಲಾಗುವುದು. ಹಾಗೆಯೇ ಒಂದು ತುದಿಯಿಂದ ಇನ್ನೊಂದು ತುದಿಯ ವರೆಗೆ ವಿದ್ಯುತ್ ದೀಪದಕಂಬಗಳು, ವಿವಿಧ ಅಲಂಕಾರಿಕ ಗಿಡಗಳನ್ನುಹಾಕಲಾಗುತ್ತದೆ. ಮಾರುಕಟ್ಟೆಗೆ ಹೊಂದಿ ಕೊಂಡಿರುವಹಳೆಯ ಬಾವಿಯನ್ನು ಸ್ವತ್ಛಗೊಳಿಸಿ, ನೀರಿನ ಪೂರೈಕೆ ಮಾಡುವ ಕಾರ್ಯ ಕೂಡ ನಡೆಯಲಿದೆ ಎಂದು ತಿಳಿಸಿದ್ದಾರೆ.
83 ವರ್ಷದ ಹಳೆಯ ಮಾರುಕಟ್ಟೆ : ಸುಮಾರು 83 ವರ್ಷಗಳ ಇತಿಹಾಸವುಳ್ಳ ಈ ಕಟ್ಟಡ 1927ರಲ್ಲಿ ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ವಿವಿಧ ರೀತಿಯಹೂ, ಹಣ್ಣು, ತರಕಾರಿ, ಮಾಂಸ, ಮೀನು, ಆಟಿಕೆಅಂಗಡಿಗಳು ಸೇರಿದಂತೆ ಸುಮಾರು 481 ಮಳಿಗೆಗಳು ಇಲ್ಲಿವೆ.
ರಸೆಲ್ ಮಾರುಕಟ್ಟೆ ಮುಂಭಾಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ಕಾಮಗಾರಿ ಪ್ರಾರಂಭಿಸಲಾಗಿದೆ.ಕೊರೊನಾದಿಂದಾಗಿ ಕಾಮಗಾರಿತಡೆಯಾಗುತ್ತಿದ್ದು, ಈಗಾಗಲೇ ಶೇ.10ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಏಪ್ರಿಲ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. –ಪಿ.ರಾಜೇಂದ್ರ ಚೋಳನ್, ಬೆಂಗಳೂರು ನಗರ ಸ್ಮಾರ್ಟ್ ಸಿಟಿ ಯೋಜನೆ ಯೋಜನಾ ನಿರ್ದೇಶಕ
ಸ್ಮಾರ್ಟ್ ಸಿಟಿ ಯೋಜನೆಯಡಿ ರಸೆಲ್ ಮಾರುಕಟ್ಟೆ ಅಭಿವೃದ್ಧಿಯಾದರೆ ವ್ಯಾಪಾರ ಹೆಚ್ಚಾಗಲಿದೆ. ಸುವ್ಯವಸ್ಥಿತ ವಾಹನ ನಿಲುಗಡೆ ಹಾಗೂ ಸ್ವತ್ಛತೆಗೆ ಪ್ರಾಮಖ್ಯತೆ ನೀಡುವುದರಿಂದ ಹೆಚ್ಚು ಜನರು ಮಾರುಕಟ್ಟೆ ಬರುವ ಸಾಧ್ಯತೆಗಳಿವೆ. – ಜಾವೀಸೇಟ್, ಕಾರ್ಯದರ್ಶಿ, ರಸೆಲ್ ಮಾರುಕಟ್ಟೆ
– ಭಾರತಿ ಸಜ್ಜನ್