Advertisement
ಪ್ಲಾಸ್ಟಿಕ್, ಎಲೆಗಳು ಮೊದಲಾದ ವಸ್ತುಗಳು ಕೊಳಚೆ ನೀರಿಗೆ ಸೇರಿ ಕೊಳಜೆ ನೀರನ್ನು ಇನ್ನಷ್ಟು ಕಲುಷಿತಗೊಳಿಸುತ್ತಿರುವುದು ಇಂದಿನ ಬಹುದೊಡ್ಡ ಸಮಸ್ಯೆ. ಕೊಳಚೆ ನೀರು ಹಾಗೂ ತ್ಯಾಜ್ಯಗಳನ್ನು ಬೇರ್ಪಡಿಸುವುದೇ ಸವಾಲಾಗಿ ಮಾರ್ಪಟ್ಟಿದೆ. ಒಳಚರಂಡಿಗಳಲ್ಲಿ ನೀರಿನೊಂದಿಗೆ ತ್ಯಾಜ್ಯಗಳು ಕೂಡ ಸೇರುವುದರಿಂದ ಕೊಳಚೆ ನೀರು ಸರಾಗವಾಗಿ ಸಾಗದೇ ರಸ್ತೆಯ ಮೇಲೆ ಬರುತ್ತಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ.
Related Articles
Advertisement
ಏನಿದು ಡ್ರೈನೇಜ್ ನೆಟ್?ವಸತಿ ಗೃಹಗಳು, ಕಾರ್ಖಾನೆ ಹೀಗೆ ಮೊದಲಾದವುಗಳಿಂದ ದೊಡ್ಡ ಪ್ರಮಾಣದಲ್ಲಿ ಹರಿದು ಬರುವ ಕೊಳಚೆ ನೀರು ಸೇರುವ ಜಾಗದಲ್ಲಿ ಆ ನೀರಿಗೆ ಮಿಶ್ರಿತವಾದ ತ್ಯಾಜ್ಯವನ್ನು ಬೇರ್ಪಡಿಸುವ ಸಲುವಾಗಿ ದೊಡ್ಡದಾದ ಬಲೆಯಲ್ಲಿ (ಡ್ರೈನೇಜ್ ನೆಟ್) ಕಟ್ಟುವುದು. ಆಗ ತ್ಯಾಜ್ಯ, ನೀರು ಬೇರ್ಪಡುತ್ತದೆ. ತ್ಯಾಜ್ಯವೆಲ್ಲ ಒಂದೆಡೆ ಸಂಗ್ರಹವಾದರೆ, ನೀರು ಮುಂದೆ ಹರಿದು ಇನ್ನೊಂದೆಡೆ ಸಂಗ್ರಹವಾಗುತ್ತದೆ. ಕೊಳಚೆ ನೀರಿನಿಂದ ತ್ಯಾಜ್ಯ ಬೇರ್ಪಟ್ಟ ಕಾರಣ ಆ ನೀರನ್ನು ಪುನರ್‌ಬಳಕೆಗೆ ಯೋಗ್ಯವಾಗುವಂತೆ ಮಾಡಲು ಸುಲಭವಾಗುತ್ತದೆ. ಮಂಗಳೂರಿಗೂ ಬರಲಿ
ಮಂಗಳೂರಿನ ಕೆಲವೊಂದು ಪ್ರದೇಶಗಳಲ್ಲಿರುವ ಕೊಳಚೆ ನೀರಿನ ಮಾರ್ಗಗಳನ್ನು ಕಂಡಾಗ ಈ ಕ್ರಮಗಳನ್ನು ಕೈಗೊಳ್ಳಲು ಸೂಕ್ತ ಎಂದು ತೋರುತ್ತದೆ. ಸ್ವಚ್ಛ ಮಂಗಳೂರಿನ ಕಡೆಗೆ ಮತ್ತು ಮಂಗಳೂರಿನ ಸೌಂದರ್ಯ ಉಳಿಸುವ ಪಾತ್ರದ ಕಡೆಗೆ ಇಂತಹ ವಿದೇಶಿ ಕ್ರಮಗಳನ್ನು ಸರಿಯಾಗಿ ಜೋಡಿಸಿದರೆ ಮಂಗಳೂರಿನ ಜನರು ಹೊರಗಿನ ಜನರಿಗೆ ಪ್ರಬುದ್ಧರು ಎಂದೆನಿಸುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. -ವಿಶ್ವಾಸ್ ಅಡ್ಯಾರ್