Advertisement
2009ರಲ್ಲಿ ಫೈಬರ್ ಗ್ಲಾಸ್ ನಿರ್ಮಿತ ಎರಡು ಕೋಣೆಗಳಿರುವ ಎರೆ ತೊಟ್ಟಿಯನ್ನು ಡಾ| ಜೋಶಿ ಅವರು ಆವಿಷ್ಕರಿಸಿದ್ದರು. ಹಲವು ವಿದ್ಯಾಸಂಸ್ಥೆ, ಔಷಧ ತಯಾರಿಕಾ ಘಟಕ, ನಿರಾಶ್ರಿತರ ಪರಿಹಾರ ಕೇಂದ್ರ ಮುಂತಾದೆಡೆಗಳಲ್ಲಿ ಆ ಫೈಬರ್ ಗ್ಲಾಸ್ ನಿರ್ಮಿತ ತೊಟ್ಟಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇದೀಗ ಸ್ಮಾರ್ಟ್ ಎರೆತೊಟ್ಟಿಯು ಇದೇ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಸಿದ್ಧಗೊಂಡಿದೆ.
ಸ್ಮಾರ್ಟ್ ಎರೆಗೊಬ್ಬರ ತೊಟ್ಟಿಯು ಚಿಕ್ಕದಾಗಿದ್ದು, ಕಡಿಮೆ ದರದಲ್ಲಿ ಪ್ಲಾಸ್ಟಿಕ್ ನಿಂದ ತಯಾರಿಸಲ್ಪಟ್ಟ ಬಹು ಉಪಯೋಗಿ ಸಣ್ಣ ಘಟಕವಾಗಿದೆ. ಇದರಲ್ಲಿ ಎರಡು ಕೋಣೆಗಳಿದ್ದು, ಮೇಲಿನ ಕೋಣೆ ಎರಡು ಅಡಿ ಅಗಲ, 2.5 ಅಡಿ ಎತ್ತರವನ್ನು ಹೊಂದಿದೆ. ಈ ಕೋಣೆಯಲ್ಲಿ ಎರೆಗೊಬ್ಬರ ಮಾಡುವ ಮುಖ್ಯ ಪ್ರಕ್ರಿಯೆಯಾದ ಫ್ರೈಮರಿ ಡೀಕಂಪೋಸಿಶನ್ ಹಾಗೂ ಎರಡನೇ ಕ್ರಿಯೆಯಾದ ಸೆಕೆಂಡರಿ ಡೀಕಂಪೋಸಿಶನ್ ಜರಗುತ್ತದೆ. ದೊಡ್ಡ ಕೋಣೆ ಕೆಳಗೆ ಸಣ್ಣ ಕೋಣೆಯಿದೆ. ಇದರಲ್ಲಿ ದೊಡ್ಡ ಕೋಣೆಯಿಂದ ಕಸದ ಮೂಲಕ ಹರಿದು ಬಂದ ಸತ್ವಯುಕ್ತ ನೀರು ಸಂಗ್ರಹವಾಗುತ್ತದೆ. ಈ ನೀರನ್ನು ತೊಟ್ಟಿಗೆ ಅಳವಡಿಸಿದ ಕೊಳವೆ ಮೂಲಕ ಸಂಗ್ರಹಿಸಬಹುದು. ಸಸ್ಯಗಳಿಗೆ ಬರುವ ಕ್ರಿಮಿಕೀಟ ಬಾಧೆ ತಡೆಯಲು ಈ ಎರೆಜಲ ಸಿಂಪಡಣೆ ಅತ್ಯಂತ ಪ್ರಯೋಜನಕಾರಿ. 15 ಕೆಜಿ ಗೊಬ್ಬರ ಉತ್ಪಾದನೆ
ತೊಟ್ಟಿ ಚಿಕ್ಕದಾಗಿರುವುದರಿಂದ ಮನೆಯ ಜಗಲಿಯಲ್ಲಿ ಇಡಲು ಸಾಧ್ಯವಾಗುತ್ತದೆಯಲ್ಲದೆ, ಒಂದೆಡೆಯಿಂದ ಇನ್ನೊಂದೆಡೆಗೆ ಹೊತ್ತೂಯ್ಯುವುದೂ ಸುಲಭ. ಒಂದೇ ಘಟಕದಲ್ಲಿ ಎರಡು ತರಹದ ಎರೆಗೊಬ್ಬರಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಪಡೆಯಬಹುದು. ವರ್ಷಕ್ಕೆ ಐದಾರು ಸಲ ಎರೆಗೊಬ್ಬರ ಪಡೆಯಬಹುದು. ಪ್ರತಿ ಬಾರಿಯೂ 15 ಕೆಜಿ ಯಷ್ಟು ಗೊಬ್ಬರ ಉತ್ಪಾದನೆ ಇದರಿಂದ ಸಾಧ್ಯ. ಎರೆಜಲ ಕೂಡ ವರ್ಷವಿಡೀ ದೊರೆಯುತ್ತದೆ. ಘಟಕದೊಳಗೆ ಇಲಿ, ಹೆಗ್ಗಣ, ಪ್ರಾಣಿ, ಪಕ್ಷಿಗಳು ಬಾರದಂತೆ ತಡೆಯಲು ಘಟಕದ ಸುತ್ತಲೂ ನೀರಿನ ರಕ್ಷಣಾ ಕವಚವನ್ನು ಅಳವಡಿಸಲಾಗಿದೆ. ಹಾಗೆ ಎರೆಹುಳಗಳಲ್ಲಿ ಸಂತಾನ ಅಭಿವೃದ್ಧಿಗೆ ಪೂರಕ ವಾತಾವರಣ ಒದಗಿಸಿ ಹೆಚ್ಚಿನ ಹುಳಗಳನ್ನು ಮಾರಾಟ ಕೂಡ ಮಾಡಬಹುದು.
Related Articles
Advertisement