ಹೊನ್ನಾಳಿ: ದೇಶದ ಪ್ರತಿಯೊಂದು ಮಗುವಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಪ್ರಧಾನಿ ನರೇಂದ್ರ ಮೋದಿಯವರ ಉದ್ದೇಶದಂತೆ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಲಾಗುತ್ತಿದ್ದು, ಶಿಕ್ಷಕರು-ವಿದ್ಯಾರ್ಥಿಗಳು ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಕೂಲಂಬಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ಮತ್ತು ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ಮಾರ್ಟ್ ಕ್ಲಾಸ್ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಮೇಲಿನ ಹೊರೆ ಕಡಿಮೆ ಮಾಡುವುದಲ್ಲದೇ ಮಕ್ಕಳು ವಿನೂತನ ತಂತ್ರಜ್ಞಾನದ ಮೂಲಕ ವಿಷಯವನ್ನು ಬಹುಬೇಗ ಗ್ರಹಿಸಲು ನೆರವಾಗುತ್ತದೆ. ಸ್ಮಾರ್ಟ್ ಕ್ಲಾಸ್ ಆರಂಭಕ್ಕೆ ಧನಸಹಾಯ ಮಾಡಿರುವ ದಾನಿಗಳನ್ನು ಅಭಿನಂದಿಸುತ್ತೇನೆ ಎಂದರು. ಜಿ.ಪಂ ಸದಸ್ಯೆ ದೀಪಾ ಜಗದೀಶ್ ಮಾತನಾಡಿ, ದಾನಿಗಳ ನೆರವಿನಿಂದ ಶಾಲೆಯನ್ನು ಮಾದರಿಯಾಗಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕರಿಬಸಪ್ಪ, ಗ್ರಾಪಂ ಅಧ್ಯಕ್ಷ ಗಾಯಿತ್ರಿ ಪ್ರಶಾಂತ್, ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ತಾ.ಪಂ ಸದಸ್ಯೆ ಅಂಬುಜಾಕ್ಷಿ ಮರುಳಸಿದ್ದಪ್ಪ, ಉಪಾಧ್ಯಕ್ಷೆ ಶರ್ಮಿಳಾ ಬಾನು, ಗ್ರಾ.ಪಂ ಸದಸ್ಯರಾದ ಟಿ.ಜಿ. ರಮೇಶ್, ಕೆ.ಆರ್. ಅಜ್ಜಯ್ಯ, ಟಿ.ಬಿ. ಮಂಜುನಾಥ್, ಜಿ.ಎಸ್. ಸಿದ್ದೇಶ್, ಹುಸೇನ್‌ಬಿ, ಮುರಿಗೆಮ್ಮ, ಇಸಿಒ ಬಸವರಾಜ್, ಪಿಡಿಒ ಜಗದೀಶ್, ಸಿಆರ್‌ಪಿ ರಾಜಣ್ಣ, ಮೋಹನ್‌ಕುಮಾರ್, ಸಮನ್ವಯ ವೇದಿಕೆ ಪರಮೇಶ್ವರಪ್ಪ, ಮುಖ್ಯೋಪಾಧ್ಯಾಯ ಬಿ.ಲೋಕಪ್ಪ, ಮೀನು ಮಹಾಮಂಡಳಿ ನಿರ್ದೇಶಕ ಬಸವರಾಜ್, ಬಿ.ಎಂ. ಮಲ್ಲಿಕಾರ್ಜುನ್, ಟಿ.ಎಸ್.ಬಸವರಾಜ್, ವೈ.ಕೆ. ದಯಾನಂದ, ಸುರೇಶ್ ಇದ್ದರು.