Advertisement
ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಸ್ಮಾರ್ಟ್ ರಸ್ತೆ ಕಾಮಗಾರಿ ನಿರೀಕ್ಷೆಗೂ ಮೀರಿ ಪ್ರಗತಿ ಕಂಡಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ವಾಹನ, ಜನರ ಓಡಾಟ ಇಲ್ಲದ ಪರಿಣಾಮ ಶೇ.50ಕ್ಕೂ ಕಡಿಮೆ ಕಾರ್ಮಿಕರನ್ನು ಬಳಕೆ ಮಾಡಿಕೊಂಡು ಕಡಿಮೆ ಅವಧಿಯಲ್ಲಿ ಶೇ.70-75 ಕಾಮಗಾರಿ ಪೂರ್ಣಗೊಳಿಸಿದ್ದಾರೆ.
Related Articles
Advertisement
ಇಡೀ ಯೋಜನೆಯ ಪ್ರಾಥಮಿಕ ಹಾಗೂ ದೊಡ್ಡ ಕಾರ್ಯಗಳಿವು. ಸಾಮಾನ್ಯ ದಿನಗಳಲ್ಲಿ ಹಗಲು ಹೊತ್ತಿನಲ್ಲಿ ಬಾರ್ ಬೆಂಡಿಂಗ್ ಕೆಲಸ ರಾತ್ರಿ ಕಾಂಕ್ರೀಟ್ ಹಾಕಲಾಗುತ್ತಿತ್ತು. ಇದೀಗ ಲಾಕ್‌ಡೌನ್ ಇರುವುದರಿಂದ ಹಗಲು ಹೊತ್ತಿನಲ್ಲಿ ಎಲ್ಲಾ ಕೆಲಸ ನಿರ್ವಹಿಸಿದ್ದು, ಇರುವ ಅಲ್ಪ ಕಾರ್ಮಿಕರ ಮೇಲೂ ಯಾವುದೇ ಒತ್ತಡ ಬೀಳಲಿಲ್ಲ. ಪ್ರಮುಖ ಕಾಮಗಾರಿಗಳಲ್ಲಿ ಜಂಕ್ಷನ್‌ಗಳಲ್ಲಿ ಸಿಡಿ ನಿರ್ಮಾಣಕ್ಕಾಗಿ ರಸ್ತೆ ಸಂಚಾರ ತಡೆದು ನಿರ್ಮಾಣ ಕಾರ್ಯ ನಡೆಸಬೇಕಾಗಿತ್ತು. ಕನಿಷ್ಟ 10-14 ದಿನಗಳು ಬೇಕಾಗುತ್ತಿತ್ತು. ಇನ್ನೂ ಪ್ರಮುಖ ಮಾರುಕಟ್ಟೆ ಸ್ಥಳಗಳಲ್ಲಿನ ಜಂಕ್ಷನ್‌ಗಳಲ್ಲಿ ರಸ್ತೆ ಅಗೆಯುವುದು ಸುಲಭವೂ ಆಗಿರಲಿಲ್ಲ. ಇನ್ನೂ 50-60 ವರ್ಷಗಳ ಹಳೆಯದಾದ ನಾಲಾಗಳನ್ನು ಸ್ವತ್ಛಗೊಳಿಸಿ ನೀರಿನ ಹರಿವು ಗಮನಿಸಿ ವ್ಯವಸ್ಥಿತವಾಗಿ ನಿರ್ಮಿಸಲು ಸಾಧ್ಯವಾಗಿದೆ.