Advertisement

ಕಾಗದದಲ್ಲಿ ಅರಳಿತು ಸ್ಮಾರ್ಟ್‌ ಸಿಟಿ

12:37 PM Jan 19, 2020 | Suhan S |

ಮುಧೋಳ: ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆಯ ಸ್ಮಾರ್ಟ್‌ ಸಿಟಿಗೆ ತಮ್ಮದೇ ಶೈಲಿಯಲ್ಲಿ ರೂಪ ನೀಡಿರುವ ನಗರ ವಿದ್ಯಾರ್ಥಿಗಳು ಭವಿಷ್ಯತ್ತಿನ ಮುಧೋಳ ನಗರವನ್ನು ಕಾಗದದ ಸಹಾಯದಿಂದ ಸುಂದರವಾಗಿ ನಿರ್ಮಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisement

ನಗರದ ಸಾಯಿ ನಿಕೇತನ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾದ ಅಭಿಷೇಕ ಹಿರೇಮಠ ಹಾಗೂ ತ್ವಾಹೀರ್‌ ಬಾಗವಾನ ರೂಪಿಸಿರುವ ಸ್ಮಾರ್ಟ್‌ ಸಿಟಿ ನಗರದ ಬೀಳೂರು ಗುರುಬಸವ ಮಹಾಸ್ವಾಮೀಜಿ ತಾಂತ್ರಿಕ ಕಾಲೇಜಿನಲ್ಲಿ ಜರುಗಿದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಎಲ್ಲರ ಗಮನ ಸೆಳೆಯಿತು.

ಏನೇನಿದೆ ಸ್ಮಾರ್ಟ್‌ ಸಿಟಿಯಲ್ಲಿ: ಅಭಿಷೇಕ ಹಾಗೂ ತಾಹಿರ್‌ ಕಲ್ಪನೆಯ ಸ್ಮಾರ್ಟ್‌ ಸಿಟಿ ಒಂದು ಅಚ್ಚುಕಟ್ಟು ನಗರ ನಿರ್ಮಾಣಕ್ಕೆ ಅವಶ್ಯವಿರುವ ಸಕಲ ಸೌಲಭ್ಯವನ್ನು ಒಳಗೊಂಡಿದೆ. ನಗರದಲ್ಲಿನ ಶಾಲೆ, ಕಾರ್ಖಾನೆ ಹಾಗೂಕಾರ್ಖಾನೆ ನಿರ್ವಹಣೆ, ಮಳೆ ನೀರುಕೊಯ್ಲು, ಸ್ವಚ್ಚತೆಗೆ ಆದ್ಯತೆ ನೀಡಲಾಗಿದೆ. ಕಾಗದದಲ್ಲಿ ಮೂಡಿದ ಸಿಟಿ: ಸ್ಮಾರ್ಟ್‌ ಸಿಟಿ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ವಿಧಾನವೂ ಎಲ್ಲರನ್ನೂ ಮೆಚ್ಚುವಂತಿದೆ. ಕೇವಲ ಕಾಗದ ಹಾಗೂ ಬಣ್ಣದಲ್ಲಿ ನಿರ್ಮಾಣಗೊಂಡಿರುವ ಸ್ಮಾರ್ಟ್‌ ಸಿಟಿ ನೋಡುಗರ ಮನಮುಟ್ಟುವಂತಿದೆ.

ಮಳೆ ಕೊಯ್ಲಿಗೆ ಆದ್ಯತೆ: ನೀರು ಸಂಗ್ರಹ ಬಳಕೆಗೆ ಒತ್ತು ನೀಡಿರುವ ವಿದ್ಯಾರ್ಥಿಗಳು. ತಮ್ಮ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಮಳೆ ನೀರು ಕೊಯ್ಲಿಗೆ ಪ್ರಥಮ ಆದ್ಯತೆ ನೀಡಿದ್ದಾರೆ. ಮಳೆ ನೀರನ್ನು ಯಾವ ರೀತಿಯಲ್ಲಿ ಸಂಗ್ರಹಿಸಬೇಕು. ಹಾಗೂ ಅದನ್ನು ಯಾವ ವಿಧದಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿರುವ ವಿದ್ಯಾರ್ಥಿಗಳು ನೀರಿನ ಹಿತ ಮಿತ ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ನೀರಿನ ಮಹತ್ವ ತಿಳಿಸಿಕೊಟ್ಟಿದ್ದಾರೆ.

ಕಾರ್ಖಾನೆಗೆ ಅವಶ್ಯವಿರುವ ವಿದ್ಯುತ್‌ ಉತ್ಪಾದನೆ: ಕಲ್ಪನೆಯ ಸ್ಮಾರ್ಟ್‌ ಸಿಟಿಯಲ್ಲಿರುವ ಕಾರ್ಖಾನೆಗೆ ಪವನ ವಿದ್ಯುತ್‌ ಶಕ್ತಿ ಮೂಲಕ ಅಗತ್ಯ ವಿದ್ಯುತ್‌ ತಯಾರಿಸಿ ಅದನ್ನು ಕಾರ್ಖಾನೆ ನಿರ್ವಹಣೆಗೆ ಬಳಸಿಕೊಂಡಿದ್ದು, ಈ ಮೂಲಕ ಕಾರ್ಖಾನೆ ನಿರ್ವಹಣೆಯಲ್ಲಿಯೂ ಅಚ್ಚುಕಟ್ಟುತನ ತೋರಿದ್ದಾರೆ ವಿದ್ಯಾರ್ಥಿಗಳು.

Advertisement
Advertisement

Udayavani is now on Telegram. Click here to join our channel and stay updated with the latest news.

Next