Advertisement

ಸ್ಮಾರ್ಟ್‌ಸಿಟಿ: ರಸ್ತೆ ಕಾಮಗಾರಿ ಪರಿಶೀಲನೆ

05:30 PM Dec 12, 2020 | Suhan S |

ತುಮಕೂರು: ನಗರದ ಹಳೆಯ ಎನ್‌ಇಪಿಎಸ್‌ ಪೊಲೀಸ್‌ ಠಾಣೆಯ ಮುಂಭಾಗದ ಬಿ.ಹೆಚ್‌.ರಸ್ತೆಯಮುಂಭಾಗ ದಿಂದ ಎಸ್‌.ಎಸ್‌.ಪುರಂ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಸ್ಮಾರ್ಟ್‌ ಸಿಟಿ ಕಾಮಗಾರಿಯಲ್ಲಿ ಡಾಂಬರು ಹಾಕುವ ಕಾರ್ಯ ಪ್ರಗತಿಯಲ್ಲಿದ್ದು, ಶುಕ್ರವಾರಪಾಲಿಕೆಯ15ನೇ ವಾರ್ಡಿನ ಸದಸ್ಯೆ ಗಿರಿಜಾ ಮತ್ತು ಅಧಿಕಾರಿಗಳು ಕಾಮಗಾರಿಯನ್ನು ಪರಿಶೀಲಿಸಿದರು.

Advertisement

ಈ ವೇಳೆ ಮಾತನಾಡಿದ ಪಾಲಿಕೆ ಸದಸ್ಯೆ ಗಿರಿಜಾ, ನಗರದ ಎಸ್‌.ಎಸ್‌.ಪುರಂ ಮತ್ತುಬಿ.ಹೆಚ್‌.ರಸ್ತೆಗೆ ಸಂಪರ್ಕ ಕಲ್ಪಿಸುವ ಅತಿ ಅಗಲವಾದ ರಸ್ತೆ ಇದಾಗಿದ್ದು, 585 ಮೀ. ಉದ್ದವಿದ್ದು,ಕಳೆದ 30 ವರ್ಷಗಳಿಂದ ಈ ರಸ್ತೆ ಡಾಂಬರು ಕಂಡಿರಲಿಲ್ಲ. ಕಳೆದ ಒಂದು ವರ್ಷಗಳಿಂದ ಈ ಭಾಗದಲ್ಲಿ ರಸ್ತೆಅಭಿವೃದ್ಧಿ ಕಾಮಗಾರಿಗಳು ನಡೆಯು ತ್ತಿದ್ದು, ಸಾರ್ವಜನಿಕರು ಸಹಕಾರ ನೀಡಿದ್ದಾರೆ ಎಂದರು.

ನಗರದ 15ನೇ ವಾರ್ಡಿಗೆ ಸಂಬಂಧಿಸಿದಂತೆ ಮುಖ್ಯರಸ್ತೆ, ಅಡ್ಡ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಕೊನೆಯ ಹಂತದಲ್ಲಿದೆ.ಮುಂದಿನ ಒಂದೆರಡು ವಾರಗಳಲ್ಲಿಡಾಂಬರ್‌ ಕಾಮಗಾರಿ ಪೂರ್ಣಗೊಳ್ಳಲಿದೆ.ಅತ್ಯಾಧುನಿಕಸ್ಮಾರ್ಟಸಿಟಿಯಿಂದ ಡಕ್‌, ಸಿಸಿ. ಚರಂಡಿ, 24×7 ಕುಡಿಯುವ ನೀರು, ಪೈಪ್‌ಲೈನ್‌ ಮೂಲಕ ಮನೆ ಮನೆಗೆ ಗ್ಯಾಸ್‌ ಸಂಪರ್ಕ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿದ್ದು,ಇಡೀ ವಾರ್ಡು ಎಲ್ಲಾ ಸಮಸ್ಯೆಗಳಿಂದ ಮುಕ್ತವಾಗಲಿದೆ. ಈ ವೇಳೆ ವಾರ್ಡಿನ ನಾಗರಿಕ ಪಣೀಂದ್ರ ಸುರಬಿ ಮಾತನಾಡಿದರು. ಈ ವೇಳೆಸ್ಮಾರ್ಟ್‌ಸಿಟಿ ಎಇಇ ಚಲುವರಾಜ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next