Advertisement
ಇತ್ತೀಚೆಗೆ ಹೊಸ ಕಾರುಗಳ ಬಿಡುಗಡೆಗಿಂತ ಹೆಚ್ಚಾಗಿ, ಹಳೆ ಕಾರುಗಳು ಫೇಸ್‌ಲಿಫr… ಮಾದರಿಯಲ್ಲಿ ಹೊಸ ರೂಪ ಪಡೆದುಕೊಂಡು ಬರುತ್ತಿರುವ ಪ್ರವೃತ್ತಿಯನ್ನು ಗಮನಿಸಬಹುದು. ಇದೀಗ ಹೊಸ ತಂತ್ರಜ್ಞಾನ, ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬಂದಿದೆ ಹುಂಡೈ ಎಲಾಂಟ್ರಾ ಕಾರು.
ಇದರಲ್ಲೊಂದು ವಿಶೇಷವಿದೆ, ಈ ಕಾರು ಚಾಲನೆ ಮಾಡಬೇಕಾದರೆ, ನೀವು ಕಾರಿನ ಬಳಿಗೆ ಹೋಗಿ, ಡ್ರೈವರ್ ಸೀಟಿನಲ್ಲಿ ಕುಳಿತು ಗಾಡಿ ಸ್ಟಾರ್ಟ್ ಮಾಡಬೇಕು ಅಂತೇನಿಲ್ಲ. ನೀವು ಕುಳಿತಲ್ಲಿಯೇ ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ಕಾರನ್ನು ಸ್ಟಾರ್ಟ್ ಮಾಡಬಹುದು. ಅದೇ ರೀತಿ ಕಾರಿನ ಒಳಗಿನ ವೆದರ್ ಅನ್ನೂ ಸೆಟ್ ಮಾಡಬಹುದು. ಸದ್ಯ, ಈ ಕಾರಿಗೆ ಮಾರುಕಟ್ಟೆಯಲ್ಲಿ ಹೊಂಡಾ ಸಿವಿಕ್ ಮತ್ತು ಟೊಯೋಟಾ ಕೊರೊಲ್ಲಾ ಆಲ್ಟಿàಸ್ ಪ್ರತಿಸ್ಪರ್ಧಿಗಳಾಗಿವೆ. ಈ ಕಾರುಗಳು ಸಹ ಅತ್ಯುತ್ತಮ ತಂತ್ರಜ್ಞಾನ ಒಳಗೊಂಡ ಸೆಡಾನ್‌ಗಳಾಗಿದ್ದು, ದರ ಕೂಡ ಹೆಚ್ಚು ಕಡಿಮೆ ಒಂದೇ ರೇಂಜಿನಲ್ಲಿದೆ. ಈಗ ಬಂದಿರುವ ಎಲಾಂಟ್ರಾ ಕಾರು ಪೆಟ್ರೋಲ್ ಎಂಜಿನ್ ಮಾದರಿಯದ್ದು. ಇದು ಬಿಎಸ್6ಗೆ ಅಪ್‌ಡೇಟ್ ಆಗಿದೆ. ಮೈಲೇಜ್ ಮಾತ್ರ ಪ್ರತಿ ಲೀ.ಗೆ 14.6 ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಎಲ್ಲರೂ ಹೇಳುವಂತೆ ಬಿಎಸ್6ನಲ್ಲಿ ಮೈಲೇಜ್ ಡ್ರಾಪ್ ಆಗುತ್ತದೆ ಎಂಬ ಮಾತುಗಳಿವೆ. ಆದರೆ, ಈ ಕಾರಿನ ಮೈಲೇಜ್ ವಿಷಯದಲ್ಲಿ ಅಷ್ಟೇನೂ ಸಮಸ್ಯೆಯಾಗುವುದಿಲ್ಲ ಎಂದು ಕಂಪನಿಯೇ ಹೇಳಿಕೊಂಡಿದೆ. ಅಂದ ಹಾಗೆ, ಈ ಮಾದರಿಯಲ್ಲಿ ಡೀಸೆಲ್ ಮಾಡೆಲ್ ಲಭ್ಯವಿಲ್ಲ. ವಿನ್ಯಾಸದ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಹೊಸ ಸ್ಟೈಲಿಷ್ ಡಿಸೈನ್‌ಅನ್ನು ಹೊಂದಿದೆ. ತ್ರಿಕೋನಾಕೃತಿಯ ಡಿಆರ್‌ಎಲ್‌ಗಳು, ಫಾಗ್ ಲ್ಯಾಂಪ್ಸ್ ನಾಲ್ಕು ಪ್ರೊಜೆಕ್ಟರ್‌ನ ಹೆಡ್‌ಲ್ಯಾಂಪ್ಸ್ ಗಮನ ಸೆಳೆಯುತ್ತವೆ. ಹಿಂಬದಿಯಲ್ಲಿ ಹೊಸ ಡಿಸೈನ್‌ನ ಟೇಲ್‌ಲ್ಯಾಂಪ್‌ಗ್ಳಿವೆ. ಇನ್ನು ಒಳಗೆ ಬಂದರೆ, ಹೊಸ ಮಾದರಿಯ ಸ್ಟೇರಿಂಗ್, ಎಂಟರ್‌ಟೈನ್‌ಮೆಂಟ್ ಕನ್ಸೋಲ್ ಕೂಡ ಹೊಸ ತೆರನಾಗಿದ್ದು, ಇನ್ಫಿನಿಟಿ ಮ್ಯೂಸಿಕ್ ಸಿಸ್ಟಮ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಏರ್‌ಪ್ಲೇಗೆ ಹೊಂದಿಕೊಳ್ಳುವ ಮತ್ತು ಉತ್ತಮವಾದ 8 ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಮೊಬೈಲ್ ಚಾರ್ಜರ್ ಇದೆ. ಸಾಮರ್ಥ್ಯದ ವಿಷಯಕ್ಕೆ ಬಂದರೆ, ಕೇವಲ ಅರ್ಧ ಸೆಕೆಂಡ್‌ನಲ್ಲಿ ಕಾರು 100 ಕಿ.ಮೀ. ಸ್ಪೀಡ್‌ಅನ್ನು ತಲುಪುತ್ತದೆ.
Related Articles
ಇದರಲ್ಲಿ ಇಕೋ, ನ್ಪೋರ್ಟ್ಸ್, ನಾರ್ಮಲ್ ಮತ್ತು ಸ್ಮಾರ್ಟ್ ಎಂಬ ನಾಲ್ಕು ಮೋಡ್‌ಗಳಿವೆ. ಇಕೋ ಮೋಡ್‌ನಲ್ಲೂ ಗಾಡಿಯ ಸಾಮರ್ಥ್ಯವೇನೂ ಕಡಿಮೆಯಾಗುವುದಿಲ್ಲ ಎಂಬುದು ಇದನ್ನು ಪರೀಕ್ಷಿಸಿರುವ ಪರಿಣಿತರ ಅಭಿಪ್ರಾಯ. ಹಾಗೆಯೇ ಸ್ಮಾರ್ಟ್ ಮತ್ತು ನ್ಪೋರ್ಟ್ಸ್ ಮೋಡ್‌ನಲ್ಲಿ ಕಾರಿನ ಸಾಮರ್ಥ್ಯ ಹೆಚ್ಚುತ್ತದೆ.
Advertisement
ಸುರಕ್ಷತಾ ಸವಲತ್ತುಗಳುಈ ಕಾರು ಅನೇಕ ಸುರಕ್ಷತಾ ಸವಲತ್ತುಗಳನ್ನು ಒಳಗೊಂಡಿದೆ. ಸಾಮಾನ್ಯವಾಗಿ ಕಾರುಗಳಲ್ಲಿ ಮುಂದಿನ ಎರಡು ಸೀಟುಗಳ ಪ್ರಯಾಣಿಕರಿಗೆ ಏರ್‌ಬ್ಯಾಗುಗಳನ್ನು ಒದಗಿಸಲಾಗಿರುತ್ತದೆ. ಅದಕ್ಕಿಂತ ಹೆಚ್ಚು ಏರ್‌ಬ್ಯಾಗುಗಳನ್ನು ಹೈಎಂಡ್ ಮಾದರಿಗಳಲ್ಲಿ ಮಾತ್ರವೇ ನೀಡಲಾಗುತ್ತಿತ್ತು. ಆದರೆ, ಈ ಕಾರಿನ ಎಲ್ಲಾ ಮಾದರಿಗಳಲ್ಲೂ ಆರು ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ. ಎಬಿಎಸ್, ಇಎಸ್ಸಿ, ಪಾರ್ಕಿಂಗ್ ಸೆನ್ಸರ್(ಫ್ರಂಟ್ ಆಂಡ್ ರೇರ್), ಹಿಲ್ ಸ್ಟಾರ್ಟ್ ಅಸಿಸ್ಟ್, ರೇರ್ ವ್ಯೂ ಕ್ಯಾಮೆರಾ, ಫ್ರಂಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ಅಲರ್ಟ್ ವಾರ್ನಿಂಗ್, ಟೈರ್ ಪ್ರಷರ್ ಮಾನಿಟರ್‌ನಂಥ ಭದ್ರತಾ ಫೀಚರ್‌ಗಳನ್ನು ಈ ಕಾರು ಒಳಗೊಂಡಿದೆ. ಹುಂಡೈನ ಹೊಸ ಸೆಡಾನ್‌ಗೆ ನಾಮಕರಣ
ಜಾಗತಿಕ ಮಟ್ಟದಲ್ಲಿ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿರುವ ಹುಂಡೈ ಕಾರು ಕಂಪನಿ, ಹೊಸ ಸೆಡಾನ್‌ವೊಂದನ್ನು ಮಾರುಕಟ್ಟೆಗೆ ಬಿಡಲಿದೆ ಎಂಬ ಸುದ್ದಿ ಹರಿದಾಡುತ್ತಲೇ ಇತ್ತು. ಇದೀಗ, ಆ ಸೆಡಾನ್ ಕಾರಿಗೆ “ಔರಾ’ ಎಂಬ ಹೆಸರನ್ನಿಟ್ಟಿರುವ ಸಂಗತಿ ಹೊರಬಿದ್ದಿದೆ. ಹುಂಡೈ ಕಂಪನಿ, ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ವಿಶೇಷವೆಂದರೆ, ಹೆಸರೊಂದನ್ನು ಬಿಟ್ಟು ಇನ್ಯಾವ ಮಾಹಿತಿಯೂ ಹೊರಬಿದ್ದಿಲ್ಲ. ಭಾರತೀಯ ಗ್ರಾಹಕರು, ಅದರಲ್ಲೂ ಯುವಕರನ್ನು ಗುರಿಯಾಗಿಸಿಕೊಂಡು ಈ ಹೆಸರನ್ನಿಟ್ಟಿದೆ ಎಂದೇ ಹೇಳಲಾಗುತ್ತಿದೆ. ಆರಾಮ, ಸುರಕ್ಷತೆ, ವಿನ್ಯಾಸ ಮತ್ತು ಹೊಂದಿಕೊಳ್ಳುವಂಥ ತಾಂತ್ರಿಕತೆ ಇದರಲ್ಲಿದ್ದು ಸವಾರರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಸಂಸ್ಥೆ ಹೇಳಿದೆ. ಎಂಜಿನ್- 1999 ಸಿಸಿ, 4 ಸಿಲಿಂಡರ್, ಪೆಟ್ರೋಲ್
ಟ್ರಾನ್ಸ್‌ಮಿಷನ್- 6 ಸ್ಪೀಡ್ ಆಟೋ
ಮೈಲೇಜ್- 14.6
ಪವರ್- 150 ಬಿ.ಎಚ್.ಪಿ, 6200 ಆರ್.ಪಿ.ಎಂ
ವೀಲ್ ಬೇಸ್ -2700 ಎಂ.ಎಂ
ದರ- 20.39 ಲಕ್ಷ ರೂ. (ಎಕ್ಸ್ ಶೋರೂಂ ಬೆಲೆ) -ಸೋಮಶೇಖರ ಸಿ.ಜೆ.