ಕಾಸರಗೋಡು : ಮಕ್ಕಳ ಸಮಗ್ರ ಅಭಿವೃದ್ಧಿ ಯೋಜನೆಯಂತೆ ಕೇರಳ ರಾಜ್ಯ ಸರಕಾರ ರಾಜ್ಯದೆಲ್ಲೆಡೆ ‘ಸ್ಮಾರ್ಟ್ ಅಂಗನವಾಡಿ’ಗಳನ್ನು ಸ್ಥಾಪಿಸುವ ಮಹತ್ವದ ಯೋಜನೆಯನ್ನು ರೂಪಿಸಿದೆ. ಪ್ರಸ್ತುತ ಇರುವ ಅಂಗನವಾಡಿಗಳನ್ನು ಸಬಲೀಕರಣ ಗೊಳಿಸುವ ಮತ್ತು ಆಧುನಿಕ ಸೌಲಭ್ಯಗಳಿ ರುವ ಅಂಗನವಾಡಿಗಳನ್ನು ನಿರ್ಮಿಸುವ ಉದ್ದೇಶವನ್ನು ಸರಕಾರ ಹೊಂದಿದೆ.
ಶಿಶು ವಿಕಸನ ಇಲಾಖೆ ಅಂಗನವಾಡಿಗಳ ಮೂಲ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಿ ಮಕ್ಕಳ ಮಾನಸಿಕ ಹಾಗು ಬೌದ್ಧಿಕ, ಶಾರೀರಿಕ ವಿಕಾಸವನ್ನು ಗುರಿಯಾಗಿರಿಸಿಕೊಂಡು ಇಂತಹ ಅಂಗನವಾಡಿಗಳ ನಿರ್ಮಾಣದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಾಕಾರ ಗೊಳಿಸಲು ಮುಂದಾಗಿದೆ. ಅಂಗನ ವಾಡಿ ಕಟ್ಟಡಗಳಿಂದ ಆರಂಭಗೊಂಡು ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿ ಸುವ ಎಲ್ಲಾ ಕಾರ್ಯಗಳನ್ನು ಗಮನಹರಿಸಿ ಮಾದರಿ ಅಂಗನವಾಡಿಗಳಿಗೆ ರೂಪುಕಲ್ಪನೆ ನೀಡಲಾಗಿದೆ. ಆರು ವರ್ಷ ಪ್ರಾಯದ ವರೆಗಿನ ಮಕ್ಕಳ ಬೆಳವಣಿಗೆಗೆ ಮತ್ತು ಬುದ್ಧಿ ವಿಕಾಸಕ್ಕೆ ಅನುಗುಣವಾಗಿ ತಿರುವನಂತ ಪುರದ ಚೈಲ್ಡ್ ಡೆವಲಪ್‌ಮೆಂಟ್ ಸೆಂಟರ್(ಸಿ.ಡಿ.ಸಿ)ನ ವರದಿಯ ಆಧಾರದಲ್ಲಿ ಅಂಗನವಾಡಿಗಳನ್ನು ಸಮಗ್ರವಾಗಿ ಪರಿಷ್ಕರಿಸಲಾಗಿದೆ.
2019-20ನೇ ಹಣಕಾಸು ವರ್ಷದಲ್ಲಿ ರಾಜ್ಯದಲ್ಲಿ ಒಟ್ಟು 210 ಸ್ಮಾರ್ಟ್ ಅಂಗನ ವಾಡಿಗಳನ್ನು ನಿರ್ಮಿಸಲು ಕೇರಳ ರಾಜ್ಯ ಸರಕಾರ ಉದ್ದೇಶಿಸಿದೆ. ಕೇರಳ ರಾಜ್ಯ ನಿರ್ಮಿತಿ ಕೇಂದ್ರ ಹಾಗು ಕಾಲೇಜು ಆಫ್ ಆರ್ಕಿಟೆಕ್ಚರ್ ಸಂಯುಕ್ತವಾಗಿ ಸ್ಥಾಪಿಸಿದ ಲಾರಿ ಬೇಕರ್‌ನ ಹೆಸರಿನಲ್ಲಿರುವ ಕಾಟ್ಲ್ಯಾಬಿಸಾಸ್ ಡಿಸೈನ್ ಲ್ಯಾಬ್‌ನಲ್ಲಿ ಇದರ ಮಾದರಿ ನಕ್ಷೆಯನ್ನು ತಯಾರಿಸಲಾಗಿದೆ.
ವ್ಯತ್ಯಸ್ಥ ವಿಸ್ತೃತಿಗನುಸಾರವಾಗಿ ಕಟ್ಟಡದ ರೂಪುರೇಷೆ ತಯಾರಿಸಲಾಗಿದೆ. ಸದ್ಯ ಆರು ರೀತಿಯ ಮಾದರಿಯನ್ನು ತಯಾರಿಸಿದ್ದು ಅವುಗಳ ರೀತಿಯಲ್ಲಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗುವುದು. ಒಂದೂವರೆ ಸೆಂಟ್ಸ್ ಸ್ಥಳದಿಂದ ಆರಂಭಿಸಿ 10 ಸೆಂಟ್ಸ್ ಸ್ಥಳಾವಕಾಶದಲ್ಲಿ ಯೋಗ್ಯವಾದ ರೀತಿಯಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣವಾಗಲಿದೆ. 10 ಸೆಂಟ್ಸ್ ಮತ್ತು ಏಳೂವರೆ ಸೆಂಟ್ಸ್ ಸ್ಥಳವಿರುವ ಅಂಗನವಾಡಿಗಳಲ್ಲಿ ಈಜು ಕೊಳ, ಉದ್ಯಾನ, ಇಂಡೋರ್, ಔಟ್ ಡೋರ್ ಆಟದ ಮೈದಾನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.
Advertisement
ಮಕ್ಕಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ರುವ ಪ್ರಕೃತಿ ಸ್ನೇಹಿ ಅಂಗನವಾಡಿಗಳನ್ನು ನಿರ್ಮಿಸಲಾಗುವುದು. ಮಕ್ಕಳ ಮಾನಸಿಕ, ದೈಹಿಕ ಮತ್ತು ಸಾಮೂಹಿಕ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಸ್ಮಾರ್ಟ್ ಅಂಗನ ವಾಡಿಗಳ ನಿರ್ಮಾಣವಾಗಲಿದೆ. ಈ ಅಂಗನ ವಾಡಿಗಳಲ್ಲಿ ಅತ್ಯುತ್ತಮ ಗುಣಮಟ್ಟದ ಸೌಕರ್ಯಗಳನ್ನು ಕಲ್ಪಿಸಲಾಗುವುದು.
Related Articles
Advertisement
ಆರಂಭಿಕ ಹಂತದಲ್ಲಿ ತಿರುವನಂತಪುರ ಜಿಲ್ಲೆಯ ಪೂಜಾಪುರ ಮಹಿಳಾ ಶಿಶು ವಿಕಸನ ಇಲಾಖೆಯ ಸ್ವಾಧೀನ ದಲ್ಲಿರುವ 10 ಸೆಂಟ್ಸ್ ಸ್ಥಳದಲ್ಲಿ ಮತ್ತು ತಿರುವನಂತಪುರ ಅರ್ಬನ್ 2 ಐ.ಸಿ.ಡಿ.ಎಸ್. ಪ್ರಾಜೆಕ್ಟ್ ವ್ಯಾಪ್ತಿಯಲ್ಲಿರುವ 37 ನೇ ನಂಬ್ರದ ಅಂಗನವಾಡಿಗೆ ಸ್ಮಾರ್ಟ್ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗುವುದು. ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಅಂಗನವಾಡಿಗಳು ಪೂರ್ಣವಾಗಿ ಇಲಾಖೆಯ ಫಂಡ್ ಮಾತ್ರವೇ ಬಳಸಿ ಸ್ಮಾರ್ಟ್ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗುವುದು. ಎರಡು ಹಂತಗಳಲ್ಲಿ 1655.23 ಚದರಡಿ ವಿಸ್ತೀರ್ಣದಲ್ಲಿ ಸ್ಮಾರ್ಟ್ ಅಂಗನವಾಡಿಗಳಿಗೆ 44,94,518 ರೂ. ಎಸ್ಟಿಮೇಟ್ ಮಾಡಲಾಗಿದೆ.
ಮಕ್ಕಳ ಬೌದ್ಧಿಕ ಬೆಳವಣಿಗೆಯಲ್ಲಿ ಅಂಗನವಾಡಿಗಳು ಪ್ರಮುಖ ಪಾತ್ರವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಅಂಗನವಾಡಿಗಳ ಕಟ್ಟಡವನ್ನು ಆಧುನೀಕರಣಗೊಳಿಸುವುದು ಕೂಡಾ ಅಷ್ಟೇ ಮುಖ್ಯ ಎಂಬ ನೆಲೆ ಯಲ್ಲಿ ಸ್ಮಾರ್ಟ್ ಅಂಗನವಾಡಿಗಳಾಗಿ ಬದಲಾ ಯಿಸಲಾಗುವುದು. ರಾಜ್ಯದಲ್ಲಿ 258 ಐ.ಸಿ.ಡಿ.ಎಸ್. ಪ್ರಾಜೆಕ್ಟ್ಗಳಲ್ಲೂ ಸ್ಥಳೀಯಾಡಳಿತ ಸಂಸ್ಥೆಗಳ, ಶಾಸಕರ ಮತ್ತು ಸಂಸದರ ಪ್ರಾದೇಶಿಕ ನಿಧಿಯನ್ನು ಮತ್ತು ಶಿಶು ವಿಕಸನ ಇಲಾಖೆಯ ನಿಧಿಯನ್ನು ಬಳಸಿಕೊಂಡು ಈ ಯೋಜನೆಗೆ ರೂಪು ನೀಡಲಾಗಿದೆ.
ಪ್ರಮುಖ ಪಾತ್ರ
ಮಕ್ಕಳ ಬೌದ್ಧಿಕ ಬೆಳವಣಿಗೆಯಲ್ಲಿ ಅಂಗನವಾಡಿಗಳು ಪ್ರಮುಖ ಪಾತ್ರವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಅಂಗನವಾಡಿಗಳ ಕಟ್ಟಡವನ್ನು ಆಧುನೀಕರಣಗೊಳಿಸುವುದು ಕೂಡಾ ಅಷ್ಟೇ ಮುಖ್ಯ ಎಂಬ ನೆಲೆ ಯಲ್ಲಿ ಸ್ಮಾರ್ಟ್ ಅಂಗನವಾಡಿಗಳಾಗಿ ಬದಲಾ ಯಿಸಲಾಗುವುದು. ರಾಜ್ಯದಲ್ಲಿ 258 ಐ.ಸಿ.ಡಿ.ಎಸ್. ಪ್ರಾಜೆಕ್ಟ್ಗಳಲ್ಲೂ ಸ್ಥಳೀಯಾಡಳಿತ ಸಂಸ್ಥೆಗಳ, ಶಾಸಕರ ಮತ್ತು ಸಂಸದರ ಪ್ರಾದೇಶಿಕ ನಿಧಿಯನ್ನು ಮತ್ತು ಶಿಶು ವಿಕಸನ ಇಲಾಖೆಯ ನಿಧಿಯನ್ನು ಬಳಸಿಕೊಂಡು ಈ ಯೋಜನೆಗೆ ರೂಪು ನೀಡಲಾಗಿದೆ.
ಸ್ಮಾರ್ಟ್ ಅಂಗನವಾಡಿಅಂಗನವಾಡಿಗಳಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಮಕ್ಕಳ ಮಾನಸಿಕ, ಶಾರೀರಿಕ ಹಾಗು ಬೌದ್ಧಿಕ ಸ್ಥಿತಿಯನ್ನು ಉತ್ತಮಪಡಿಸಿ ಮಕ್ಕಳ ಸಮಗ್ರ ಅಭಿವೃದ್ಧಿ ಸಂಕಲ್ಪದೊಂದಿಗೆ ಸ್ಮಾರ್ಟ್ ಅಂಗನವಾಡಿಗಳನ್ನು ನಿರ್ಮಿಸಲು ಶಿಶು ವಿಕಸನ ಇಲಾಖೆ ಗುರಿಯಿರಿಸಿಕೊಂಡಿದೆ.
-ಕೆ.ಕೆ. ಶೈಲಜಾ, ಆರೋಗ್ಯ ಸಚಿವೆ, ಕೇರಳ ಸರಕಾರ