Advertisement
ನಿತ್ಯ ನಾವು ಬಳಸುವ ಫೋನ್, ವಾಚ್, ಟಿವಿ, ಬಲ್ಬ್, ಸ್ಪೀಕರ್ ಸಹಿತ ಪ್ರತಿಯೊಂದು ವಸ್ತುಗಳೂ ಸ್ಮಾರ್ಟ್ ಆಗುತ್ತಿವೆ. ಇದರಿಂದ ಡಿಜಿಟಲ್ ಕ್ರಾಂತಿಯಾಗಿದ್ದು ಹೊಸ ಬದಲಾವಣೆಯತ್ತ ಜಗತ್ತು ತೆರೆದುಕೊಂಡಿದೆ. ಏತನ್ಮಧ್ಯೆ ಎಲ್ಲ ವಸ್ತು , ಸರಕುಗಳು ಸ್ಮಾರ್ಟ್ ಆಗುವ ದಿಸೆಯಲ್ಲಿರಬೇಕಾದರೆ, ಈ ಮಾರುಕಟ್ಟೆಯಲ್ಲಿ ಫ್ಯಾನ್‌ಗಳು ಕೂಡ ಸ್ಮಾರ್ಟ್ ಆಗಲು ಆಣಿಯಾಗಿ ನಿಂತಿವೆ.
ಸಾಧಾರಣ ಫ್ಯಾನ್‌ಗಳಿಂತ ಸ್ಮಾರ್ಟ್‌ಫೋನ್‌ಗಳು ಕೊಂಚ ವಿಭಿನ್ನ. ಇತರ ಸ್ಮಾರ್ಟ್ ಎಲೆಕ್ಟ್ರಾನಿಕ್ ವಸ್ತುಗಳಂತೆಯೇ ಈ ಫ್ಯಾನ್ ಕಾರ್ಯಚರಿಸಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಖಾಸಗಿ ಕಂಪೆನಿಯೊಂದರ ಫ್ಯಾನ್‌ನನ್ನು ಆ್ಯಪ್ ಮೂಲಕ ನಿಯಂತ್ರಿಸಬಹುದಾಗಿದೆ. ನೋಡಲು ಸಾಮಾನ್ಯ ಫ್ಯಾನ್‌ನಂತೆಯೇ ಇದ್ದರೂ ಸುಂದರ ವಿನ್ಯಾಸ ಇದಕ್ಕಿದೆ. ಇದರೊಳಗೆ ವಾತಾವರಣದ ಶುಷ್ಕತೆ ಹಾಗೂ ಉಷ್ಣತೆಯನ್ನು ಪತ್ತೆ ಮಾಡುವ ಸೆನ್ಸರ್‌ಗಳಿವೆ. ಈ ಸೆನ್ಸರ್‌ಗಳ ಮೂಲಕವೇ, ಕೊಠಡಿಯ ಉಷ್ಣತೆಗನುಗುಣವಾಗಿ ವೇಗವನ್ನು ಹೆಚ್ಚಿಸುವ ಮತ್ತು ತಗ್ಗಿಸಿಕೊಳ್ಳುವ ಸ್ವಯಂಚಾಲಿತ ವ್ಯವಸ್ಥೆಯು ಈ ಸ್ಮಾರ್ಟ್‌ಫ್ಯಾನ್‌ನಲ್ಲಿದೆ. ಆ ಫ್ಯಾನ್‌ಗಳಿಗೆ ನಿಗದಿತ ಆ್ಯಪ್‌ನ್ನು ಗೂಗಲ್ ಪ್ಲೇ ಸ್ಟೋರಲ್ಲಿ ಇನ್ Õಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. ಅನಂತರ ಸೀಲಿಂಗ್‌ಗೆ ಅಳವಡಿಸಿದ ಫ್ಯಾನ್‌ನ್ನು ಅದರ ಜತೆ ರಿಜಿಸ್ಟರ್ ಮಾಡಿಸಿಕೊಳ್ಳಬೇಕು.
Related Articles
ಸ್ಮಾರ್ಟ್ ಫ್ಯಾನ್‌ಗಳು ಪ್ರಸ್ತುತ ಇರುವ ಸೀಲಿಂಗ್ ಫ್ಯಾನ್‌ನ ಸುಧಾರಿತ ರೂಪ. ಹಾಸಿಗೆಯಿಂದ ಎದ್ದು ಸ್ವಿಚ್ ಹಾಕುವ ಕೆಲಸ ಇರುವುದಿಲ್ಲ. ಇದರ ಬೆಲೆ ಸೀಲಿಂಗ್ ಫ್ಯಾನ್‌ಗಿಂತ ದುಪ್ಪಟ್ಟಾಗಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾದಂತೆ ಬೆಲೆ ಕಡಿಮೆಯಾಗುವ ನಿರೀಕ್ಷೆ ಇದೆ. ಒಟ್ಟೊಮೇಟ್ ಇಂಟರ್ ನ್ಯಾಶನಲ್ ಕಂಪೆನಿಯ ಸ್ಮಾರ್ಟ್ ಫ್ಯಾನ್ ಎರಡು ವೇರಿಯಂಟ್ ಬಿಡುಗಡೆಯಾಗಿದ್ದು, 3,999 ರೂ ಬೆಲೆಗೆ ದೊರೆಯಲಿದೆ. ಇನ್ನೂ ಸ್ಮಾರ್ಟ್ ರೆಡಿ ಮೊಡೆಲ್ ಫ್ಯಾನ್ ಬೆಲೆಯು 2,999 ರೂ ಬೆಲೆಗೆ ಸಿಗಲಿದೆ. ಇನ್ನುಳಿದಂತೆ ಇನ್ನಿತರ ಕಂಪೆನಿಗಳು ಸ್ಮಾರ್ಟ್ ಫ್ಯಾನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು, ಅದರ ಬಳಕೆ ಹಾಗೂ ಅದಕ್ಕೆ ಅಳವಡಿಸಲಾಗಿರುವ ತಂತ್ರಜ್ಞಾನದ ಆಧಾರದಲ್ಲಿ ಬೆಲೆ ನಿಗದಿಯಾಗಲಿದೆ.
Advertisement
ಇದು ಹೇಗೆ ಕೆಲಸ ಮಾಡುತ್ತದೆ?ಸ್ಮಾರ್ಟ್ ಸಾಧನಗಳನ್ನು ಮನೆಯ ಒಂದು ಕಡೆ ಕೂತು ಮೊಬೈಲ್ ಮೂಲಕವೇ ನಿಯಂತ್ರಿಸಬಹುದು. ಫ್ಯಾನ್ ಆಗಿರುವುದ ರಿಂದ ಮಲಗುವ ಹಾಸಿಗೆಯ ಬಳಿಯಲ್ಲೇ ಮೊಬೈಲ್ ಫೋನ್ ಇದ್ದರೆ ಅಲ್ಲಿಂದಲೇ ಫ್ಯಾನಿನ ವೇಗವನ್ನು ಹೆಚ್ಚು, ಕಡಿಮೆ ಮಾಡಬಹುದು. ಮನೆಯ ಯಾವುದೇ ಕೊಠಡಿಗಳಲ್ಲಿರುವ ಫ್ಯಾನ್‌ಗಳನ್ನೂ ಬ್ಲೂಟೂಥ್ ಸಂಪರ್ಕದಿಂದ ಆ್ಯಪ್ ಮೂಲಕ ನಿಭಾಯಿಸಬಹುದು. ಸಾಮಾನ್ಯ ಫ್ಯಾನ್‌ನಲ್ಲಿ ನಾಲ್ಕೋ, ಐದೋ ಹಂತದ ವೇಗಗಳಿರು ತ್ತವೆ. ಆದರೆ, ಆ್ಯಪ್ ಬಳಸಿ ಅದರ ಟಬೋì ಮೋಡ್ ಬಳಸಿದರೆ ಇದೇ ವೇಗವನ್ನು 1ರಿಂದ 100ರ ನಡುವೆ ವಿಂಗಡಿಸಿಕೊಳ್ಳಬಹುದು. ಸ್ಲೆ„ಡರ್ ಮೇಲೆ ಕೈಯಾಡಿಸಿ ದರೆ ಸಾಕಾಗುತ್ತದೆ. ಇದರಲ್ಲಿ ನಮ್ಮ ಕೋಣೆಯ ವಾತಾವರಣಕ್ಕೆ ತಕ್ಕುದಾಗಿ ಉಷ್ಣಾಂಶಗಳನ್ನು ಬದಲಾಯಿಸಿಕೊಳ್ಳುವ ಅವಕಾಶವಿದೆ. ಉಪಯೋಗ
ಸಾಧಾರಣ ಫ್ಯಾನ್‌ಗಳಿಗಿಂತ ಸ್ಮಾರ್ಟ್ ಫ್ಯಾನ್‌ಗಳ ಉಪಯೋಗ ಹೆಚ್ಚಿರುತ್ತದೆ. ಅದೇನೆಂದರೆ ಮನೆಯಿಂದ ಹೊರಬೀಳುವಾಗ ಅಥವಾ ಬೀಗ ಹಾಕಿದ ಅನಂತರವೂ ಮರೆತಿದ್ದರೆ ಎಲ್ಲ ಫ್ಯಾನ್‌ಗಳನ್ನೂ ಏಕಕಾಲದಲ್ಲಿ ಆ್ಯಪ್ ಮೂಲಕ ಹೊರಗಿನಿಂದಲೇ ನಿಯಂತ್ರಿಸಬಹುದು. ಆದರೆ ತೀರಾ ದೂರ ಹೋದ ಬಳಿಕ ಆಫ್ ಮಾಡಲಾಗದು. ಇನ್ನು, ರಿಮೋಟ್ ಕಂಟ್ರೋಲ್ ಮೂಲಕವೂ ಈ ಫ್ಯಾನ್‌ನ್ನು ನಿಯಂತ್ರಿಸಬಹುದು. ಆದರೆ ಅದನ್ನು ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ. - ಪ್ರಜ್ಞಾ ಶೆಟ್ಟಿ