Advertisement
ಕೃಷಿ ಇಲಾಖೆಯ ಕ್ರಿಯಾಯೋಜನೆ ಕಾರ್ಯಕ್ರಮದಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಲ್ಲಿ ಎಸ್‌ಸಿಪಿ/ ಟಿಎಸ್‌ಪಿ ಪ್ರಮಾಣ ಪತ್ರ ಪಡೆದಿರುವವರಿಗೆ ವಿವಿಧ ಯೋಜನೆಯಲ್ಲಿ ಅನುದಾನ ಒದಗಿಸಲಾಗುವುದು. ಟಿಎಸ್‌ಪಿಯಡಿ ಬಂದಿರುವ ಅನುದಾನ ಹಂಚಿಕೆ ಸುಲಭವಾಗಿ ಆಗುತ್ತದೆ. ಎಸ್‌ಸಿಪಿಯಡಿ ಅರ್ಜಿಗಳೇ ಬಾರದೇ ಇರುವುದರಿಂದ ಅನುದಾನ ಹಂಚಿಕೆ ಮಾಡಲು ನಾವೇ ಫಲಾನುಭವಿಗಳನ್ನು ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
Related Articles
Advertisement
ಸಣ್ಣ ನೀರಾವರಿ :
ಸಣ್ಣ ನೀರಾವರಿ ಇಲಾಖೆಯಿಂದ ಪ.ಜಾತಿ, ಪ.ಪಂಗಡದ ರೈತರು ಹೆಚ್ಚಿನ ಜಮೀನು ಹೊಂದಿ ರುವ ಪ್ರದೇಶದಲ್ಲಿ ಕೆರೆಗಳ ಅಭಿವೃದ್ಧಿ, ಇವರ ಜಮೀನುಗಳಿಗೆ ಏತ ನೀರಾವರಿ, ತೆರೆದ ಬಾವಿ, ಕೊಳವೆ ಬಾವಿಗಳ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. ನದಿ, ನಾಲೆಗಳಿಂದ ಮೇಲ್‌ಜಲ ಲಭ್ಯವಿರುವ ಕಡೆ ಆದ್ಯತೆ ಮೇಲೆ ಸಾಮೂಹಿಕ ಪೈಪ್‌ಲೈನ್, ಏತ ನೀರಾವರಿ, ಸಣ್ಣ ಪ್ರಮಾಣದ ಬ್ಯಾರೇಜ್ ನಿರ್ಮಾಣ ಮಾಡಿಕೊಡಲಾಗುತ್ತದೆ. ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಬರುವ ಅನುದಾನದಲ್ಲಿ ಶೇ.100ರಷ್ಟು ಹಂಚಿಕೆಯಾಗಿದೆ. ಎಸ್‌ಸಿಪಿಯಡಿ ರಾಜ್ಯ ವಲಯದಿಂದ 40.45 ಲಕ್ಷ ರೂ. ಬಂದಿದ್ದು, ಎಲ್ಲವೂ ಗುರಿ ಸಾಧನೆಯಾಗಿದೆ. 13 ಫಲಾನುಭವಿಗಳಿಗೆ ಇದನ್ನು ಹಂಚಿಕೆ ಮಾಡ ಲಾಗಿದೆ. ಟಿಎಸ್‌ಪಿ ಯೋಜನೆಯಡಿ ಬಂದಿರುವ 45.65 ಲಕ್ಷ ರೂ.ಗಳನ್ನು 6 ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿವಿಧ ಇಲಾಖೆಯ ಕಾರ್ಯಸಾಧನೆ :
ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಬಂದಿರುವ ಅನುದಾನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶೇ.32, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಶೇ.33, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಶೇ.46, ತೋಟಗಾರಿಕೆ ಇಲಾಖೆ ಶೇ.80, ಪಶುಸಂಗೋಪನೆ ಇಲಾಖೆ ಶೇ.88 ರಷ್ಟು ಅನುದಾನ ಬಳಕೆ ಮಾಡಿವೆ.
ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಬರುವ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ನಿರ್ದಿಷ್ಟ ಕಾಲಮಿತಿಯೊಳಗೆ ಕಾರ್ಯಕ್ರಮಾನುಸಾರ ಹಂಚಿಕೆ ಮಾಡುತ್ತಿರುತ್ತೇವೆ. ಕೆಲವೊಮ್ಮೆ ಅರ್ಜಿಗಳೇ ಬರುವುದಿಲ್ಲ. ನಾವೇ ಫಲಾನುಭವಿಗಳನ್ನು ಹುಡುಕಬೇಕಾದ ಸ್ಥಿತಿ ಬರುತ್ತದೆ. – ಕೆಂಪೇಗೌಡ, ಕೃಷಿ ಇಲಾಖೆ, ಜಂಟಿ ನಿರ್ದೇಶಕ