Advertisement

ಹೋಮಿ ಜಹಾಂಗೀರ್‌ ಭಾಭಾ

09:28 AM May 10, 2019 | Hari Prasad |

ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…

Advertisement

1. ಪರಮಾಣು ವಿಜ್ಞಾನಿ, ಹೋಮಿ ಜಹಾಂಗೀರ್‌ ಭಾಭಾ ಅವರನ್ನು “ಭಾರತೀಯ ಪರಮಾಣು ವಿಜ್ಞಾನದ ಪಿತಾಮಹ’ ಎಂದು ಕರೆಯಲಾಗುತ್ತದೆ.

2. ಹೋಮಿ ಭಾಭಾ ಹುಟ್ಟಿದ್ದು, ಮುಂಬೈನ ಶ್ರೀಮಂತ ಕೈಗಾರಿಕಾ ಉದ್ಯಮಿಗಳ ಕುಟುಂಬದಲ್ಲಿ.

3. ಕೈಗಾರಿಕೋದ್ಯಮಿ ದೋರಬ್ಜಿ ಟಾಟಾ ಅವರು ಹೋಮಿ ಭಾಭಾರ ಸಂಬಂಧಿಕರು.

4. ಪರಮಾಣು ಸಂಶೋಧನೆಗೂ ಮುನ್ನ ಅವರು ಮೆಕಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು.

Advertisement

5. ಭಾಭಾ ಅವರು, “ಟಾಟಾ ಇನ್‌ಸ್ಟಿಟ್ಯೂಟ್‌ ಆಫ್ ಫ‌ಂಡಮೆಂಟಲ್‌ ರಿಸರ್ಚ್‌’ಅನ್ನು ಸ್ಥಾಪಿಸಿದರು.

6. 1954ರಲ್ಲಿ ಅವರು ಸ್ಥಾಪಿಸಿದ “ಟ್ರಾಂಬೆ ಅಟಾಮಿಕ್‌ ಎನರ್ಜಿ ಎಸ್ಟಾಬ್ಲಿಷ್‌ಮೆಂಟ್‌’ ಅನ್ನು ಮುಂದೆ, “ಭಾಭಾ ಅಟಾಮಿಕ್‌ ರಿಸರ್ಚ್‌ ಸೆಂಟರ್‌’ ಎಂದು ಕರೆಯಲಾಯ್ತು.

7. ಕೇಂಬ್ರಿಡ್ಜ್ ವಿ.ವಿ. ನೀಡುವ ಪ್ರತಿಷ್ಠಿತ “ಆಡಮ್ಸ್‌ ಪ್ರಶಸ್ತಿ’ ಹೋಮಿ ಭಾಭಾರಿಗೆ ಸಿಕ್ಕಿದೆ.

8. ವಿಶ್ವಸಂಸ್ಥೆಯು ಆಯೋಜಿಸಿದ “ಪರಮಾಣು ಶಕ್ತಿಗಳ ಶಾಂತಿಯುತ ಬಳಕೆ’ ಕುರಿತಾದ ಮೊದಲ ಅಂತಾರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನು ಭಾಭಾ ಅವರು ಅಲಂಕರಿಸಿದ್ದರು.

9. ಚಿತ್ರಕಲೆ, ಒಪೆರಾ, ಶಾಸ್ತ್ರೀಯ ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಭಾಭಾ, ಸಸ್ಯವಿಜ್ಞಾನಿಯೂ ಹೌದು

10. ದುರದೃಷ್ಟವಶಾತ್‌, ಹೋಮಿ ಭಾಭಾ ಅವರು 1966ರಲ್ಲಿ ಘಟಿಸಿದ ಏರ್‌ ಇಂಡಿಯಾ ವಿಮಾನ ಅಪಘಾತದಲ್ಲಿ ತೀರಿಕೊಂಡರು.

ಸಂಗ್ರಹ: ಪ್ರಿಯಾ

Advertisement

Udayavani is now on Telegram. Click here to join our channel and stay updated with the latest news.

Next