Advertisement
ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ರಜತ ಮಹೋತ್ಸವ ಅಂಗ ವಾಗಿ ಉಡುಪಿ ಬೀಡಿನಗುಡ್ಡೆಯ ಮಹಾತ್ಮಾಗಾಂಧಿ ಬಯಲು ರಂಗ ಮಂದಿರ ದಲ್ಲಿ ಡಿ.1ರಿಂದ 3ರವರೆಗೆ ಆಯೋಜಿಸಲಾಗಿರುವ ಕೈಗಾರಿಕಾ ವಸ್ತು ಪ್ರದರ್ಶನ “ಎಕ್ಸ್‌ಪೋ- 2017′ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರದ ಸೌಲಭ್ಯಗಳನ್ನು ಅವಲಂಬಿಸುವುದಕ್ಕಿಂತಲೂ ಹೆಚ್ಚಾಗಿ ಉದ್ಯಮಿ ಗಳ ಸ್ವಂತ ಪರಿಶ್ರಮದಿಂದ ಜಿಲ್ಲೆಯಲ್ಲಿ ಕೈಗಾರಿಕೆಗಳು ಬೆಳೆದು ನಿಂತಿವೆ. ಸರಕಾರ ಕೈಗಾರಿಕಾಭಿವೃದ್ಧಿ ಗಾಗಿ ಯೋಜನೆ ಜಾರಿಗೆ ತಂದಿದೆ ಯಾದರೂ ಅವುಗಳ ನಿಯಮಗಳು ಕಠಿನವಾಗಿವೆ ಎಂದು ಅವರು ಹೇಳಿದರು.
ಎಲ್ಲಾ ಕೈಗಾರಿಕೆಗಳಿಗೂ ಪರಿಸರ ನಾಶದ ಕಾರಣವೊಡ್ಡಿ ವಿರೋಧ ವ್ಯಕ್ತಪಡಿಸುವ ಮನೋಭಾವವನ್ನು ಜನರು ಬದಲಿಸಿಕೊಳ್ಳಬೇಕು. ಅಂತೆಯೇ ಕೈಗಾರಿಕೆಗಳು ಕೂಡ ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ಅತ್ಯಾಧುನಿಕ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಕೈಗಾರಿಕೆಗಳನ್ನು ಪ್ರೋತ್ಸಾಹಿಸದಿದ್ದರೆ ಉದ್ಯೋಗ ಸೃಷ್ಟಿ ಅಸಾಧ್ಯ ಎಂದು ಶ್ರೀನಿವಾಸ ಪೂಜಾರಿ ಹೇಳಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉಡುಪಿ ಪವರ್ ಕಾರ್ಪೊರೇಷನ್‌ನ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಅವರು ಮಾತನಾಡಿ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘವು ಜಿಲ್ಲೆಯ ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಸಹಕರಿಸುತ್ತಿರುವುದು ಶ್ಲಾಘನೀಯ. ಅದಾನಿ ಸಂಸ್ಥೆ ಕೂಡ ಸಣ್ಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದರು.
Related Articles
Advertisement
ಅದಾನಿ, ಉದಯವಾಣಿ ಮತ್ತು ಜಿಲ್ಲಾ ಕೈಗಾರಿಕಾ ಹಾಗೂ ವಾಣಿಜ್ಯ ಇಲಾಖೆಯ ಸಹಯೋಗದಲ್ಲಿ ಈ ವಸ್ತುಪ್ರದ ರ್ಶನವನ್ನು ಆಯೋಜಿಸಲಾಗಿದ್ದು ಕೈಗಾರಿಕೆ, ಕೃಷಿಗೆ ಸಂಬಂಧಿಸಿದ ಯಂತ್ರಗಳು, ಸಣ್ಣ ಗುಡಿಕೈಗಾರಿಕೆ, ವಾಹನ, ಎಲೆಕ್ಟ್ರಿಕಲ್, ಸೋಲಾರ್, ಗೋಡಂಬಿ, ರೂಫಿಂಗ್, ಕಟ್ಟಡಗಳಿಗೆ ಸಂಬಂಧಿಸಿದ ಮಳಿಗೆ ಗಳು, ಆಹಾರ, ಕ್ರಿಯಾತ್ಮಕ ವಸ್ತುಗಳು, ಕರ ಕೌಶಲ ಮಳಿಗೆಗಳು ಸೇರಿದಂತೆ 102 ಮಳಿಗೆಗಳಿವೆ.
ಲಕ್ಷ ಲೈಸನ್ಸ್ ; ಶೇ. 5 ಪ್ರಗತಿ !ರಾಜ್ಯದಲ್ಲಿ ಕೈಗಾರಿಕಾ ಪ್ರಗತಿಯ ಬಗ್ಗೆ ಕೈಗಾರಿಕಾ ಸಚಿವರನ್ನು ಪ್ರಶ್ನಿಸಿದೆ. ಆಗ ಅವರು “ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 1 ಲಕ್ಷದಷ್ಟು ಕೈಗಾರಿಕೆಗಳಿಗೆ ಪರವಾನಿಗೆ ನೀಡಿದ್ದೇವೆ’ ಎಂದಿದ್ದರು. ಆದರೆ ಅವುಗಳಿಗೆ ಮೂಲಸೌಕರ್ಯ ಒದಗಿಸಿಲ್ಲ. ಪರಿಣಾಮವಾಗಿ ಶೇ.5ರಷ್ಟು ಮಾತ್ರ ಕೈಗಾರಿಕಾ ಪ್ರಗತಿ ಆಗಿದೆ.
ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಸದಸ್ಯರು