ಜಿಲ್ಲಾ ಕೇಂದ್ರದಲ್ಲಿ ಸಶಸ್ತ್ರ ಮೀಸಲು ಪಡೆ ಇತ್ಯಾದಿ ಸುರûಾ ಬಲವಿರುತ್ತದೆ. ದೂರದೂರುಗಳಲ್ಲಿ ಗಲಭೆ ಸಂಭವಿಸಿದರೆ ಜಿಲ್ಲಾ ಕೇಂದ್ರದಿಂದ ಸುರûಾ ಪಡೆಗಳು ಹೋಗುವಾಗ ಕೈಮೀರುವ ಸಾಧ್ಯತೆ ಇರುತ್ತದೆ. ಇತ್ತೀಚೆಗೆ ಜಿಲ್ಲಾಧಿಕಾರಿಯವರ ಮೇಲೆ ಮರಳು ಮಾಫಿಯಾ ಹಲ್ಲೆ ನಡೆಸಿದ ಸಂದರ್ಭವನ್ನು ನೆನಪಿಸಿಕೊಳ್ಳ ಬಹುದು. ಒಂದು ವೇಳೆ ಅವಿಭಜಿತ ದ.ಕ. ಜಿಲ್ಲೆಯಾಗಿದ್ದರೆ ಮಂಗಳೂರಿನಿಂದ ಪೊಲೀಸ್ ಬಲದ ಸಹಾಯ ಬೇಕಿದ್ದರೆ ಕನಿಷ್ಠ ಎರಡು ಗಂಟೆ ಕಾಯಬೇಕಿತ್ತು. ಪೊಲೀಸ್ ನೇಮಕಾತಿಯಂತಹ ಸಂದರ್ಭಗಳಲ್ಲಿಯೂ ಅನುಕೂಲಕರ. ಪೊಲೀಸ್ ಠಾಣಾ ಹೊಸ ಕಟ್ಟಡ, ಸಿಬಂದಿ ವಸತಿಗೃಹ ಮೊದಲಾದ ಮೂಲಭೂತ ಸೌಕರ್ಯಗಳ ಒದಗಣೆಗೂ ಜಿಲ್ಲೆ ರಚನೆ ಸಹಕಾರಿಯಾಗಿದೆ. ಹೊಸ ಠಾಣೆಗಳನ್ನು ರಚಿಸಲೂ ಇದು ಸಹಕಾರಿಯಾಗಿದೆ.
Advertisement
ಸಾರ್ವಜನಿಕರು ದೂರುಗಳನ್ನು ನೇರವಾಗಿ ಎಸ್ಪಿಯವರಿಗೆ ನೀಡಬೇಕಾದರೆ ಹಿಂದೆ ಮಂಗಳೂರಿಗೆ ಹೋಗಬೇಕಿತ್ತು. ಈಗ ಹಾಗಲ್ಲ. ಹೆಚ್ಚೆಂದರೆ ಒಂದೆರಡು ಗಂಟೆಗಳ ಅವಧಿಯಲ್ಲಿ ಅವರು ಎಸ್ಪಿಯವರನ್ನು ಸಂಪರ್ಕಿಸಲು ಸಾಧ್ಯವಿದೆ. ಉನ್ನತಾಧಿಕಾರಿಗಳು ದೂರವಿದ್ದಷ್ಟೂ ಅವರು ಜನರಿಂದಲೂ ಸಹಜವಾಗಿ ದೂರ ಇರುತ್ತಾರೆ. ಉನ್ನತಾಧಿಕಾರಿಗಳು ಹತ್ತಿರವಿದ್ದಾಗ ಜನಸಾಮಾನ್ಯರಿಗೂ ಕಾನೂನು ವ್ಯವಸ್ಥೆ ಮೇಲೆ ನಂಬಿಕೆ ಕುದುರಲು ಸಾಧ್ಯವಾಗುತ್ತದೆ ಮತ್ತು ಕೈಕೆಳಗಿನ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಾಗ ಹೆಚ್ಚಿಗೆ ಜಾಗರೂಕತೆ ವಹಿಸುತ್ತಾರೆ.
1. ಸವಿತಾ ಹಂದೆ (25-8-1997ರಿಂದ 4-7-1998)
2. ಡಾ|ಎಂ.ಎ.ಸಲೀಂ (4-7-1998ರಿಂದ 13-6-2000)
3. ಅಮೃತ್‌ಪಾಲ್ (16-6-2000ರಿಂದ 25-7-2003)
4. ಎಸ್.ಮುರುಗನ್ (25-7-2003ರಿಂದ 10-5-2006)
5. ಡಾ|ಸುಬ್ರಹ್ಮಣ್ಯೇಶ್ವರ ರಾವ್ (29-5-2006ರಿಂದ 8-10-2007)
6. ದೇವಜ್ಯೋತಿ ರೇ (10-10-2006ರಿಂದ 14-7-2008)
7. ಪ್ರವೀಣ್ ಮಧುಕರ್ ಪವಾರ್ (14-7-2008ರಿಂದ 24-3-2011)
8. ಡಾ| ವೈ.ಎಸ್.ರವಿಕುಮಾರ್ (25-03-2011ರಿಂದ 26-1-2012)
9. ಡಾ|ಬೋರಲಿಂಗಯ್ಯ ಎಂ.ಬಿ. (27-1-2012ರಿಂದ 1-8-2014)
10. ಪಿ.ರಾಜೇಂದ್ರಪ್ರಸಾದ್ (11-8-2014ರಿಂದ 1-1-2015)
11. ಕೆ.ಅಣ್ಣಾಮಲೈ (1-1-2015ರಿಂದ 3-8-2016)
12. ಕೆ.ಟಿ. ಬಾಲಕೃಷ್ಣ (11-8-2016ರಿಂದ 10-8-2017)
13. ಡಾ| ಸಂಜೀವ ಎಂ. ಪಾಟೀಲ್ (10-8-2017ರಿಂದ)
Related Articles
Advertisement