ವಾಷಿಂಗ್ಟನ್/ಮಾಸ್ಕೋ: “ಹಲವಾರು ಖಗೋಳ ಪ್ರಯೋಗಗಳಿಗೆ ಆಶ್ರಯತಾಣವಾಗಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್‌ಎಸ್), ಪಾರ್ಶ್ವವೊಂದರಲ್ಲಿ ಬಿರುಕುಗಳು ಮೂಡಿದೆ. ಇದು ಐಎಸ್‌ಎಸ್‌ನ ಶೀಘ್ರ ಪತನಕ್ಕೆ ನಾಂದಿ ಹಾಡಲಿದೆ’ ಎಂದು ರಷ್ಯಾದ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಹೀಗಾಗಿ, ಇನ್ನೊಂದಿಷ್ಟು ವರ್ಷ ಸೇವೆ ನೀಡಬಹುದಾಗಿದ್ದ ಐಎಸ್‌ಎಸ್, 2025ರ ಹೊತ್ತಿಗೆ ಕಳಚಿ ಬೀಳಬಹುದು ಎಂದು ಅಂದಾಜಿಸಲಾಗಿದೆ.
ಜು. 30ರಂದು ಐಎಸ್‌ಎಸ್‌ಗೆ ರಷ್ಯಾದ ಗಗನನೌಕೆಯೊಂದು ಆಗಮಿಸಿತ್ತು. ಐಎಸ್‌ಎಸ್‌ನ ಡಾಕಿಂಗ್ ಪೋರ್ಟ್‌ಗೆ ಬಂದು ಜೋಡಿಸಿಕೊಂಡಿದ್ದ ಈ ಗಗನನೌಕೆಯ ಇಂಜಿನ್‌ಗಳಲ್ಲಿ ಸುಮಾರು ಮೂರು ಗಂಟೆಯ ನಂತರ ಸ್ಫೋಟ ಸಂಭವಿಸಿತು.
ಇದನ್ನೂ ಓದಿ :ತೇಜ್‌ಪಾಲ್ ಲೈಂಗಿಕ ದೌರ್ಜನ್ಯ ಪ್ರಕರಣ: ಸೆಪ್ಟೆಂಬರ್ 20ಕ್ಕೆ ವಿಚಾರಣೆ ಮುಂದೂಡಿಕೆ
ಅಚಾನಕ್ಕಾಗಿ ನಡೆದ ಈ ಘಟನೆಯಿಂದ ಐಎಸ್‌ಎಸ್ ಅನ್ನು ವಿಜ್ಞಾನಿಗಳು ಸರಿಪಡಿಸಿದರಾದರೂ, ಆ ಘಟನೆಯಾದ ನಂತರ ಐಎಸ್‌ಎಸ್ ಕಾರ್ಯಕ್ಷಮತೆಯಲ್ಲಿ ವ್ಯತ್ಯಾಸಗಳು ಕಂಡುಬಂದವು. ಇತ್ತೀಚಿನ ಅಧ್ಯಯನಗಳ ಪ್ರಕಾರ, ಐಎಸ್‌ಎಸ್‌ನ ಝೆÌಝಾx ಸರ್ವೀಸ್ ಮಾಡೆಲ್‌ನ ಮೇಲ್ಮೆ„ ಮೇಲೆ ಬಿರುಕುಗಳು ಕಾಣಿಸಿಕೊಂಡಿರುವುದು ತಿಳಿದುಬಂದಿದೆ.
ಈ ಬಗ್ಗೆ ಅಮೆರಿಕ ಬಾಹ್ಯಾಕಾಶ ಸಂಸ್ಥೆಯನ್ನು (ನಾಸಾ) ಎಚ್ಚರಿಸಿರುವ ರಷ್ಯಾದ ರಾಕೆಟ್ ಇಂಜಿನಿಯರ್ ವ್ಲಾದಿಮಿರ್ ಸೊಲೊವ್ಯೊವ್, “”ಮೇಲ್ನೋಟಕ್ಕೆ ಕಾಣಿಸುತ್ತಿರುವ ಈ ಬಿರುಕುಗಳು ಕಾಲಕ್ರಮೇಣ ಐಎಸ್‌ಎಸ್‌ನ ಉಳಿದ ಕಡೆಗೂ ಹರಡಬಹುದು. ಇದು ನಿಜಕ್ಕೂ ಬೇಸರದ ಸಂಗತಿ” ಎಂದಿದ್ದಾರೆ.
ಐಎಸ್‌ಎಸ್ ಮಹತ್ವವೇನು?
1998ರ ನ. 20ರಿಂದ ಅಸ್ತಿತ್ವದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ, ಅಮೆರಿಕ, ಐರೋಪ್ಯ ಒಕ್ಕೂಟ ಹಾಗೂ ರಷ್ಯಾ ದೇಶಗಳ ಜಂಟಿ ಯೋಜನೆಯಿದು. ಭೂಮಿಯಿಂದ ಸುಮಾರು 321 ಕಿ.ಮೀ. ದೂರದಲ್ಲಿ ತೇಲುತ್ತಿರುವ ಐಎಸ್‌ಎಸ್, ಹಲವಾರು ಪ್ರಯೋಗಗಳ ತಾಣವಾಗಿದೆ. ಇದರಲ್ಲಿ ಇಬ್ಬರು ಅಮೆರಿಕ ಖಗೋಳ ವಿಜ್ಞಾನಿಗಳು ಹಾಗೂ ರಷ್ಯಾದ ಖಗೋಳ ತಜ್ಞರು ಇದ್ದಾರೆ. ಆಗಾಗ, ಅನೇಕ ತಜ್ಞರು ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ, ವಿವಿಧ ಪ್ರಯೋಗಗಳನ್ನು ಕೈಗೊಂಡಿದ್ದರು.