Advertisement

ಸಣ್ಣ ಉದ್ಯಮಗಳು ಶುರುವಾಗಿವೆ, ಆದರೆ….

06:53 AM May 09, 2020 | mahesh |

ದೇಶದಲ್ಲಿ ಒಂದೊಂದೇ ಅತಿಸಣ್ಣ, ಸಣ್ಣ, ಮಧ್ಯಮ ಮಟ್ಟದ ಉದ್ಯಮಗಳು ಪುನಾರಂಭಗೊಳ್ಳುತ್ತಿವೆ. ಆದರೆ… ಪರಿಸ್ಥಿತಿ ಇನ್ನೂ ಸುಗಮವಾಗಿಲ್ಲ. ಉದ್ಯಮಿಗಳ ಮುಂದೆ ಸವಾಲುಗಳ ಸರಮಾಲೆಯೇ ಇದೆ. ಅದರ ಕಿರುನೋಟ ಇಲ್ಲಿದೆ.

Advertisement

ಕಾರ್ಮಿಕರೇ ಇಲ್ಲ
ಕೋವಿಡ್ ದಿಂದ ಭಯಭೀತರಾಗಿ ಕಾರ್ಮಿಕರೆಲ್ಲ ವಾಪಸ್‌ ತಮ್ಮ ಹಳ್ಳಿಗಳಿಗೆ ಹಿಂತಿರುಗಿದ್ದಾರೆ. ಬಹುತೇಕರು ಯಾವುಯಾವುದೋ ರಾಜ್ಯಗಳಿಂದ ಬಂದವರು. ಅವರೆಲ್ಲ
ಸದ್ಯಕ್ಕಂತೂ ಹಿಂತಿರುಗಿ ಬರುವ ಲಕ್ಷಣವಿಲ್ಲ. ಕಾರಣ, ಸದ್ಯ ರಾಜ್ಯಸರ್ಕಾರಗಳು ಬಡವರ, ಕಾರ್ಮಿಕರ ನೆರವಿಗೆ ನಿಂತಿವೆ. ಆದ್ದರಿಂದ ಅವರಿಗೆ ಜೀವನ ತೀರಾ ಕಷ್ಟವೇನಲ್ಲ.
ಅವರನ್ನು ಮತ್ತೆ ಇತ್ತ ಸೆಳೆಯುವುದು ಕಷ್ಟ

ವಿಪರೀತ ಹಣ ಖರ್ಚು
ಈಗ ತರಬೇತಾದ ಕಾರ್ಮಿಕರನ್ನು ಉಳಿಸಿಕೊಳ್ಳಬೇಕಾದರೆ ಹೆಚ್ಚುಹೆಚ್ಚು ಹಣ ಕೊಡಲೇಬೇಕು. ಇದು ಸಣ್ಣ ಉದ್ಯಮಗಳಿಗೆ ಆರ್ಥಿಕ ಹೊಡೆತ ನೀಡುತ್ತಿದೆ. ಇದರಿಂದ ಸಮಯದ ಮಿತಿಯಲ್ಲಿ ಕೆಲಸಗಳನ್ನು ಮುಗಿಸಲು ಆಗುತ್ತಿಲ್ಲ. ಆದ್ದರಿಂದ ಸ್ಥಳೀಯವಾಗಿಯೇ ಕಾರ್ಮಿಕರನ್ನು ಹುಡುಕಿಕೊಳ್ಳುವ ಅನಿವಾರ್ಯತೆಯಲ್ಲಿ ಉದ್ಯಮಿಗಳಿದ್ದಾರೆ.

ಸಾಗಾಟ ಇನ್ನೊಂದು ತಾಪತ್ರಯ
ಅತಿಸಣ್ಣ, ಸಣ್ಣ, ಮಧ್ಯಮ ಗಾತ್ರದ ಉದ್ಯಮಿಗಳಿಗೆ ಉತ್ಪಾದನೆ ಪುನಾರಂಭಿಸಲು ಶುರು ಮಾಡಿದ್ದರೂ, ವಸ್ತುಗಳ ಸಾಗಾಟ ಸಮಸ್ಯೆಯಾಗಿದೆ. ಮೊದಲನೆಯದಾಗಿ ವಾಹನಗಳ ಸಂಚಾರಕ್ಕೆ ನಿಬಂಧನೆಯಿದೆ. ಇನ್ನೊಂದು ಹಲವು ಕಡೆ ಪರಿಶೀಲನೆಯಿರುವುದರಿಂದ ಯಾವುದೋ ತಪ್ಪಿನ ಕಾರಣ ಹೇಳಿ, ಕಂಪನಿಯನ್ನು ತತ್ಕಾಲಕ್ಕೆ ಮುಚ್ಚಲು ಹೇಳಿದರೆ? ಈ ತಾಪತ್ರಯಗಳಿಗೆ ಅಂಜುತ್ತಿದ್ದಾರೆ.

ಜಾಮ್‌, ಸಾಸ್‌ಗೂ ಕೊರತೆ
ದಿನನಿತ್ಯ ಜನ ಬಳಸುವ ಜಾಮ್‌, ಸಾಸ್‌, ವಿವಿಧ ಹಣ್ಣಿನ ರಸಗಳು, ಪೂರಿಗಳನ್ನೂ ಪೂರೈಸಲು ಸಾಧ್ಯವಾಗುತ್ತಿಲ್ಲ.  ಇವನ್ನು ತಯಾರಿಸಲು ಬೇಕಾದ ಕೆಲಸಗಾರರು, ವಸ್ತುಗಳು ಸಿಗುತ್ತಿಲ್ಲ. ಜೊತೆಗೆ ಅಗತ್ಯ ಹಣವೂ ಇಲ್ಲ. ಮುಂದಿನ ದಿನಗಳಲ್ಲಿ ಈ ಉತ್ಪನ್ನಗಳಿಗೆ ಬೇಡಿಕೆಯಾದರೂ, ಪೂರೈಕೆ ಕಡಿಮೆಯಾಗಬಹುದು ಎಂದು ಊಹಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next