Advertisement

ಕೀಜುಗ,ಕಲಿಂಗ ಹಕ್ಕಿ

03:04 PM Dec 02, 2017 | |



Advertisement

ಈ ಹಕ್ಕಿ ಹೋರಾಡುವ ಸ್ವಭಾವ ಹೊಂದಿದೆ. ಕಾಡಿನಲ್ಲಿ ಒಂಟಿಯಾಗಿರುವುದು. ಕೆಲವೊಮ್ಮೆ ಜೋಡಿಯಾಗಿಯೂ ಕಾಣುತ್ತದೆ. ತಾನಿರುವ ಜಾಗದಲ್ಲಿತನಗೆ ಬೇಕಾದ ಆಹಾರ ವಿಫ‌ುಲವಾಗಿದ್ದರೆ ಇತರ ಹಕ್ಕಿ ಆಕಡೆ ಬರದಂತೆ ಆಕ್ರಮಣ ಮಾಡಿ ಓಡಿಸಿ  ತನ್ನ ಅಧಿಪತ್ಯ ಸಾಧಿಸುತ್ತದೆ. 

ತಿಳಿ ಕಂದುಬಣ್ಣದ ಹಕ್ಕಿ. ತಿಳಿಕಂದುಬಣ್ಣದ ಬೆನ್ನು, ರೆಕ್ಕೆಯ ಬದಿಯಲ್ಲಿ , ಬಾಲದ ಪುಕ್ಕದ ಬದಿಯಲ್ಲಿ ಕಪ್ಪು ಬಣ್ಣ ಇರುತ್ತದೆ. ಕಣ್ಣಿನ ಸುತ್ತ, ಕುತ್ತಿಗೆಯವರೆಗೆಕಪ್ಪು ಬಣ್ಣಎದ್ದುಕಾಣುತ್ತದೆ.  ಕಲಿಂಗ ಅಥವಾ ಕೀಜುಗದ ಲಕ್ಷಣ  ಕ್ರೀರೀ, ಕ್ರೀರೀ ಎಂದು ಕೂಗುವುದರಿಂದ ಇದಕ್ಕೆ ಕೀಜುಗ ಎಂಬ ಅನ್ವರ್ಥಕ ಹೆಸರು ಬಂದಿದೆ. ಇದು 19 ಸೆಂ.ಮೀ ನಷ್ಟು ಗಾತ್ರದ ಚಿಕ್ಕ ಹಕ್ಕಿ. 

 ಕೊಕ್ಕು ಗಿಡುಗನ ಕೊಕ್ಕಿನಂತೆ ತುದಿಯಲ್ಲಿ ಕೆಳಮುಖವಾಗಿ ಬಾಗಿದೆ. ಹೆಣ್ಣು ಗಂಡಿನಲ್ಲಿ ವ್ಯತ್ಯಾಸವಿಲ್ಲ. ಹೊಟ್ಟೆ ಭಾಗ ಅಚ್ಚಬಿಳಿ ಇದ್ದು , ತಿಳಿ ಸ್ವಲ್ಪದಟ್ಟ ಬಣ್ಣದ ಅರ್ಧ ವರ್ತುಲಾಕಾರದ ಗೆರೆಗಳು ಎದೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಕಾಣುತ್ತವೆ.  ಕುರುಚಲು ಕಾಡು, ಹೊಲ ಗದ್ದೆಗಳ ಸಮೀಪ, ಬೇಲಿಗಳ ಮಧ್ಯೆ ಇಲ್ಲವೇ ತಂತಿಗಳ ಮೇಲೆ 

ಕುಳಿತು ಕರ್ಕಶವಾಗಿ ಕ್ರೀಕ್ರೀ ಎಂದು ಕೂಗುತ್ತಾಇರುತ್ತದೆ. ಮಿಕ್ಕ  ಕೀಜಗಗಳಂತೆ ಬಂಜರು ಪ್ರದೇಶದಲ್ಲಿ ಕಾಣುವುದಿಲ್ಲ. 

Advertisement

ಮರಿ ಮಾಡುವ ಸಮಯದಲ್ಲಿ ಸುಶ್ರಾವ್ಯವಾಗಿಕೂಗುತ್ತದೆ. ಮರಿಮಾಡುವ ಸಮಯದಲ್ಲಿ ಸಂಗಾತಿಯನ್ನು ಕರೆಯಲು ನಾನಾ ವಿಧದಲ್ಲಿ ಕೂಗುತ್ತದೆ. ಇಂಪಾಗಿ ಕೂಗುವ ಮೂಲಕ ಹೆಣ್ಣನ್ನು ಆಕರ್ಷಿಸುತ್ತದೆ. 

ಕೆಲವೊಮ್ಮೆ ಇತರ ಹಕ್ಕಿಗಳ ಕೂಗನ್ನು ಅನುಕರಿಸುವುದು ಉಂಟು. ಹಾಗೆ ಅನುಕರಣೆ ಮಾಡುವಾಗ ಬೇರೆ ಹಕ್ಕಿಗಳ ಕೂಗನ್ನು ಸ್ವಲ್ಪವೂ  ವ್ಯತ್ಯಾಸ ಇಲ್ಲದೇ ಅನುಕರಿಸುವುದೂ  ಇದರ ವಿಶೇಷತೆ. ಇದು ತುಂಬಾ ಜಂಬದ ಹಕ್ಕಿ. ಪಾಕಿಸ್ಥಾನ, ಶ್ರೀಲಂಕಾ ಬರ್ಮಾದಲ್ಲೂ ಇದೆ. ಭಾರತದ ತುಂಬೆಲ್ಲಾ ಈ ಪುಟ್ಟ ಹಕ್ಕಿ 
ಕಾಣಸಿಗುತ್ತದೆ. 

ತೇವ ಅರಣ್ಯ ಪರಿಸರ ಇವುಗಳಿಗೆ ಇಷ್ಟ. ಹಸಿರೆಲೆಯ ಅರಣ್ಯ ಪ್ರದೇಶದಲ್ಲಿ ಇವುಗಳಿಗೆ ಫ‌ುಲವಾಗಿ ಆಹಾರ ದೊರೆಯುವುದರಿಂದ ಅಲ್ಲಿ ಹೆಚ್ಚು ಸಮಯ ಕಳೆಯುತ್ತವೆ. ಹುಲ್ಲಿನ ಮಿಡತೆ, ಚಿಕ್ಕಹಲ್ಲಿ, ಹಾವು, ಕಪ್ಪೆ ,ಕ್ರಿಮಿಕೀಟ, ಹಕ್ಕಿ ಮರಿಗಳನ್ನು ಹಿಡಿದು ತಿನ್ನುತ್ತವೆ. ತನ್ನ ಬೇಟೆಯನ್ನು ಬಲವಾಗಿ ಹಿಡಿದು ಮರಗಳ ಟೊಂಗೆಗಳಿಗೋ ಇಲ್ಲವೇ ತಾನು ಕುಳಿತ ಗೂಟ, ತಂತಿಗಳಿಗೆ ಬಡಿದು ಸಾಯಿಸುವುದು ಇದರ ಗುಣ. ಸಾಯಿಸಿ ತಿಂದು ಉಳಿದ ಭಾಗಗಳನ್ನು ಮುಳ್ಳಿಗೆ ಚುಚ್ಚಿ ಇರಿಸುತ್ತದೆ. ಇದಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಮುಂದೆ ತಿನ್ನಲು ಆಹಾರ ಸಂಗ್ರಹವೋ ಅಥವಾ ಅದನ್ನು ತಿನ್ನಲು ಬರುವ ಕ್ರಿಮಿ, ಹಾವು, ಇಲಿಗಳನ್ನು ಆಕರ್ಷಿಸಲೋ ಎಂಬುದರ ಕುರಿತು ಅಧ್ಯಯನ ನಡೆಯಬೇಕಾಗಿದೆ. 

ಈ ಹಕ್ಕಿ ಹೋರಾಡುವ ಸ್ವಭಾವ ಹೊಂದಿದೆ. ಕಾಡಿನಲ್ಲಿ ಒಂಟಿಯಾಗಿರುವುದು. ಕೆಲವೊಮ್ಮೆ ಜೋಡಿಯಾಗಿಯೂ ಕಾಣುತ್ತದೆ. ತಾನಿರುವ ಜಾಗದಲ್ಲಿತನಗೆ ಬೇಕಾದ ಆಹಾರ ವಿಫ‌ುಲವಾಗಿದ್ದರೆ ಇತರ ಹಕ್ಕಿ ಆಕಡೆ ಬರದಂತೆ ಆಕ್ರಮಣ ಮಾಡಿ ಓಡಿಸಿ  ತನ್ನ ಅಧಿಪತ್ಯ ಸಾಧಿಸುತ್ತದೆ. 

ಮರದ ಟೊಂಗೆಗಳ ತುದಿಯಲ್ಲಿ ಕುಳಿತು ತನ್ನಆಹಾರಕ್ಕಾಗಿ ಹೊಂಚು ಹಾಕುತ್ತಾ,ನಿಖರ ಲೆಕ್ಕಾಚಾರ ಮಾಡಿ ಮೇಲಿಂದ ಎರಗಿ ಬೇಟೆ ಆಡುವುದರಲ್ಲಿ ಇದು ನಿಪುಣ. ಕೆಲವೊಮ್ಮೆ ಬೇರೆ ಹಕ್ಕಿಯ ಬೇಟೆಯನ್ನು ಕಸಿದುಕೊಂಡು ತಿನ್ನುವುದರಿಂದ ದರೋಡೆಕೋರ ಪಕ್ಷಿ$ಎಂದೂ ಇದನ್ನು ಕರೆಯುವುದುಂಟು. ಒಮ್ಮೊಮ್ಮೆ ಪ್ರಾಣಿ, ಹಕ್ಕಿಗಳನ್ನು ಬೇಟೆಯಾಡಿ ಅದರ ಮೆದುಳನ್ನು ಮಾತ್ರ ತಿಂದು ಉಳಿದ ಭಾಗವನ್ನು ಮುಳ್ಳಿಗೆ ಚುಚ್ಚಿ ಇಡುತ್ತದೆ.  ಏಪ್ರಿಲ್‌ನಿಂದ ನವೆಂಬರ್‌ ಮರಿಮಾಡುವ ಸಮಯ. ಜಾಲಿ, ಹಣ್ಣು ಸಂಪಿಗೆ ಕರಜಲ ಮುಂತಾದ ಮುಳ್ಳಿನ ಗಿಡವಲ್ಲಿ ತನ್ನಗೂಡುಕಟ್ಟುತ್ತದೆ.  

 ಸಾಮಾನ್ಯ ಮಧ್ಯಮ ಎತ್ತರದ ಪ್ರದೇಶ ಇದರಗೂಡಿಗೆ ಪ್ರಶಸ್ಥಜಾಗ ಎನಿಸುತ್ತದೆ. ಮರಿಗಳ ರಕ್ಷಣೆಗಾಗಿ ಇಂಥ ಮುಳ್ಳಿನ ಗಿಡಗಳ ಸಂದಿಯಲ್ಲಿ ಗೂಡು ನಿರ್ಮಿಸಲು ಆರಿಸಿರಬಹುದು ಎನಿಸುತ್ತದೆ. ಇದರಂತೆ ಬೂದು ಬಣ್ಣದ ಪಿಕಳಾರ ಸಹ ಮುಳ್ಳಿನ ಗಿಡದಲ್ಲಿ ತನ್ನಗೂಡು ನಿರ್ಮಿಸುತ್ತದೆ. ಅದುಗೂಡನ್ನ ಬಟ್ಟಲಿ ಆಕಾರದಲ್ಲಿ ಕಟ್ಟುವುದು ಇಂಗ್ಲೀಷಿನ ಎಲ್‌ ಆಕಾರದ ಟೊಂಗೆಗಳಲ್ಲಿ ಇದು ಗೂಡುಕಟ್ಟುತ್ತದೆ. ಆದರೆ ಕೀಜುಗ ಕವಲಿನಲ್ಲಿ ತನ್ನ ಗೂಡುಕಟ್ಟುವುದು. 

ಪಿ. ವಿ. ಭಟ್‌ ಮೂರೂರು  

Advertisement

Udayavani is now on Telegram. Click here to join our channel and stay updated with the latest news.

Next