Advertisement

Germany: ಅಲ್ಪ ಪ್ರಮಾಣದ ಗಾಂಜಾ ಬಳಕೆ ಜರ್ಮನಿ ಅನುಮತಿ 

09:18 PM Aug 16, 2023 | Team Udayavani |

ಬರ್ಲಿನ್‌: ಮಾದಕವಸ್ತುಗಳ ಕಳ್ಳಸಾಗಣೆ ಮತ್ತು ಅಕ್ರಮ ಬಳಕೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಗಾಂಜಾ ಮಾರಾಟದ ಮೇಲಿನ ನಿಯಮಗಳನ್ನು ಸರಾಗಗೊಳಿಸಲು ಜರ್ಮನಿ ನಿರ್ಧರಿಸಿದೆ. ಅಲ್ಪಪ್ರಮಾಣದ ಗಾಂಜಾ ಬಳಕೆಗೆ ಅನುಮತಿಸುವ ಯೋಜನೆಯೊಂದಕ್ಕೆ ಅನುಮೋದನೆ ನೀಡಲು ಅಲ್ಲಿನ ಸಚಿವ ಸಂಪುಟ ಸಜ್ಜುಗೊಂಡಿದೆ.

Advertisement

ಆರೋಗ್ಯ ಸಚಿವ ಕಾರ್ಲ್ ಲೌಟರ್‌ ಬಾಕ್‌ ಈ ಕುರಿತಂತೆ ಮಾಹಿತಿ ನೀಡಿದ್ದು, ಪ್ರಸ್ತಾವಿತ ಯೋಜನೆಯು ದೇಶದ 18 ವರ್ಷ ಮೇಲ್ಪಟ್ಟವರು ಮನರಂಜನಾ ಉದ್ದೇಶಗಳಿಗಾಗಿ ತಲಾ 25 ಗ್ರಾಂ ಗಾಂಜಾವನ್ನು ಖರೀದಿಸಲು ಹಾಗೂ ಸ್ವತಃ ಅವರೇ ಮೂರು ಗಾಂಜಾ ಗಿಡಗಳನ್ನು ಬೆಳೆಯಲು ಅವಕಾಶ ಕಲ್ಪಿಸುತ್ತದೆ. ಅಲ್ಲದೇ, ಗಾಂಜಾ ಖರೀದಿಗಾಗಿ ಕ್ಲಬ್‌ಗಳಿಗೂ ಸೇರಬಹುದಾಗಿದ್ದು, ಈ ಕ್ಲಬ್‌ 500 ಸದಸ್ಯರನ್ನು ಮಾತ್ರ ಹೊಂದಲು ಅವಕಾಶ ನೀಡಲಾಗಿದೆ. ಕ್ಲಬ್‌ಗಳಿಂದ ಗಾಂಜಾ ಖರೀದಿಸುವವರಿಗೆ ತಿಂಗಳಿಗೆ 50 ಗ್ರಾಂ ಖರೀದಿಗೆ ಮಾತ್ರ ಅವಕಾಶ ನೀಡಲಾಗಿದ್ದು, 21 ವರ್ಷ ಒಳಗಿನ ವಯಸ್ಸಿನವರಿಗೆ ಈ ಮಿತಿ 30 ಗ್ರಾಂ ಆಗಿರಲಿದೆ ಎಂದಿದ್ದಾರೆ. ಗಾಂಜಾ ಮಾರಾಟ ಮತ್ತು ಸ್ವಾಧೀನಗಳ ಮೇಲಿನ ನಿಯಮಗಳನ್ನು ಉದಾರಗೊಳಿಸಲು ಈ ಯೋಜನೆ ಪ್ರಸ್ತಾಪಿಸಿದ್ದು, ಕ್ಯಾಬಿನೆಟ್‌ ಅನುಮೋದನೆ ಬಳಿಕ ಸಂಸತ್‌ ಅನುಮೋದನೆಗೆ ಕಳುಹಿಸಲಾಗುವುದು ಎಂದೂ ಮಾಹಿತಿ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next